Advertisement
ಸೆಮಿಫೈನಲ್‌ನಲ್ಲಿ ಪ್ರಬಲ ಬ್ರೆಜಿಲನ್ನು ಸೋಲಿಸಿರುವ ಇಂಗ್ಲೆಂಡ್ ಮತ್ತು ಮಾಲಿಯನ್ನು ಸೋಲಿಸಿರುವ ಸ್ಪೇನ್ ತಂಡಗಳು ಫೈನಲ್‌ನಲ್ಲಿ ಖಡಾಖಡಿ ಹೋರಾಟಕ್ಕೆ ಸಜ್ಜಾಗಿವೆ. ಇತ್ತಂಡಗಳೂ ಪ್ರಬಲವಾಗಿರುವುದರಿಂದ ರೋಚಕ ಫೈನಲ್ ಹಣಾಹಣಿಯೊಂದನ್ನು ಪ್ರೇಕ್ಷಕರು ನಿರೀಕ್ಷಿಸಬಹುದು.
Related Articles
Advertisement
ಹ್ಯಾಟ್ರಿಕ್‌ನತ್ತ ಇಂಗ್ಲೆಂಡ್: ಮತ್ತೂಂದು ಇಂಗ್ಲೆಂಡ್ ಈ ವರ್ಷ ಮತ್ತೂಂದು ಅದ್ಭುತ ನಿರ್ಮಿಸಲು ಕಾದು ಕುಳಿತಿದೆ. ಇಂಗ್ಲೆಂಡ್‌ನ 20 ವಯೋಮಿತಿಯೊಳಗಿನ ತಂಡ ಈ ವರ್ಷ ಕೊರಿಯಾದಲ್ಲಿ ವಿಶ್ವಕಪ್ ಜಯಿಸಿತ್ತು. 19 ವಯೋಮಿತಿಯೊಳಗಿನ ತಂಡ ಯೂರೋಪ್ ಚಾಂಪಿಯನ್ ಶಿಪ್ ಗೆದ್ದಿತ್ತು. ಈಗ 17 ವಯೋಮಿತಿಯೊಳಗಿನ ತಂಡ ಗೆದ್ದರೆ ಅದಕ್ಕೆ ಹ್ಯಾಟ್ರಿಕ್ ವಿಜಯವಾಗಲಿದೆ.
ಕೂಟದಲ್ಲಿ ಎರಡೂ ತಂಡಗಳು ಭರ್ಜರಿ ಹೋರಾಟ ನೀಡಿವೆ. ಇಂಗ್ಲೆಂಡ್ ತಂಡ ಇಲ್ಲಿಯವರೆಗೆ 18 ಗೋಲು ಬಾರಿಸಿದ್ದರೆ, ಸ್ಪೇನ್ 15 ಗೋಲು ಬಾರಿಸಿದೆ. ಫೈನಲ್‌ನಲ್ಲೂ ಗೋಲಿನ ಹಬ್ಬ ಮುಂದುವರಿಯುವ ನಿರೀಕ್ಷೆಯಿದೆ.
ಫೈನಲ್‌ಗೆ 60 ಸಾವಿರ ಪ್ರೇಕ್ಷಕರು?ಕೋಲ್ಕತಾದ ಸಾಲ್ಟ್ಲೇಕ್ ಮೈದಾನದಲ್ಲಿ ನಡೆಯಲಿರುವ ಅಂತಿಮ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿ ಪೂರ್ತಿ ಭರ್ತಿಯಾಗುವ ಸಾಧ್ಯತೆಯಿದೆ. 66000 ಪ್ರೇಕ್ಷಕ ಸಾಮರ್ಥ್ಯದ ಮೈದಾನದ ಅಷ್ಟೂ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಹೇಳಲಾಗಿದೆ. ಎಲ್ಲ ಲೆಕ್ಕಾಚಾರದ ಪ್ರಕಾರ ನಡೆದರೆ ಕನಿಷ್ಠ 60 ಸಾವಿರ ಪ್ರೇಕ್ಷಕರಂತೂ ಮೈದಾನದಲ್ಲಿ ನೆರೆಯುವ ಸ್ಪಷ್ಟ ಭರವಸೆಯಿದೆ.