Advertisement

ಫಿಫಾ ಫ‌ುಟ್‌ಬಾಲ್‌ ಶ್ರೇಯಾಂಕ: 105ನೇ ಸ್ಥಾನಕ್ಕೆ ಜಿಗಿದ ಭಾರತ

06:20 AM Oct 17, 2017 | |

ನವದೆಹಲಿ: ನೂತನ ಫಿಫಾ ಶ್ರೇಯಾಂಕ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.ಭಾರತ ಫ‌ುಟ್ಬಾಲ್‌ ತಂಡ ಎರಡು ಸ್ಥಾನ ಜಿಗಿಯುವ ಮೂಲಕ 105ನೇ ಶ್ರೇಯಾಂಕ ಪಡೆದಿದೆ. 

Advertisement

ಇದಕ್ಕೂ ಮುನ್ನ ಕಳೆದ ತಿಂಗಳಲ್ಲಿ ಬಿಡುಗಡೆಯಾದ ಶ್ರೇಯಾಂಕದಲ್ಲಿ ಭಾರತ 107ನೇ ಸ್ಥಾನ ಪಡೆದಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಭಾರತ 4-1 ರಿಂದ ಮಕಾವ್‌ ತಂಡವನ್ನು ಸೋಲಿಸಿ 2019ರ ಏಷ್ಯಾಕಪ್‌ಗೆ ಅರ್ಹತೆ ಪಡೆದಿದೆ. ಇದರಿಂದಾಗಿ ಭಾರತ 2 ಸ್ಥಾನ ಜಿಗಿಯುವಲ್ಲಿ ಯಶಸ್ವಿಯಾಗಿದೆ. ಭಾರತ ಸದ್ಯ ಒಟ್ಟು 328 ಅಂಕವನ್ನು ಪಡೆದಿದೆ. ಕಳೆದ ಜುಲೈನಲ್ಲಿ ಭಾರತ 96ನೇ ಶ್ರೇಯಾಂಕ ಪಡೆದಿತ್ತು. ಇದು 2 ದಶಕದ ನಂತರ ಭಾರತಕ್ಕೆ ಸಿಕ್ಕಿ ಶ್ರೇಷ್ಠ ಶ್ರೇಯಾಂಕವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next