Advertisement
ಡಾರ್ಜಿಲಿಂಗ್ ನಗರವನ್ನೀಗ ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಪಾಲ್ಗೊಳ್ಳುವ 32 ದೇಶಗಳ ಧ್ವಜಗಳೊಂದಿಗೆ ಸಿಂಗರಿ ಸಲಾಗಿದೆ. ಇಲ್ಲಿನ ಸೇಂಟ್ ಜೋಸೆಫ್ ಮತ್ತು ನಾರ್ತ್ ಪಾಯಿಂಟ್ ಸ್ಕೂಲ್‌ನ ಹಳೆಯ ವಿದ್ಯಾರ್ಥಿಗಳು, ಸರ ಕಾರೇತರ ಸಂಘಟನೆಗಳು ಇಡೀ ನಗರವನ್ನು ಫುಟ್‌ಬಾಲ್‌ವುಯಗೊಳಿಸುವ ಕಾಯಕಕ್ಕೆ ಮುಂದಾಗಿವೆ. ಶನಿವಾರ ಬೃಹತ್ ಫುಟ್‌ಬಾಲ್ ರ್ಯಾಲಿಯೊಂದನ್ನು ಸಂಘಟಿಸುವ ಮೂಲಕ ಡಾರ್ಜಿಲಿಂಗ್‌ಗೆ ವಿಶ್ವಕಪ್ ಸಿಂಗಾರದ ಅಧಿಕೃತ ಮುದ್ರೆ ಬೀಳಲಿದೆ.
ಈ ಕಾರ್ಯಕ್ರಮದಲ್ಲಿ ಸಂಗ್ರಹಗೊಂಡ ಮೊತ್ತವನ್ನು “ಕ್ಲಿನಿಕ್ ಆನ್ ವೀಲ್ಸ್’ ಯೋಜನೆಯಡಿ ಗ್ರಾಮೀಣ ಪ್ರದೇಶದ ದುರ್ಗಮ ಸ್ಥಳಗಳಲ್ಲಿ ವಾಸಿಸುವ ಜನರ ವೈದ್ಯಕೀಯ ಸವಲತ್ತಿಗೆ ಬಳಸಲಾಗುವುದು ಕಳೆದ ವರ್ಷ 104 ದಿನಗಳ ಮುಷ್ಕರ ಕಂಡ ಬಳಿಕ ಡಾರ್ಜಿ ಲಿಂಗ್‌ನ ಪ್ರವಾಸೋದ್ಯಮಕ್ಕೆ ಭಾರೀ ಹಿನ್ನಡೆಯಾಗಿದೆ. ಈ ಕೊರತೆಯನ್ನು ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿ ನೀಗಿಸಿದರೆ ಇದಕ್ಕಿಂತ ಹೆಮ್ಮೆಯ ಸಂಗತಿ ಬೇರೇನಿದೆ?!
Related Articles
35 ಸಾವಿರ ಆಸನ ಕಡ್ಡಾಯ!
ವಿಶ್ವಕಪ್ ಫುಟ್‌ಬಾಲ್ ಸಂದರ್ಭದಲ್ಲಿ ಆತಿಥೇಯ ರಾಷ್ಟ್ರ ಫಿಫಾದ ಒಂದು ನಿಯಮವನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಅದೆಂದರೆ, ವಿಶ್ವಕಪ್ ಪಂದ್ಯಗಳು ನಡೆಯುವ ಸ್ಟೇಡಿಯಂನಲ್ಲಿ 35 ಸಾವಿರ ಆಸನ ವ್ಯವಸ್ಥೆ ಇರಲೇಬೇಕು! ಇಲ್ಲವಾದರೆ? ಅಷ್ಟೊಂದು ಆಸನಗಳಿಗೆ ವ್ಯವಸ್ಥೆ ಮಾಡಬೇಕು. ಅಷ್ಟೊಂದು ಸಂಖ್ಯೆಯ ವೀಕ್ಷಕರು ಸ್ಟೇಡಿಯಂಗೆ ಆಗಮಿಸುತ್ತಾರೋ ಇಲ್ಲವೋ ಬೇರೆ ಪ್ರಶ್ನೆ. ಆದರೆ 35 ಸಾವಿರ ಆಸನ ಮಾತ್ರ ಕಡ್ಡಾಯ!
Advertisement
ಈ ಬಾರಿಯ 12 ಸ್ಟೇಡಿಯಂಗಳಲ್ಲಿ ಒಂದು ಮಾತ್ರ ಇದಕ್ಕೆ ಅಪವಾದವಾಗಿತ್ತು. “ಎಕಟೆರಿನಬರ್ಗ್ ಅರೇನಾ’ದಲ್ಲಿ 27 ಸಾವಿರ ಆಸನ ವ್ಯವಸ್ಥೆಯಷ್ಟೇ ಇತ್ತು. ಇದನ್ನು ಹೆಚ್ಚಿಸಲಿಕ್ಕೂ ಅಲ್ಲಿ ಆಸ್ಪದವಿರಲಿಲ್ಲ. ಇದು 1953-57ರ ನಡುವಿನ ಅವಧಿಯಲ್ಲಿ ನಿರ್ಮಿಸಲಾದ ಪುರಾತನ ಸ್ಟೇಡಿಯಂ ಆಗಿತ್ತು. ಕೊನೆಗೆ ಸ್ಟೇಡಿಯಂನ ಹೊರಗಡೆ, ಎರಡೂ ಕಡೆಯ ಗೋಲುಪಟ್ಟಿಯ ಹಿಂದೆ ತಾತ್ಕಾಲಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯವಾಗಿ ಈ ಜಾಗದಲ್ಲಿ ಕುಳಿತು ಯಾರೂ ಪಂದ್ಯವನ್ನು ವೀಕ್ಷಿಸುವುದಿಲ್ಲ. ಆದರೇನಂತೆ, ಇಲ್ಲಿನ ಆಸನಗಳ ಸಂಖ್ಯೆ ಈಗ 45 ಸಾವಿರಕ್ಕೆ ಏರಿದೆ. ಈ ಸ್ಟೇಡಿಯಂನಲ್ಲಿ ಗ್ರೂಪ್ ಹಂತದ 4 ಪಂದ್ಯಗಳು ನಡೆಯಲಿದ್ದು, ಇದು ಮುಗಿದ ಕೂಡಲೇ ಈ ತಾತ್ಕಾಲಿಕ ಆಸನಗಳನ್ನು ತೆರವುಗೊಳಿಸಲಾಗುವುದು!