ರೋಣ: ಗ್ರಾಮೀಣ ಪ್ರದೇಶದಲ್ಲಿನ ಬಹುಗ್ರಾಮ ಕುಡಿವ ನೀರಿನ ಯೋಜನೆ ವಿಸ್ತರಿಸಿ ಪಟ್ಟಣದ ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಮುಂದಾಗಬೇಕು. ಇಲ್ಲವಾದಲ್ಲಿ ಮಹಿಳಾ ರೈತ ಸಂಘದಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತ ಮಹಿಳಾ ಸಂಘದ ರಾಜ್ಯ ಉಪಾಧ್ಯಕ್ಷೆ ಲೀಲಾವತಿ ಚಿತ್ರಗಾರ ಎಚ್ಚರಿಸಿದರು.
ರೈತ ಮಹಿಳಾ ಸಂಘದ ಉಪಾಧ್ಯಕ್ಷೆ ಮೀನಾಕ್ಷಿ ಬಸನಗೌಡ್ರ, ಸುಮಂಗಲಾ ವಕ್ರಾಣಿ, ಕವಿತಾ ಹಿರೇಮಠ, ಶಾರದಾ ಸಂಗನಾಳ, ಮಲ್ಲಮ್ಮ ಜಗ್ಗಲ, ವರದಾ ವೀರಕ್ತಮಠ, ರುದ್ರಮ್ಮ ಸೊಬರದ, ರೇಣುಕಾ ಕಡಿವಾಲ, ಮಲ್ಲಮ್ಮ ಗದಗಿನ, ಗೀತಾ ಕುರಿ, ಅಂಬವ್ವ ಚಿತ್ರಗಾರ ಸೇರಿದಂತೆ ಅನೇಕರು ಇದ್ದರು.
Advertisement
ಪಟ್ಟಣದ ರೈತ ಸಂಘದ ಕಾರ್ಯಾಲಯದಲ್ಲಿ ಮಹಿಳಾ ಸದಸ್ಯರ ಸಭೆ ನಡೆಸಿ ಅವರು ಮಾತನಾಡಿದರು.ಪಟ್ಟಣದಲ್ಲಿ ಸದ್ಯ ನೀರಿನ ಸಮಸ್ಯೆಯಿದ್ದು, ವಾರ, ಹದಿನೈದು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ಅವುಗಳು ಸಮರ್ಪಕ ಪೂರೈಕೆಯಾಗುತ್ತಿಲ್ಲ. ಇದರಿಂದ ಜನ, ಜಾನುವಾರುಗಳಿಗೆ ನೀರು ಸಾಕಾಗುತ್ತಿಲ್ಲ. ನಿತ್ಯವೂ ನೀರಿಗಾಗಿ ಪರದಾಡುವಂತ ಪರಿಸ್ಥಿತಿಯಿದೆ. ಮಹಿಳೆಯರು ಮನೆ ಕೆಲಸ, ಕೂಲಿ ಕೆಲಸ ಬಿಟ್ಟು ನೀರಿಗಾಗಿ ಕಾಯುವಂತಾಗಿದೆ. ಪಟ್ಟಣವು ಅನೇಕ ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದೆ. ಅಂತರ್ಜಲ ಕುಸಿತದಿಂದ ಕೊಳೆವೆಬಾವಿ ಜಲ ಆಳಕ್ಕಿಳಿದಿದ್ದು, ಈ ಮೂಲಕ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಪ್ರತಿವರ್ಷ ಬೇಸಿಗೆಯಲ್ಲಂತೂ ನೀರಿನ ಸಮಸ್ಯೆ ಹೇಳತೀರದಾಗಿದೆ. ಇದಕ್ಕಾಗಿ ರೈತರು, ರೈತ ಮಹಿಳೆಯರು, ವ್ಯಾಪಾರಸ್ಥರು ಬೀದಿಗಿಳಿದು ಹೋರಾಟ ಮಾಡುತ್ತಲೆ ಬರಲಾಗುತ್ತಿದೆ. ಆದರೂ ಶಾಶ್ವತ ಪರಿಹಾರ ಮಾತ್ರ ಈವರೆಗೂ ಸಿಕ್ಕಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಪಟ್ಟಣದ ಬಹು ವರ್ಷದ ಬೇಡಿಕೆಯಾದ ನೀರಿನ ಸಮಸ್ಯೆ ನಿವಾರಣೆಗೆ ಮುಂದಾಗಬೇಕು. ಈ ದಿಶೆಯಲ್ಲಿ ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿನ ಬಹು ಗ್ರಾಮ ಕುಡಿವ ನೀರಿನ ಯೋಜನೆಯನ್ನು ರೋಣ ಪಟ್ಟಣಕ್ಕೂ ವಿಸ್ತರಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಉಗ್ರ ಪ್ರತಿಭಟನೆ ಎಚ್ಚರಿಕೆ
ಪುರಸಭೆ ಸದಸ್ಯರು ನೀರಿಗಾಗಿ ಮೇ 14ರಂದು ಹಮ್ಮಿಕೊಂಡ ಧರಣಿ ಸತ್ಯಾಗ್ರಹಕ್ಕೆ ರೈತ ಮಹಿಳಾ ಸಂಘದಿಂದ ಸಂಪೂರ್ಣ ಬೆಂಬಲವಿದ್ದು, ನಾವು ಸಹ ನಿರಂತರ ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ. ಜೊತೆಗೆ ಮನೆಯಲ್ಲಿದ್ದ ಖಾಲಿ ಕೊಡ, ಎತ್ತು ಚಕ್ಕಡಿ ಸಮೇತ ಬೀದಿಗಿಳಿದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಈಗಾಗಲೇ ಗ್ರಾಮೀಣ ಪ್ರದೇಶದ ಬಹುಗ್ರಾಮ ಕುಡಿವ ನೀರಿನ ಯೋಜನೆಯನ್ನು ಗಜೇಂದ್ರಗಡ ಪಟ್ಟಣಕ್ಕೆ ವಿಸ್ತರಿಸಿದ್ದು, ಅದರಂತೆ ರೋಣ ಪಟ್ಟಣಕ್ಕೂ ವಿಸ್ತರಿಸಬೇಕು. ಕೂಡಲೇ ರೋಣ ಜನತೆಯ ನೀರಿನ ಬೇಡಿಕೆ ಈಡೇರಿಸುವಲ್ಲಿ ಜಿಲ್ಲಾಡಳಿತ ಗಮನ ಹರಿಸಬೇಕು. ಇಲ್ಲವಾದಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ರೈತ ಮಹಿಳಾ ಸಂಘದ ಉಪಾಧ್ಯಕ್ಷೆ ಲೀಲಾವತಿ ಚಿತ್ರಗಾರ ಎಚ್ಚರಿಸಿದರು.