Advertisement

ಕ್ಷೇತ್ರಗಳ ವಿಂಗಡಣೆ; ಚಿಗುರಿದ ಕನಸು

04:50 PM Mar 29, 2021 | Team Udayavani |

ಹಿರೇಕೆರೂರ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡಣೆಯಿಂದ ತಾಲೂಕಿನಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ನೂತನವಾಗಿ ರಟ್ಟಿಹಳ್ಳಿ ತಾಲೂಕು ರಚನೆಯಾಗಿದ್ದರಿಂದ ತಾಲೂಕಿನಲ್ಲಿದ್ದ ಕೆಲವು ಜಿಪಂ ಹಾಗೂ ತಾಪಂ ಕ್ಷೇತ್ರಗಳು ವಿಂಗಡಣೆಯಾಗಿದ್ದು, ರಾಜಕೀಯ ಭವಿಷ್ಯದ ಕನಸು ಕಾಣುತ್ತಿದ್ದವರಲ್ಲಿ ಕುತೂಹಲ ಮೂಡಿಸಿದೆ.

Advertisement

ಕಳೆದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ವೇಳೆ ಹಿರೇಕೆರೂರ-ರಟ್ಟೀಹಳ್ಳಿ ತಾಲೂಕು ಅಖಂಡವಾಗಿತ್ತು. ಆಗ 20 ತಾಲೂಕು ಪಂಚಾಯಿತಿ ಕ್ಷೇತ್ರಗಳು ಹಾಗೂ 6 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನೊಳ ಗೊಂಡಿತ್ತು. ಈಗ ತಾಲೂಕು ವಿಭಜನೆಯಿಂದ ಹಿರೇಕೆರೂರ ಹಾಗೂ ರಟ್ಟೀಹಳ್ಳಿ ತಾಲೂಕುಗಳಿಗೆ ತಲಾ 3 ಜಿಪಂ ಕ್ಷೇತ್ರಗಳು ದೊರಕಿವೆ. ಹಂಸಭಾವಿ, ಚಿಕ್ಕೇರೂರು ಹಾಗೂ ಕೋಡ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹಿರೇಕೆರೂರ ತಾಲೂಕಿನಲ್ಲಿ ಉಳಿದಿವೆ. ರಟ್ಟೀಹಳ್ಳಿ ತಾಲೂಕು ವ್ಯಾಪ್ತಿಗೆ ಬರುವ ರಟ್ಟೀಹಳ್ಳಿ ಜಿಪಂ ಕ್ಷೇತ್ರ ರದ್ದಾಗಿದೆ. ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿದ್ದರಿಂದ ಈ ರದ್ದತಿ ಅನಿವಾರ್ಯವಾಗಿತ್ತು. ಜತೆಗೆ ಎರಡೂ ತಾಲೂಕುಗಳ ವ್ಯಾಪ್ತಿಯನ್ನೊಳಗೊಂಡಿದ್ದ ಚನ್ನಳ್ಳಿ ಜಿಪಂ ಕ್ಷೇತ್ರ ಕೂಡ ರದ್ದಾಗಿದೆ. ರಟ್ಟೀಹಳ್ಳಿ ತಾಲೂಕಿನ ಮಾಸೂರು ಜಿಪಂ ಕ್ಷೇತ್ರ ಉಳಿದಿದೆ. ಹೊಸದಾಗಿ ಕಡೂರು ಹಾಗೂ ಚಿಕ್ಕಕಬ್ಟಾರ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದಿವೆ.

ಕಡೂರು ಜಿಪಂ ಕ್ಷೇತ್ರ: ಕುಂಚೂರು, ಬತ್ತಿಕೊಪ್ಪ, ಲಿಂಗದೇವರ ಕೊಪ್ಪ, ಕ್ಯಾತನಕೇರಿ, ಚಿಕ್ಕಯಡಚಿ, ಹಿರೇಯಡಚಿ, ಹಿರೇಮತ್ತೂರ, ಹುಲ್ಲತ್ತಿ, ಕೋಡಿಹಳ್ಳಿ,ತಿಮ್ಮಲಾಪೂರ, ನೇಶ್ವಿ‌, ಮಾವಿನತೀಪ, ದೊಡ್ಡ ಗೊಬ್ಬಿ,ಮಕರಿ, ಯಡಗೋಡ, ಕುಡಪಲಿ ಸೇರಿದಂತೆ ಸೇರಿದಂತೆ 21 ಗ್ರಾಮಗಳ ಒಟ್ಟ 34,064 ಜನಂಖ್ಯೆ ಹೊಂದಿದೆ.

ಚಿಕ್ಕಕಬ್ಟಾರ ಜಿಪಂ ಕ್ಷೇತ್ರ: ಕಮಲಾಪೂರ, ಕಿರಗೇರಿ, ಚಟ್ನಳ್ಳಿ, ಪುರದಕೇರಿ, ಹಳ್ಳೂರ, ಗಲಗಿನಕ್ಟಟಿ, ಚಿಕ್ಕಕಬ್ಟಾರ, ಹಿರೇಕಬ್ಟಾರ, ಅಣಜಿ, ಗುಡ್ಡದ ಮಾದಾಪೂರ, ಮೈದೂರ, ನಾಗವಚಿದ, ಹೊಸಕಟ್ಟಿ, ಕಣವಿಸಿದ್ದಗೇರಿ, ಚಪ್ಪದಹಳ್ಳಿ ಜೋಕನಾಳ, ಪರ್ವತಸಿದ್ದಗೇರಿ, ಮಳಗಿ, ಯಲಿವಾಳ ಸೇರಿದಂತೆ ಒಟ್ಟು 19 ಗ್ರಾಮಗಳ ಒಟ್ಟು 28,003 ಜನಸಂಖ್ಯೆ ಹೊಂದಿದೆ.

20 ತಾಪಂ ಕ್ಷೇತ್ರಗಳು: ಹಿರೇಕೆರೂರು ತಾಲೂಕು ಅಖಂಡವಾಗಿದ್ದ 20 ತಾಪಂ ಕ್ಷೇತ್ರಗಳು ಇದ್ದವು. ಸದ್ಯರಟ್ಟಿಹಳ್ಳಿ ನೂತನ ತಾಲೂಕು ರಚನೆಯಾಗಿದ್ದರಿಂದ 20 ತಾಪಂ ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳು ಮಾತ್ರ ಹಿರೇಕೆರೂರ ತಾಲೂಕಿನಲ್ಲಿ ಉಳಿದಿವೆ. ರಟ್ಟಿàಹಳ್ಳಿ ತಾಲೂಕಿಗೆ 11 ತಾಪಂ ಕ್ಷೇತ್ರಗಳು ಸೇರಿವೆ. ಹಿರೇಕೆರೂರು ತಾಪಂ ಕ್ಷೇತ್ರಗಳಲ್ಲಿ ತಾಲೂಕಿನ ಆಲದಗೇರಿ, ಚಿನ್ನಮುಳಗುಂದ, ಹಂಸಬಾವಿ, ಕಚವಿ,ಚಿಕ್ಕೇರೂರು, ಬೆಟಕೇರೂರು, ಚನ್ನಳ್ಳಿ, ಅಬಲೂರು, ಕೋಡ ಕ್ಷೇತ್ರಗಳು ಸೇರಿವೆ.

Advertisement

ಇನ್ನು ರಟ್ಟಿಹಳ್ಳಿ ತಾಲೂಕಿನ ತಾಪಂ ಕ್ಷೇತಗಳಲ್ಲಿ ಕುಡುಪಲಿ, ಕುಂಚೂರು, ಹುಲ್ಲತ್ತಿ, ಸಿರಗಂಬಿ, ಮಾಸೂರ, ಹಿರೇಮೊರಬ, ಮೇದೂರ, ನಾಗವಂದ, ಹಳ್ಳೂರ, ಚಿಕ್ಕಕಬ್ಟಾರ, ಕಡೂರ ಕ್ಷೇತ್ರಗಳು ಸೇರಿವೆ. ಒಟ್ಟಿನಲ್ಲಿ ಈ ಬಾರಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೂ ಮುನ್ನ ಕ್ಷೇತ್ರಗಳ ಬದಲಾವಣೆ ಹಾಗೂ ನೂತನ ಕ್ಷೇತ್ರಗಳಸೇರ್ಪಡೆ ಕಾರ್ಯ ನಡೆಸಿದ್ದರಿಂದ ರಾಜಕೀಯ ನಾಯಕರಲ್ಲಿ ಕುತೂಹಲ ಮೂಡಿಸಿದೆ. ವಿವಿಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಚುನಾವಣೆ ಆಯೋಗದ ಘೋಷಣೆಗಾಗಿ ಕಾತುರದಿಂದ ಎದುರು ನೋಡುತ್ತಿದ್ದಾರೆ.

ರಟ್ಟಿಹಳ್ಳಿ ನೂತನ ತಾಲೂಕು ರಚನೆಯಾಗಿದ್ದರಿಂದ 11 ತಾಪಂ ಹಾಗೂ3 ಜಿಪಂ ಕ್ಷೇತ್ರಗಳು ದೊರಕಿದ್ದು, ಚುನಾವಣೆಆಯೋಗ ಅಧಿಕೃತವಾಗಿ ಅ ಧಿಸೂಚನೆ ಹೊರಡಿಸಿದೆ. – ಕೆ.ಗುರುಬಸವರಾಜ, ತಹಶೀಲ್ದಾರ್‌ ರಟ್ಟಿಹಳ್ಳಿ

ತಾಲೂಕಿನಲ್ಲಿ 9 ತಾಪಂ ಕ್ಷೇತ್ರಗಳು, ಹಾಗೂ 3 ಜಿಪಂ ಕ್ಷೇತ್ರಗಳಾಗಿ ವಿಂಗಡಣೆಯಾಗಿದ್ದು, ಈ ಬಗ್ಗೆ ಚುನಾವಣೆ ಆಯೋಗ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ. – ಕೆ.ಎ.ಉಮಾ, ತಹಶೀಲ್ದಾರ್‌, ಹಿರೇಕೆರೂರು

 

-ಸಿದ್ಧಲಿಂಗಯ್ಯ ಗೌಡರ್‌

Advertisement

Udayavani is now on Telegram. Click here to join our channel and stay updated with the latest news.

Next