Advertisement

ರಾಜಾಹುಲಿ ಆಟ ಆಡಿದ್ರೆ ಬೊಮ್ಮಾಯಣೋರ್ಗ್ ಕಾಟ..

10:26 AM Aug 01, 2021 | Team Udayavani |

ಅಮಾಸೆ: ನಮ್‌ಸ್ಕಾರ ಸಾ…

Advertisement

ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ

ಅಮಾಸೆ: ರಾಜ್‌ಕೀಯ ಏನಾಗೈತೋ ನೋಡುಮಾ ಅಂತೇಳಿ ಇದಾನ್‌ ಸೌದಾಗಂಟಾ ಹೋದ್ರೆ ಏನೇನೋ ಆಗೋಯ್ತು ಬುಡಿ ಸಾ…

ಚೇರ್ಮನ್ರು: ಅಂತದ್ದೇನಾಯ್‌ತ್ಲಾ?

ಅಮಾಸೆ: ಟು ಡೇಸ್‌ನಾಗೆ ಫ‌ುಲ್‌ ಸಿನಾರಿಯೋ ಚೇಂಜ್‌ ಆಗೋಯ್ತು ಸಾ… ರಾಜಾಹುಲಿ ಯಡ್ನೂರಪ್ನೋರು ರಿಜೈನ್‌ ಮಾಡ್‌ಬುಟ್ಟು ಬಸ್ವರಾಜ್‌ ಬೊಮ್ಮಾಯಣ್ಣೋರ್‌ ಸಿಎಂ ಆಗೋಬುಟ್ರಾ

Advertisement

ಚೇರ್ಮನ್ರು: ಅದ್ಯಾಕ್ಲಾ ಸಡನ್ನಾಗ್‌ ಇಂಗಾಗೋಯ್ತು

ಅಮಾಸೆ: ಮೊದ್ಲೇ ಹೇಳಿದ್ರಂತೆ. ಟು ಇಯರ್ ಆದ್ಮೇಕೆ ನೀವ್‌ ವಸಿ ರೆಸ್ಟ್‌ ತಕ್ಕಳಿ, ನ್ಯೂ ಫೇಸ್‌ ಬರ್ಲಿ ಅಂತಾ. ಅದ್ಕೆ ರಾಜಾಹುಲಿ ಯಡ್ನೂರಪ್ನೋರು ವಾಟ್‌ ಅಬೌಟ್‌ ಮೈ ಸನ್‌ ಬಾಹುಬಲಿ ವಿಜಯೇಂದ್ರ ಅಂತಾ ಕೇಳಿದ್ರಂತೆ. ಅದ್ಕೆ ಶಾ-ನಡ್ಡಾ ಅವ್ರು ಫಿಕರ್‌ ಮತ್‌ ಕರೋ ಅಂತಾ ಹೇಳಿದ್ರಂತೆ.

ಚೇರ್ಮನ್ರು: ರಾಜಾಹುಲಿ ಚೇಂಜ್‌ ಮಾಡಿದ್ರೆ ಕಮ್ಲ ಸರ್ವ್‌ನಾಸಾ ಆಗೋಯ್ತದೆ ಅಂತಾ ಸ್ವಾಮ್ಗಳು ಹೇಳಿದ್ರಲ್ವೇ

ಅಮಾಸೆ: ಅದೇ ಸ್ವಾಮ್ಗಳು ಬೊಮ್ಮಾಯಣ್ಣೋರ್ಗೇ ಜೀತೇ ರಹೋ ಅಂತಾ ವಿಸ್‌ ಮಾಡವ್ರೆ. ಡೆಲ್ಲಿ ಲೀಡ್ರುಗ್ಳು ಗುಡ್‌ ಡಿಸಿಸನ್‌ ತಕ್ಕಂಡವ್ರೆ, ಹೀ ಈಸ್‌ ಅವರ್‌ ಬಾಯ್‌ ಅಂತಾ ಕಣ್‌ ಮಿಟಿಕಿಸವ್ರೆ.

ಚೇರ್ಮನ್ರು: ರೇಸ್‌ ನಾಗೆ ಬೇಜಾನ್‌ ಪ್ಲೆಯರ್ ಇದ್ರಂತೆ ಹೌದೇನ್ಲಾ?

ಅಮಾಸೆ: ಹೌದೇಳಿ, ಎಲ್ರೂ ಹುಳ ಬುಟ್ಕಂಡು ಡೆಲ್ಲಿ ಟು ಬ್ಯಾಂಗ್ಲೂರ್‌ ಸುತ್‌ತಿದ್ರೆ ಬೊಮ್ಮಾಯಣ್ಣೋರು ನಾನ್‌ ಯಡ್ನೂರಪ್ನೋರ್‌ ಹೇಳ್ದಂಗೆ. ಓಡು ಅಂದ್ರೆ ಓಡ್ತೀನಿ, ಇಲ್ಲಾಂದ್ರೆ ಸಿವಾ ನೀನ್‌ ಮಡ್ಗದಂಗಿರು ಅಂತೇಳಿ ಸುಮ್ಕಿರ್ತೀನಿ ಅಂತಾ ಈಸ್ವರನ್‌ ಮುಂದ್ಗಡೆ ಬಸ್ವಣ್ಣ ಕುಂತಂಗ್‌ ಕುಂತ್‌ ಬುಟ್ರಂತೆ.

ಚೇರ್ಮನ್ರು: ಅಮ್ಯಾಕೆ ಏನಾಯ್ತ್ ಲಾ?

ಅಮಾಸೆ: ಅದ್ಕೆ ರಾಜಾಹುಲಿ ಖುಷ್‌ ಆಗೋಬುಟ್ಟು, ಬ್ಯಾರೇ ಯಾರೇ ಆದ್ರೂ ಖಬರ್‌ದಾರ್‌ ಅಂತಾ ಆವಾಜ್‌ ಹಾಕಿದ್ರಂತೆ. ಬೆಲ್ಲ, ಸಕ್ರೆ, ಕಾಫಿ ಬಿಟ್ಟಾಕಿ ನಾನ್‌ ಹೇಳ್ದಂಗೆ ಧಾರ್‌ವಾಡ್‌ ಪೇಡಾ ತಿನ್ರಿ ಅಂತಾ ಫ‌ರ್ಮಾನ್‌ ಕೊಟ್ರಂತೆ. ಅಂಗೋಗಿ ಇಂಗೋಗಿ ಬೊಮ್ಮಾಯಣ್ಣೋರ್ಗೆ ಲಡ್ಡು ಬಂದ್‌ ಬಾಯಿಗ್‌ ಬಿತ್ತಂತೆ. ಆದ್ರೂ ರಾಜಾಹುಲಿ ಆಟ ಇವಾಗ್‌ ಸ್ಟಾರ್ಟ್ ಆಗೈತಿ ಮುಂದೈತಿ ಬೊಮ್ಮಾಯಣ್ಣೋರ್ಗೆ ಕಾಟ ಅಂತಾಕಮ್ಲ ಹೈಕ್ಳು ಹೇಳ್ತಾವ್ರೆ

ಚೇರ್ಮನ್ರು: ಗೋಲ್‌ ಗ‌ುಂಬಜ್‌ ಎಕ್ಸ್‌ಪ್ರೆಸ್‌ ಯತ್ನಾಳ್‌, ಸೈನಿಕ ಯೋಗೇಸ್ವರ್‌ ಕಥೆ ಎಂಗ್ಲಾ ?

ಅಮಾಸೆ: ಚಾನ್ಸ್‌ ಸಿಕ್ಕಿಲ್ಲಾಂದ್ರೆ ಇಲ್ಲಿಂದ್ಲೇ ಶೇಕ್‌ ಅಂತಾ ಯತ್ನಾಳ್‌ ಸಾಹೇಬ್ರು ಧಮ್ಕಿ ಕೊಟ್ಟವ್ರೆ, ಸೈನಿಕ ನನ್‌ ಬುಟ್ರೆ ಸಿಡಿ ರಿಲೀಸ್‌ ಅಂತೇಳಿ ಮಾಂಜಾಕೊಟ್ಟವ್ರೆ.

ಚೇರ್ಮನ್ರು: ಸೀನಿಯರ್ಗೆ ಗೇಟ್‌ ಪಾಸ್‌ ಕೊಡ್ತಾರಂತೆ ಹೌದೇನ್ಲಾ?

ಅಮಾಸೆ: ಅಂಗಂತಾವ್ರೆ.ಅದ್ಕೆ ಶೆಟ್ರಾ ಸಾಹೇಬ್ರು ನಾ ಒಲ್ಲೆ ಅಂತಾ ಮೊದ್ಲೇ ಔಟ್‌ ಆಗೋದ್ರು, ರಾಯಣ್ಣ ಬ್ರಿಗೇಡ್‌ ಈಸ್ವರಪ್ನೋರು ನಾ ಅಂಗೇನಿಲ್ಲಾ ಏನ್‌ ಕೊಟ್ರಾ ರೈಟ್‌ ಅಂತಾವ್ರೆ. ಅಂದ್ರಗಿನಾ ಸೀರಾಮ್ಲು ನಾನೂಗುಡಾ ಪಾಲ್ಟಿ ಲಾಯಲ್‌ ಅಂತಾ ಡಿಸಿಎಂ ಡ್ರೀಮ್‌ ನಾಗವ್ರೆ. ಸಾಮ್ರಾಟ್‌ ಅಸೋಕಣ್ಣೋರು ಕಪ್‌ ನಮ್ದೆ ಅಂತಾ ಡೆಲ್ಲಿ ರೌಂಡ್ಸ್‌ ನಡೆಸವ್ರೆ.

ಚೇರ್ಮನ್ರು: ಸಿದ್ರಾಮಣ್ಣೋರು, ಸಿವ್‌ ಕುಮಾರಣ್ಣೋರು, ಕುಮಾರಣ್ಣೋರು, ರೇವಣ್ಣೋರು ಏನ್‌ ಮಾಡ್ತಾವ್ರೆ

ಅಮಾಸೆ: ಯಡ್ನೂರಪ್ನೋರು ಏನ್‌ ಮಾಡ್ತಾರೋ, ಉಳ್ಸ್ ತಾರೋ, ಬೀಳ್ಸ್ ತಾರೋ, ಬ್ಯಾರೇ ಪಾಲ್ಟಿ ಕಡ್ತಾರೋ ಅಂತಾ ಗೆಸ್ಸಿಂಗ್‌ ಮಾಡ್ತಾವ್ರೆ. ಆದ್ರೆ ರಾಜಾಹುಲಿ ಸೈಲಂಟಾಗೇ ಆಪ್‌ರೇಟ್‌ ಮಾಡ್ಸೈತೆ. ನೋಡುಮಾ ಏನೇನಾಗ್ತೈತೋ. ನನ್‌ ಹೆಂಡ್ರು ಕೈಮಾ ತತ್ತಾ ಅಂತೇಳವ್ಲೇ ಬತ್ತೀನಿ ಸಾ…

 ಎಸ್‌.ಲಕ್ಷ್ಮೀ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next