Advertisement

ನೋಟು ಅಮಾನ್ಯದ ಬಳಿಕ 2.55 ಕೋಟಿ ಮುಖಬೆಲೆಯ ನಕಲಿ ನೋಟು ವಶ: ಸರ್ಕಾರ

03:48 PM Aug 08, 2017 | Team Udayavani |

ಹೊಸದಿಲ್ಲಿ : ಕಳೆದ ವರ್ಷ ನವೆಂಬರ್‌ನಲ್ಲಿ ಸರಕಾರ 500 ರೂ. ಮತ್ತು 1,000 ರೂ. ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ ದೇಶದ ವಿವಿಧ ಅಂತಾರಾಷ್ಟ್ರೀಯ ಗಡಿಗಳಲ್ಲಿ, ಮುಖ್ಯವಾಗಿ ಗುಜರಾತ್‌ನಲ್ಲಿ,  ಒಟ್ಟು  2.55 ಕೋಟಿ ರೂ. ಮುಖಬೆಲೆ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಲೋಕಸಭೆಗೆ ಇಂದು ನೀಡಿದ ಲಿಖೀತ ಉತ್ತರದಲ್ಲಿ ಕೇಂದ್ರ ಸಹಾಯಕ ಗೃಹ ಸಚಿವ ಹಂಸರಾಜ್‌ ಜಿ ಆಹಿರ್‌ ಅವರು ರಾಷ್ಟ್ರೀಯ ಪಾತಕ ದಾಖಲೆಗಳ ವಿಭಾಗದ ಅಂಕಿ ಅಂಶಗಳನ್ನು ಉಲ್ಲೇಖೀಸಿ ಕಳೆದ ವರ್ಷ ನ.9ರಿಂದ ಈ ವರ್ಷ ಜುಲೈ 14ರ ತನಕದ ಅವಧಿಯಲ್ಲಿ 23,429 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಹಳೇ 500 ರೂ. ಮತ್ತು 1,000 ರೂ. ಗಳ ನಕಲಿ ನೋಟುಗಳೂ ಸೇರಿವೆ ಎಂದು ಹೇಳಿದರು. 

ಗುಜರಾತ್‌ ಅನಂತರದಲ್ಲಿ ಗರಿಷ್ಠ ಪ್ರಮಾಣದಲ್ಲಿ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿರುವುದು ಮಿಜೋರಾಂ, ಪಶ್ಚಿಮ ಬಂಗಾಲ ಮತ್ತು ಪಂಜಾಬ್‌ನಲ್ಲಿ ಎಂದು ಸಚಿವರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next