ರಾಮನಗರ: ಕೋವಿಡ್-19 ಸೋಂಕು ಪತ್ತೆಗೆ ಫೀವರ್ ಕ್ಲಿನಿಕ್ ಮತ್ತು ರ್‍ಯಾಂಡಮ್ ಟೆಸ್ಟಿಂಗ್ ಸಂಚಾರಿ ವಾಹನಕ್ಕೆ ಡೀಸಿ ಎಂ.ಎಸ್. ಅರ್ಚನಾ ಚಾಲನೆ ನೀಡಿದರು. ಕ್ಲಿನಿಕ್ ಮತ್ತು ರ್‍ಯಾಂಡಮ್ ಟೆಸ್ಟಿಂಗ್ ವಾಹ ನವಾಗಿ ಪರಿವರ್ತನೆಯಾಗಿರುವ ಕೆಎಸ್‌ಆರ್ ಟಿಸಿ ಬಸ್‌ಗೆ ನಗರದ ಸರ್ಕಾರಿ ಕಚೇರಿಗಳ ಸಂಕಿರ್ಣದ ಆವರಣದಲ್ಲಿ ಜಿಲ್ಲಾಧಿಕಾರಿಗಳು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಕೋವಿಡ್-19 ಸೋಂಕು ಪತ್ತೆಗಾಗಿ ಈಗಾ ಗಲೇ ಜಿಲ್ಲಾದ್ಯಂತ ರ್‍ಯಾಂಡಮ್ ಟೆಸ್ಟಿಂಗ್ ಮಾಡಲಾಗುತ್ತಿದೆ. ಹೀಗೆ ರ್‍ಯಾಂಡಮ್ ಟೆಸ್ಟ್ ಮಾಡಿದ್ದರಿಂದಲೇ ಮಾಗಡಿಯಲ್ಲಿ ಬಸ್ ಚಾಲಕರೊಬ್ಬರಲ್ಲಿ ಸೋಂಕು ಇರುವುದು ಪತ್ತೆ ಯಾಗಿದೆ. ಟೆಸ್ಟಿಂಗ್ ಇನ್ನಷ್ಟು ಪರಿಣಾಮಕಾರಿ ಗೊಳಿಸುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ತನ್ನ ಒಂದು ಬಸ್‌ನ್ನು ತಪಾಸಣೆ ಪರಿವರ್ತಿಸಿ ಕೊಟ್ಟಿದೆ. ಮತ್ತೂಂದು ಬಸ್‌ಗಾಗಿ ಜಿಲ್ಲಾಡಳಿತ ಬೇಡಿಕೆಯಿಟ್ಟಿದೆ. ಮತ್ತೂಂದು ಬಸ್ ಬಂದರೆ ಎರಡು ತಾಲೂಕುಗಳಿಗೆ ಒಂದು ಬಸ್ ನಿಯೋಜಿಸಲಾಗುವುದು ಎಂದರು.
ಸದರಿ ವಾಹನದಲ್ಲಿ ವೈದ್ಯರು ಕುಳಿತು ಕೊಳ್ಳಲು ವ್ಯವಸ್ಥೆಯಿದೆ. ರೋಗಿಯನ್ನು ತಪಾಸಣೆ ಮಾಡಲು ಹಾಸಿಗೆ, ಕೈತೊಳೆದುಕೊಳ್ಳಲು ವಾಷ್ ಬೇಸಿನ್ ಇದೆ. ಬಸ್‌ನಲ್ಲಿ ಗಂಟಲು ದ್ರವ ಪಡೆದುಕೊಳ್ಳಲು ಕ್ಯೂಬಿಕಲ್ ಸ್ಥಾಪನೆ ಯಾಗಿದೆ ಎಂದು ವಿವರಿಸಿದರು. ಬಸ್‌ನಲ್ಲಿ ಒಬ್ಬ ವೈದ್ಯರು, ನರ್ಸ್, ಲ್ಯಾಬ್ ಟೆಕ್ನಿಷಿಯನ್, ಡಿ ಗ್ರೂಪ್ ನೌಕರರು ಇರಲಿದ್ದಾರೆ ಎಂದು ಮಾಹಿತಿ ಕೊಟ್ಟರು. ವಾಹನವು ಜನಸಂದಣಿ ಹೆಚ್ಚಿಗೆ ಇರುವ ಬಸ್ ನಿಲ್ದಾಣಗಳು, ಎಪಿಎಂಸಿ ಮಾರುಕಟ್ಟೆ, ರೇಷ್ಮೆ ಮಾರುಕಟ್ಟೆ ಮುಂತಾದ ಕಡೆ ದಿನನಿತ್ಯ ಸಂಚರಿಸಲಿದೆ ಎಂದರು.
ಸದ್ಯದಲ್ಲೇ ಸೋಂಕು ಪತ್ತೆ ಪ್ರಯೋಗಾಲಯ: ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಕೋವಿಡ್-19 ಪ್ರಯೋಗಾಲ ಯ ಸದ್ಯದಲ್ಲೇ ಸ್ಥಾಪನೆಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ನಗರದಲ್ಲಿ ನಿರ್ಮಾಣ ಪೂರ್ಣ ಹಂತದಲ್ಲಿರುವ ಜಿಲ್ಲಾಸ್ಪ ತ್ರೆಯ ಕಟ್ಟಡದಲ್ಲಿ ಪ್ರಯೋಗಾಲಯ ಸ್ಥಾಪನೆ ಯಾಗಲಿದೆ.
ನಾಲ್ಕೈದು ದಿನಗಳಲ್ಲಿ ಪ್ರಯೋ ಗಾಲಯಕ್ಕೆ ಬೇಕಾದ ಎಲ್ಲಾ ಯಂತ್ರೋಪಕರಣಗಳು, ಸಾಧನಗಳು ಬರಲಿವೆ. ತದನಂತರ ಪ್ರಯೋಗಾಲಯ ಸ್ಥಾಪನೆ ಯಾಗಲಿದೆ ಎಂದರು. ರಾಮನಗರದಲ್ಲಿ ಕೋವಿಡ್-19 ಆಸ್ಪತ್ರೆ ಇದ್ದಾಗ್ಯೂ ಮಾಗಡಿ ತಾಲೂಕಿನ ಮಾರಸಂದ್ರ ಗ್ರಾಮದಲ್ಲಿ 2 ವರ್ಷದ ಮಗುವಿಗೆ ಕೋವಿಡ್ 19 ಸೋಂಕು ಪತ್ತೆಯಾಗಿದ್ದು, ಸದರಿ ಮಗುವ ನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ದ್ದೇಕೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳು, ರಾಮನಗರದ ಕೋವಿಡ್ -19 ಆಸ್ಪತ್ರೆಯಲ್ಲಿ ಸೋಂಕಿಗೆ ಚಿಕಿತ್ಸೆ ನೀಡಲು ಸಜ್ಜಾಗಿದೆ.
ಆದರೆ ತೀರಾ ಚಿಕ್ಕ ಮಕ್ಕಳು ಮತ್ತು 60 ವರ್ಷ ಮೀರಿದವರು ಹೈ ರಿಸ್ಕ್ ರೋಗಿಗಳಾ ಗಿದ್ದಾರೆ. ಇದೊಂದೇ ಕಾರಣಕ್ಕೆ ಮಗುವ ನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾ ಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಬಿ.ಪಿ. ವಿಜಯ್, ಡಿಎಚ್‌ಒ ಡಾ. ನಿರಂಜನ್, ಆರ್‌ಸಿಎಚ್ ಅಧಿಕಾರಿ ಡಾ. ಪದ್ಮಾ ಇನ್ನಿತರ ಅಧಿಕಾರಿಗಳು ಹಾಜರಿದ್ದರು.