Advertisement

ಫೀವರ್ ಕ್ಲೀನಿಕ್ ನಿರ್ಮಾಣ ಕಾಮಗಾರಿಗೆ ಎಂ.ಎಲ್.ಸಿ ವಿಶ್ವನಾಥ್ ಚಾಲನೆ

05:52 PM May 24, 2021 | Team Udayavani |

ಹುಣಸೂರು :    ಹುಣಸೂರು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ದಿ ನಿಧಿಯಿಂದ  ಹತ್ತು ಲಕ್ಷರೂ ವೆಚ್ಚದಡಿ ಫೀವರ್ ಕ್ಲಿನಿಕ್ ಕಟ್ಟಡ ನಿರ್ಮಿಸಲಾಗುವುದೆಂದು ಎಂ.ಎಲ್.ಸಿ. ಅಡಗೂರು ಎಚ್.ವಿಶ್ವನಾಥ್ ತಿಳಿಸಿದರು.

Advertisement

ಆಸ್ಪತ್ರೆ ಆವರಣದಲ್ಲಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ನಂತರ ಮಾತನಾಡಿದ ವಿಶ್ವನಾಥ್,  ಕೋವಿಡ್ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪರೀಕ್ಷೆಗೆಂದು ಆಸ್ಪತ್ರೆ ಒಳಗೆ ಒತ್ತಡ ಹೆಚ್ಚಿ ಸೋಂಕು ಮತ್ತಷ್ಟು ಜನರಿಗೆ ಹರಡುವ ಹಿನ್ನೆಲೆಯಲ್ಲಿ ಇಲ್ಲಿನ ವೈದ್ಯರ ಮನವಿ ಮೇರೆಗೆ ಎಂ.ಎಲ್.ಸಿ. ನಿಧಿಯಿಂದ ಹತ್ತು ಲಕ್ಷರೂ ವೆಚ್ಚದಲ್ಲಿ ರೋಗಿಗಳನ್ನು ಪರೀಕ್ಷಿಸುವ ವೈದ್ಯರ ಮೂರು ಕ್ಯಾಬಿನ್ ಹಾಗೂ 20 ಮಂದಿ ರೋಗಿಗಳು ಕುಳಿತುಕೊಳ್ಳಲು ಅವಕಾಶವಾಗುವಂತೆ ಫೀವರ್ ಕ್ಲಿನಿಕ್ ನಿರ್ಮಿಸಲಾಗುವುದೆಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಸರಕಾರದ ಕ್ರಮ, ಜನರ ಸಹಕಾರದಿಂದ ಕೋವಿಡ್ ನಿಯಂತ್ರಣ : ಡಾ. ಗಿರಿಧರ ಉಪಾಧ್ಯಾಯ

ಆಸ್ಪತ್ರೆಗೆ ಸುಸಜ್ಜಿತ 30 ಲಕ್ಷದ ಆ್ಯಂಬ್ಯುಲೆನ್ಸ್:

ಹುಣಸೂರನ್ನು ಕೇಂದ್ರವಾಗಿಸಿಕೊಂಡು ಆಕ್ಸಿಜನ್ ಉತ್ಪಾದನೆ, ವೆಂಟಿಲೇಟರ್ ಸೇರಿದಂತೆ ಎಲ್ಲ ಸೌಲಭ್ಯಗಳುಳ್ಳ ಸುಸಜ್ಜಿತ  ಆ್ಯಂಬ್ಯುಲೆನ್ಸ್‌ ನನ್ನು ತಮ್ಮ ನಿಧಿಯಿಂದ 30 ಲಕ್ಷರೂ ವೆಚ್ಚದಡಿ ಖರೀದಿಸಲು ನಿರ್ಧರಿಸಿದ್ದು, ಹಣ ಬಿಡುಗಡೆಗಾಗಿ ಜಿಲ್ಲಾಧಿಕಾರಿಗಳಿಗೆ ಪತ್ರಬರೆಯಲಾಗಿದೆ. ತಿಂಗಳೊಳಗೆ ಆ್ಯಂಬ್ಯಲೆನ್ಸ್ ವಾಹನ ಬರಲಿದೆ. ಉಪವಿಭಾಗದ ಎಲ್ಲಾ ತಾಲೂಕುಗಳಿಗೂ ಅನುಕೂಲವಾಗುವಂತೆ ಬಳಸಿಕೊಳ್ಳಲಾಗುವುದು, ಕೊವಿಡ್ ಪರೀಕ್ಷೆಗೆ ಅಗತ್ಯವಾಗಿರುವ ಸಿಟಿ ಸ್ಕ್ಯಾನ್ ಯಂತ್ರವನ್ನು ಹುಣಸೂರು ಆಸ್ಪತ್ರೆಯಲ್ಲಿ  ಸ್ಥಾಪಿಸುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.

Advertisement

ಈ ಸಂದರ್ಭದಲ್ಲಿ, ತಹಸೀಲ್ದಾರ್ ಬಸವರಾಜು, ತಾ.ಪಂ.ಇಓ.ಗಿರೀಶ್, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸರ್ವೇಶ್‌ ರಾಜೇ ಅರಸ್, ಪೌರಾಯುಕ್ತ ರಮೇಶ್,ತಾಲೂಕು ಬಿಜೆಪಿ ಅಧ್ಯಕ್ಷ ನಾಗಣ್ಣ, ಮಹಿಳಾ ಅಧ್ಯಕ್ಷೆ ಕಮಲಾಪ್ರಕಾಶ್, ನಗರಸಭೆ ಸದಸ್ಯರಾದ ಹರೀಶ್, ಸಾಯಿನಾಥ್, ಉಮೇಶ್, ಶ್ರೀನಿವಾಸ್, ರಮೇಶ್, ಮಾಜಿ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಡಾ. ಶ್ರೀಕಾಂತ್, ಸಂದೇಶ್, ಇಂಟೆಕ್‌ ರಾಜು, ನಿಂಗರಾಜ್‌ ಮಲ್ಲಾಡಿ, ಬಲ್ಲೇನಹಳ್ಳಿ ಕೆಂಪರಾಜ್ ಇತರರಿದ್ದರು.

ಇದನ್ನೂ ಓದಿ : 2019ರ ನವೆಂಬರ್ ನಲ್ಲಿಯೇ ಚೀನಾದ WIV ನ ಸಂಶೋಧಕರು ಹಾಸ್ಪಿಟಲ್ ಕೇರ್ ಕೋರಿದ್ದರು.! : WSJ

Advertisement

Udayavani is now on Telegram. Click here to join our channel and stay updated with the latest news.

Next