Advertisement

ಕೋವಿಡ್ ದೃಢಪಟ್ಟ ಪ್ರದೇಶದಲ್ಲಿ ಫೀವರ್‌ ಕ್ಲಿನಿಕ್‌

06:21 PM Aug 15, 2020 | Suhan S |

ಸಿರುಗುಪ್ಪ: ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೋವಿಡ್ ಸೋಂಕಿನಿಂದ ಸಾವು ಸಂಭವಿಸಿದ ವಾರ್ಡ್‌ಗಳಲ್ಲಿ ಹಾಗೂ ಹೆಚ್ಚು ಸೋಂಕು ದೃಢಪಟ್ಟ ಪ್ರದೇಶಗಳಲ್ಲಿ ಫೀವರ್‌ ಕ್ಲೀನಿಕ್‌ಗಳನ್ನು ಸ್ಥಾಪನೆ ಮಾಡಿ ಹೆಚ್ಚು ಸೋಂಕಿತರ ಪರೀಕ್ಷೆಗೊಳಪಡಿಸಿದರೆ ಕೋವಿಡ್ ಸೋಂಕು ಹರಡದಂತೆ ತಡೆಗಟ್ಟಬಹುದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಮರಿಯಂಬೀ ತಿಳಿಸಿದರು.

Advertisement

ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ತಾಲೂಕುಮಟ್ಟದ ಕೋವಿಡ್‌-19 ಟಾಸ್ಕ್ ಪೂರ್ಸ್‌ ಸಮಿತಿ ಸಭೆಯಲ್ಲಿ ಮಾತನಾಡಿ, ಕೋವಿಡ್ ಶಂಕಿತರನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇಲ್ಲದವರಿಗೂ ಈ ಸೋಂಕು ಹರಡದಂತೆ ಪ್ರತ್ಯೇಕವಾಗಿ ದಾಖಲೀಕರಣಗೊಳಿಸಬೇಕು. ತಾಲೂಕು ಸೀಮಾಂಧ್ರ ಪ್ರದೇಶದ ಗಡಿಯಲ್ಲಿರುವುದರಿಂದ ಪ್ರಥಮ ಹಾಗೂ ದ್ವಿತೀಯ ಸೋಂಕಿತರನ್ನು ನಿಖರವಾಗಿ ಗುರುತಿಸಲು ಶಿಕ್ಷಣ ಇಲಾಖೆಯವರು ಹೆಚ್ಚಿನ ನಿಖರ ಮಾಹಿತಿ ನೀಡಿದರೆ ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚಿ ಹೆಚ್ಚಿನ ಜನರಿಗೆ ಸೋಂಕು ಹರಡದಂತೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಪತ್ತೆಹಚ್ಚಿದ ಸೋಂಕಿತರಲ್ಲಿ ರೋಗ ಗುಣಲಕ್ಷಣಗಳು ಇಲ್ಲದೇ ಇರುವವರನ್ನು ಚಿಕಿತ್ಸೆಗೆ ದಾಖಲಿಸಲು ನಡಿವಿ, ಕೆಂಚನಗುಡ್ಡ, ಸಿರುಗುಪ್ಪ ಕೋವಿಡ್‌ ಆರೈಕೆ ಕೇಂದ್ರಕ್ಕೆ ಕಳುಹಿಸಲು ಅಗತ್ಯ ಆಂಬ್ಯುಲೆನ್ಸ್‌ಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ನಗರದ ವಿವಿಧ ವಾರ್ಡ್‌ಗಳಲ್ಲಿ ಶಂಕಿತರ ಕ್ವಾರಂಟೈನ್‌ ಹಾಗೂ ಕೋವಿಡ್ ಸೋಂಕು ದೃಢಪಟ್ಟವರಿಗೆ ಮನೆಗಳಲ್ಲಿಯೇ ಐಸೋಲೇಷನ್‌ಗೊಳಿಸಲು ಹಾಗೂ ಆರೈಕೆ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ಅಡ್ಡಿಪಡಿಸುವವರ ಮೇಲೆ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಿಸುವಂತೆ ಸೂಚನೆ ನೀಡಿದರು.

ತಹಶೀಲ್ದಾರ್‌ ಎಸ್‌.ಬಿ. ಕೂಡಲಗಿ, ಪೌರಾಯುಕ್ತ ಪ್ರೇಮ್‌ಚಾರ್ಲ್ಸ್‌, ವೈದ್ಯ ಪರಶುರಾಮ, ಚನ್ನವೀರಯ್ಯ ಈರಣ್ಣ, ಸಿದ್ದಲಿಂಗೇಶ್ವರಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಹಿರಿಯ ಆರೋಗ್ಯ ಸಹಾಯಕ ಗಿರೀಶ್‌ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next