Advertisement

Mandya: ಶೆಡ್‌ನ‌ಲ್ಲಿ ನಡೆಯುತ್ತಿತ್ತು ಭ್ರೂಣಲಿಂಗ ಪತ್ತೆ

08:08 PM Nov 26, 2023 | Team Udayavani |

ಮಂಡ್ಯ: ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರು ಬೇ ಧಿಸಿರುವ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣವು ರಾಜಾÂದ್ಯಂತ ಸದ್ದು ಮಾಡುತ್ತಿದೆ. ಆದರೆ ಅದರ ಮೂಲ ಮಂಡ್ಯದ ಆಲೆಮನೆಯಲ್ಲಿ ಎಂಬುದನ್ನು ಕೇಳಿ ಜಿಲ್ಲೆ ಸೇರಿದಂತೆ ಇಡೀ ರಾಜ್ಯಕ್ಕೆ ಶಾಕ್‌ ಹೊಡೆದಂತಾಗಿದೆ.

Advertisement

ತಾಲೂಕಿನ ದುದ್ದ ಹೋಬಳಿಯ ಹಾಡ್ಯ ಗ್ರಾಮದ ಜನನಿಬಿಡ ಪ್ರದೇಶದ ಆಲೆಮನೆಗೆ ಹೊಂದಿಕೊಂಡಂತಿರುವ ಶೆಡ್‌ನ‌ಲ್ಲಿ ಕೃತ್ಯ ನಡೆಯುತ್ತಿತ್ತು. ಮಂಡ್ಯದ ಆಲೆಮನೆ ದಂಧೆಕೋರರಿಗೆ ಹಾಟ್‌ ಸ್ಪಾಟ್‌ ಆಗಿದ್ದರ ಬಗ್ಗೆ ರೋಚಕ ಸಂಗತಿ ಪತ್ತೆಯಾಗಿದೆ.

ಸ್ಕ್ಯಾನಿಂಗ್‌ ಮಾಡುತ್ತಿದ್ದ ಜಾಗ ನೋಡಿದ ಪೊಲೀಸರಿಗೂ ಶಾಕ್‌ ಆಗಿತ್ತು. ಸ್ಪಾಟ್‌ ಮಹಜರ್‌ಗೆ ಬಂದಿದ್ದ ಬೈಯಪ್ಪನಹಳ್ಳಿ ಪೊಲೀಸರೂ ಅಚ್ಚರಿ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಆಲೆಮನೆಗೆ ಹೊಂದಿಕೊಂಡಂತಿದ್ದ ಗದ್ದೆ ಬಯಲಿನಲ್ಲಿ ಸಣ್ಣ ಶೆಡ್‌ನ‌ಲ್ಲಿ ನಡೆಯುತ್ತಿತ್ತು. ಚಿಕ್ಕ ಶೆಡ್‌ನ‌ಲ್ಲಿ ಸ್ಕಾÂನಿಂಗ್‌ ಯಂತ್ರ ಬಳಸಿ ಭ್ರೂಣ ಲಿಂಗ ಪತ್ತೆ ಮಾಡಲಾಗುತ್ತಿತ್ತು. ಆರೋಪಿ ನವೀನ್‌ ಸಂಬಂಧಿಕರಿಗೆ ಸೇರಿದ್ದ ಆಲೆಮನೆಯಾಗಿತ್ತು. ಗುತ್ತಿಗೆ ಆಧಾರದಲ್ಲಿ ನವೀನ್‌ ಆಲೆಮನೆ ನಡೆಸುತ್ತಿದ್ದ. ಮತ್ತೂಬ್ಬ ಆರೋಪಿ ನಯನ್‌ಕುಮಾರ್‌ ಜೊತೆ ಸೇರಿ ಆಲೆಮನೆ ಜೊತೆಗೆ ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ ದಂಧೆ ನಡೆಸಲಾಗುತ್ತಿತ್ತು. ನವೀನ್‌ ಹಾಗೂ ನಯನ್‌ಕುಮಾರ್‌ ಭಾವ ಭಾಮೈದುನರಾಗಿದ್ದರು ಎಂದು ತಿಳಿದು ಬಂದಿದೆ.

ಮಧ್ಯವರ್ತಿಗಳು ಹಾಗೂ ವೈದ್ಯರೊಂದಿಗೆ ಸೇರಿ ದಂಧೆಯಲ್ಲಿ ತೊಡಗಿದ್ದರು. ಜಿಲ್ಲೆಯ ನಾಗಮಂಗಲ, ಮಳವಳ್ಳಿ, ಕೆ.ಆರ್‌.ಪೇಟೆ ತಾಲೂಕಿಗೂ ಸ್ಕ್ಯಾನಿಂಗ್‌ ಯಂತ್ರದ ಮೂಲಕ ಪತ್ತೆ ಮಾಡಿ ನಂತರ ಇಲ್ಲಿಗೆ ಕರೆತಂದು ಭ್ರೂಣಹತ್ಯೆ ಮಾಡಲಾಗುತ್ತಿತ್ತು. ಹಾಡ್ಯ ಗ್ರಾಮದ ಮಧ್ಯೆಯೇ ಕೃತ್ಯ ನಡೆದರೂ ಯಾರಿಗೂ ಗೊತ್ತಾಗದಂತೆ ಆರೋಪಿಗಳು ಪ್ಲ್ಯಾನ್‌ ಮಾಡಿದ್ದರು. ಗೂಗಲ್‌ ಮ್ಯಾಪ್‌ನಲ್ಲೂ ಸ್ಥಳ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಸ್ಥಳೀಯರಿಗೂ ವಿಳಾಸ ಗೊತ್ತಾಗದಂತೆ ಸ್ಥಳದಲ್ಲಿ ಕೃತ್ಯ ನಡೆಯುತ್ತಿತ್ತು.

ಕಳೆದ 2 ವರ್ಷಗಳಿಂದ ಇದುವರೆಗೂ 900ಕ್ಕೂ ಹೆಚ್ಚು ಭ್ರೂಣ ಹತ್ಯೆ ಮಾಡಲಾಗಿದೆ ಎಂದು ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರ ತನಿಖೆಯಲ್ಲಿ ಹೊರಬಿದ್ದಿದೆ. ಈಗಾಗಲೇ ಪ್ರಕರಣ ಸಂಬಂಧ 9 ಜನರನ್ನು ಬಂಧಿಸಲಾಗಿದೆ.

Advertisement

ಈಗಾಗಲೇ ನಯನ್‌ಕುಮಾರ್‌, ನವೀನ್‌, ಶಿವನಂಜೇಗೌಡ, ವಿರೇಶ್‌ ಎಂಬುವರನ್ನು ಬಂ ಧಿಸಲಾಗಿದೆ. ತನಿಖೆ ನಂತರ ಇಬ್ಬರು ವೈದ್ಯರು, ಲ್ಯಾಬ್‌ ಟೆಕ್ನಿಷಿಯನ್‌ ಹಾಗೂ ರಿಸೆಪ್ಷನಿಸ್ಟ್‌ ಅವರನ್ನು ಬಂಧಿ ಸಲಾಗಿದೆ.

138 ಮಂದಿ ಅಪ್ರಾಪ್ತರು
ಭ್ರೂಣಹತ್ಯೆ ಹಾಗೂ ಲಿಂಗಾನುಪಾತದ ಪರಿಣಾಮ ಮಂಡ್ಯ ಜಿಲ್ಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಅಕ್ಟೋಬರ್‌ ತಿಂಗಳವರೆಗೆ 9425 ಗರ್ಭಿಣಿಯರ ನೋಂದಣಿಯಾಗಿದ್ದು, ಅದರಲ್ಲಿ 138 ಅಪ್ರಾಪ್ತ ವಯಸ್ಕರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಅದರಲ್ಲಿ ಮಂಡ್ಯ ತಾಲೂಕಿನ 79, ಕೆ.ಆರ್‌.ಪೇಟೆ-7, ನಾಗಮಂಗಲ-20, ಶ್ರೀರಂಗಪಟ್ಟಣ-22 ಹಾಗೂ ಪಾಂಡವಪುರ ತಾಲೂಕಿನಲ್ಲಿ 10 ಪ್ರಕರಣ ವರದಿಯಾಗಿರುವುದು ಮತ್ತೂಂದು ಆತಂಕಕ್ಕೆ ಕಾರಣವಾಗಿದೆ.

ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಅ ಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಕ್ರಮ ವಹಿಸಲಾಗುವುದು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು.
-ದರ್ಶನ್‌ ಪುಟ್ಟಣ್ಣಯ್ಯ, ಮೇಲುಕೋಟೆ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next