Advertisement
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿಯನ್ನು ಬಂಧಿ ಸಿದ್ದು, ಉಳಿದ ಮೂವರು ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ. ಈ ನಡುವೆ ಪಾಂಡವಪುರ ತಾಲೂಕಿನ ಮಹಿಳೆಯೊಬ್ಬರು ತಿಂಗಳ ಹಿಂದೆ ಗರ್ಭಪಾತ ಮಾಡಿಸಿಕೊಂಡು ಇದೀಗ ರಕ್ತಸ್ರಾವವಾಗಿ ಆಸ್ಪತ್ರೆಗೆ ದಾಖಲಾಗಿರುವ ಮತ್ತೂಂದು ಘಟನೆ ನಡೆದಿದೆ.
Related Articles
Advertisement
ಸುಳಿವು ಸಿಗದ ಸ್ಕ್ಯಾನಿಂಗ್ ಮಾಹಿತಿ: ಗರ್ಭಪಾತ ಮಾಡಿಸಲು ಆರೋಪಿಗಳು ಎಲ್ಲಿ ಸ್ಕ್ಯಾನಿಂಗ್ ಮಾಡಿಸುತ್ತಿದ್ದರು ಎಂಬುದರ ಸುಳಿವು ಇದುವರೆಗೂ ಸಿಕ್ಕಿಲ್ಲ. ಇದು ಆರೋಗ್ಯಾಧಿಕಾರಿಗಳು, ಪೊಲೀಸರಿಗೂ ತಲೆ ನೋವಾಗಿ ಪರಿಣಮಿಸಿದೆ. ಮಾರುತಿ 800 ಸೇರಿದಂತೆ ಇತರೆ ಕಾರುಗಳಲ್ಲಿ ಮಧ್ಯರಾತ್ರಿ ಗರ್ಭಿಣಿಯರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ಯುವ ಮಧ್ಯವರ್ತಿಗಳು ಎರಡೂ¾ರು ನಿಮಿಷಗಳಲ್ಲಿ ಭ್ರೂಣಪತ್ತೆ ಮಾಡಿ ಕಳುಹಿಸುತ್ತಾರೆ. ಹೆಣ್ಣಾಗಿದ್ದರೆ ಗರ್ಭಪಾತ ಮಾಡಿಸಲು ಕಳುಹಿಸುತ್ತಿದ್ದರು. ಆದರೆ, ಸ್ಕ್ಯಾನಿಂಗ್ ಮಾಡುವ ನಿರ್ದಿಷ್ಟ ಸ್ಥಳದ ಬಗ್ಗೆ ಆರೋಪಿಗಳು ಮಾಹಿತಿ ನೀಡುತ್ತಿಲ್ಲ ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ತಿಳಿಸಿದರು.
ಮಹಿಳೆಯರ ಪತಿ ವಿರುದ್ಧವೂ ಪ್ರಕರಣಕ್ಕೆ ಕ್ರಮ: ಹೆಣ್ಣು ಭ್ರೂಣಹತ್ಯೆ ಪ್ರಕರಣಗಳಲ್ಲಿ ಗರ್ಭಪಾತಕ್ಕೆ ಒಳಗಾಗುವ ಮಹಿಳೆಯರ ಪತಿಯರ ಮೇಲೂ ಪ್ರಕರಣ ದಾಖಲಿಸಲು ಕ್ರಮ ವಹಿಸಲಾಗುತ್ತಿದೆ. ಮಹಿಳೆಯನ್ನು ಸಾಕ್ಷಿಯನ್ನಾಗಿ ಮಾಡಲಾಗುತ್ತಿದೆ. ಪತಿ ಹಾಗೂ ಕುಟುಂಬದವರ ಒತ್ತಡಕ್ಕೆ ಒಳಗಾ ಗಿಯೇ ಇಂಥ ಕೃತ್ಯ ಎಸಗಲು ಕಾರಣವಾಗುತ್ತಿದೆ. ಅದಕ್ಕಾಗಿ ಪತಿಯ ಮೇಲೂ ಪ್ರಕರಣ ದಾಖಲಿಸಲು ಆರೋಗ್ಯಾ ಧಿಕಾರಿಗಳು ಕ್ರಮ ವಹಿಸುತ್ತಿದ್ದಾರೆ. ಆದರೆ, ಪತಿಯನ್ನು ಬಿಟ್ಟುಕೊಡಲು ಮುಂದಾಗದ ಮಹಿಳೆಯರು ಸ್ವಇಚ್ಛೆಯಿಂದ ಮಾಡಿಸಿಕೊಂಡಿದ್ದೇನೆಂದು ಹೇಳುವ ಮೂಲಕ ಪ್ರಕರಣಗಳು ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಬಗೆದಷ್ಟು ಆಳ; ಮತ್ತಷ್ಟು ಕೇಸ್‌ಗಳು ಬೆಳಕಿಗೆ:
ಹೆಣ್ಣು ಭ್ರೂಣಹತ್ಯೆ ಪ್ರಕರಣಗಳಲ್ಲಿ ಬಗೆದಷ್ಟು ಆಳವಾಗುತ್ತಿದ್ದು, ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಸುಮಾರು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿರುವ ಆರೋಪಿಗಳು ಸಮರ್ಪಕವಾಗಿ ಮಾಹಿತಿ ನೀಡುತ್ತಿಲ್ಲ. ಆದರೆ ಒಂದೊಂದಾಗಿ ಭ್ರೂಣಪತ್ತೆ ಹಾಗೂ ಹತ್ಯೆ ಮಾಡುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗಾಗಲೇ ಜಿಲ್ಲೆಯಲ್ಲಿ ನಡೆದಿರುವ ಎರಡು ಪ್ರಕರಣಗಳು ಇಡೀ ರಾಜ್ಯವನ್ನೇ ಆತಂಕಕ್ಕೆ ದೂಡುವಂತೆ ಮಾಡಿದೆ.
ಹೆಣ್ಣು ಭ್ರೂಣಪತ್ತೆ ಹಾಗೂ ಹತ್ಯೆ ಪ್ರಕರಣಗಳಲ್ಲಿ ಈಗಾಗಲೇ ಆರೋಪಿಗಳನ್ನು ಬಂ ಧಿಸಲಾಗಿದೆ. ಅದರಂತೆ ನಿನ್ನೆ ಗರ್ಭಪಾತದಿಂದ ರಕ್ತಸ್ರಾವವಾಗಿ ಚಿಕಿತ್ಸೆಗೆ ದಾಖಲಾಗಿರುವ ಮಹಿಳೆಯು ನೀಡಿರುವ ಮಾಹಿತಿಯಂತೆ ಮಧ್ಯವರ್ತಿಗಳು ಹೊಸಬರಾಗಿದ್ದು, ಹಳೇ ತಂಡವೇ ಗರ್ಭಪಾತ ಮಾಡಿಸಿರುವುದು ತಿಳಿದು ಬಂದಿದೆ. ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದು, ಮತ್ತಷ್ಟು ಮಾಹಿತಿ ಹೊರ ಬೀಳಲಿದೆ. -ಡಾ.ಬೆಟ್ಟಸ್ವಾಮಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ, ಮಂಡ್ಯ
– ಎಚ್.ಶಿವರಾಜು