ಹನೂರು: ಕೋಮು ಸೌಹಾರ್ದತೆಯಪ್ರತೀಕವಾದ ಪಟ್ಟಣದ ಅಧಿದೇವತೆ ಬೆಟ್ಟಳ್ಳಿಮಾರಮ್ಮ ಜಾತ್ರಾ ಮಹೋತ್ಸವದ ಹಿನ್ನೆಲೆದೇವಾಲಯದ ಮುಂಭಾಗ ಕಂಬ ಪ್ರತಿಷ್ಠಾಪನಾಕಾರ್ಯಕ್ರಮವು ತಡರಾತ್ರಿ ಜರುಗಿತು.
ಪಟ್ಟಣದ ಅಧಿದೇವತೆ ಬೆಟ್ಟಳ್ಳಿ ಮಾರಮ್ಮ ಜಾತ್ರಾಮಹೋತ್ಸವವು ತಾಲೂಕಿನ ಪ್ರಮುಖ ಹಬ್ಬಗಳಲ್ಲಿಒಂದಾಗಿದ್ದು, ಪ್ರತಿ ಬಾರಿ ವಿಜೃಂಭಣೆಯಿಂದಸ್ಥಳೀಯ, ಜಿಲ್ಲಾ, ಅಂತರ ಜಿಲ್ಲಾ ಮತ್ತುಅಂತರರಾಜ್ಯ ಭಕ್ತಾದಿಗಳ ಸಮ್ಮುಖದಲ್ಲಿಜರುಗುತ್ತಿತ್ತು.
ಆದರೆ, ಕಳೆದ ವರ್ಷದ ಜಾತ್ರೆಕೋವಿಡ್-19 ಹಿನ್ನೆಲೆ ಸರಳ ಮತ್ತುಸಾಂಪ್ರದಾಯಿಕವಾಗಿ ಜರುಗಿತು. ಈ ಬಾರಿ ಕೂಡಜಾತ್ರಾ ಮಹೋತ್ಸವದ ಮೇಲೆ ಕೋವಿಡ್-19ಕರಿಛಾಯೆ ಬಿದ್ದ ಹಿನ್ನೆಲೆ ಸರಳವಾಗಿ ಮತ್ತುಸಾಂಪ್ರದಾಯಿಕವಾಗಿ ಆಚರಿಸಲು ಕಂದಾಯಇಲಾಖೆ, ಪೊಲೀಸ್ ಇಲಾಖೆ , ಪಟ್ಟಣವಾಸಿಗಳುಮತ್ತು ದೇವಾಲಯದ ಆಡಳಿತ ಮಂಡಳಿಸದಸ್ಯರು ನಿರ್ಧಾರ ಕೈಗೊಂಡಿದ್ದರು.
ಏ.5ರಿಂದ 7ರವರೆಗೆ ಹಬ್ಬ: ಪಟ್ಟಣದ ಅಧಿದೇವತೆಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವವು ಏ.5ರಸೋಮವಾರದಿಂದ ಗುರುವಾರದವರೆಗೆಜರುಗಲಿದೆ. ಸೋಮವಾರ ದೇವಾಲಯಕ್ಕೆಜಾಗರೆ ಸಮರ್ಪಣೆ, ಮಂಗಳವಾರ ತಂಪುಜ್ಯೋತಿಸಮ ರ್ಪಣೆ , ಬುಧವಾರ ಬಾಯಿಬೀಗಕಾರ್ಯಕ್ರಮ ಮತ್ತು ಗುರುವಾರ ಬೆಳಗ್ಗೆ ಪ್ರಾತಃಕಾಲದಲ್ಲಿ ಅಗ್ನಿಕುಂಡ ದರ್ಶನದೊಂದಿಗೆ ಜಾತ್ರೆಗೆತೆರೆ ಬೀಳಲಿದೆ.
ಕೋಮು ಸೌಹಾರ್ದತೆ ಪ್ರತೀಕ: ಪಟ್ಟಣದ ಬೆಟ್ಟಳ್ಳಿಮಾರಮ್ಮ ಜಾತ್ರಾ ಮಹೋತ್ಸವವು ಕೋಮುಸೌಹಾರ್ದತೆಯ ಪ್ರತೀಕವಾಗಿದ್ದು ಈ ಹಬ್ಬದಒಂದು ವಾರದ ಮುಂಚೆಯೇ ಪಟ್ಟಣವಾಸಿಗಳುಮಾಂಸಾಹಾರ ತ್ಯಜಿಸಿದ್ದು ಮಾರಮ್ಮನಪತಿದೇವರು ಎಂಬ ಪ್ರತೀತಿಯಿರುವ ಕಂಬಪ್ರತಿಷ್ಠಾಪನೆಯಾದ ದಿನದಿಂದಲೂ ಅಡುಗೆಗೆಒಗ್ಗರಣೆ, ಕರಕಲು ಪದಾರ್ಥಗಳನ್ನುಬಳಸುವುದಿಲ್ಲ. ಅಲ್ಲದೆ ಪಟ್ಟಣದ ಮುಸಲ್ಮಾನಬಂಧುಗಳು ಸಹ ತಮ್ಮ ಮಾಂಸ ವ್ಯಾಪಾರವನ್ನುಸ್ಥಗಿತಗೊಳಿಸಿದ್ದಾರೆ.
ಅಲ್ಲದೆ ಪಟ್ಟಣದ ಮಾಂಸಹಾರಿ ಹೋಟೆಲ್‌ಗಳು,ಸಂಜೆಯ ವೇಳೆ ಮಾರಾಟ ಮಾಡುವ ಮೀನಿನಅಂಗಡಿಗಳು, ಕಬಾಬ್ ವ್ಯಾಪಾರಿಗಳು, ಗೋವಿಮಂಚೂರಿ ವ್ಯಾಪಾರಿಗಳು, ಆಮ್ಲೆàಟ್ ಇನ್ನಿತರಮಾಂಸಾಹಾರಿ ವ್ಯಾಪಾರ ವಹಿವಾಟು ಕೂಡಸ್ಥಗಿತವಾಗಿದೆ.
ಒಟ್ಟಾರೆ ಪಟ್ಟಣದ ಎಲ್ಲಾಮತೀಯರು, ಸಮಾಜದವರು ಮಾಂಸಹಾರಮತ್ತು ಕರಕಲು, ಒಗ್ಗರಣೆ ಪದಾರ್ಥಗಳಬಳಕೆಯನ್ನು ಅಡುಗೆಯಲ್ಲಿ ಬಳಸದೆ ಇರುವುದುಕೋಮು ಸೌಹಾರ್ದತೆಯ ಜಾತ್ರೆಯ ಪ್ರತೀಕವಾಗಿದೆ.ಮುಸಲ್ಮಾನರು, ಕ್ರೆçಸ್ತರಿಂದ ಪೂಜೆ:ಈ ಜಾತ್ರಾ ಮಹೋತ್ಸವದಲ್ಲಿ ಮುಸಲ್ಮಾನ ಮತ್ತುಕ್ರೆçಸ್ತರು ಸಹ ಭಾಗವಹಿಸುತ್ತಿದ್ದು, ದೇವಾಲಯದಮುಂಭಾಗದಲ್ಲಿ ಪ್ರತಿಷ್ಠಾಪಿಸಲಾಗಿರುವ ಕಂಬಕ್ಕೆಉಪ್ಪು ಹಾಕಿ ತಮ್ಮ ಮನದ ಬೇಡಿಕೆಗಳನ್ನುದೇವಿಯಲ್ಲಿ ಅಹಲವಾಲು ಇಟ್ಟಲ್ಲಿ ತಮ್ಮ ಕಷ್ಟಗಳುಬಗೆಹರಿದು ಇಷ್ಟಾರ್ಥಗಳು ಸಿದ್ಧಿಸಲಿವೆ ಎಂಬನಂಬಿಕೆ ಇದೆ.
ವಿನೋದ್ ಎನ್.ಗೌಡ