ಮುಂಬಯಿ, ಆ. 22: ಶ್ರಾವಣ ಮಾಸವು ವಿಶೇಷವಾಗಿ ಭಗವಂತನ ಚಿಂತನೆಗೆ ಯೋಗ್ಯವಾದ ಪುಣ್ಯ ಕಾಲವಾಗಿದೆ. ಈ ತಿಂಗಳ ಎಲ್ಲಾ ದಿನಗಳಲ್ಲಿ ವ್ರತ, ತಪ, ಪೂಜೆ ಪುರ ಸ್ಕಾರಗಳನ್ನು ಮಾಡುವುದರಿಂದ ವಿಶೇಷ ಫಲವು ಪ್ರಾಪ್ತಿಯಾಗುತ್ತದೆ. ಬಂಟರ ಸಂಘದ ಮಹಿಳಾ ವಿಭಾಗವು ಪ್ರತಿವರ್ಷ ಶ್ರಾವಣ ಮಾಸದಲ್ಲಿ ಅರಸಿನ ಕುಂಕುಮ ಸಂಭ್ರಮವ ನ್ನಾಚರಿಸುತ್ತಾ ಭಗವಂತನ ಕೃಪೆಗೆ ಪಾತ್ರರಾಗುತ್ತಿರುವುದು ಔಚಿತ್ಯ ಪೂರ್ಣ ಸೇವಾ ಕಾರ್ಯವೆಂದು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ನುಡಿದರು.
ಗೌರವ ಅತಿಥಿಯಾಗಿ ಆಗಮಿಸಿದ ರಮಾ ವಿವೇಕ್ ಶೆಟ್ಟಿ ಅವರು ಮಾತನಾಡಿ, ಬಂಟರ ಸಂಘ ಮಹಿಳಾ ವಿಭಾಗವು ಪ್ರಬುದ್ಧವಾಗಿ ಬೆಳೆದು ನಿಂತಿದ್ದು, ಮಹಿಳೆಯರು ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳು, ಕಾರ್ಯ ಚಟುವಟಿಕೆಗಳು ವ್ಯವಸ್ಥಿತವಾಗಿ ನಡೆಯುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು, ಕಳೆದ ಅನೇಕ ವರ್ಷಗಳಿಂದ ಸಂಘದ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದ್ದೇನೆ. ಸಂಘವು ಮಹಿಳೆಯರಿಗೆ ನೀಡುತ್ತಿರುವ ಸ್ವಾತಂತ್ರ್ಯ ಪ್ರೋತ್ಸಾಹದಿಂದ ಮಹಿಳೆಯರ ಆತ್ಮಶಕ್ತಿಗೆ ಮತ್ತಷ್ಟು ಬಲ ಬಂದಿದೆ. ಪುರುಷರು, ಮಹಿಳೆಯರೆಂಬ ಭೇದವಿಲ್ಲದೆ ಎಲ್ಲರೂ ಒಂದಾಗಿ ಸಂಘವನ್ನು ಬೆಳೆಸುವುದರ ಜತೆಗೆ ಸಮಾಜವನ್ನು ಕಟ್ಟುವ ಕಾಯಕದಲ್ಲಿ ಮಗ್ನರಾಗಿರುವುದು ಶ್ಲಾಘನೀಯ ಎಂದರು.
ಗೌರವ ಅತಿಥಿ ಶೋಭಾ ಸದಾನಂದ ಶೆಟ್ಟಿ ಅವರು ಮಾತನಾಡಿ, ಬಂಟರ ಸಂಘ ಮಹಿಳಾ ವಿಭಾಗದ ಸಾಮಾಜಿಕ ಕಾರ್ಯಚಟುವಟಿಕೆಗಳ ಗುಣಮಟ್ಟ ವೃದ್ಧಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜ ವನ್ನು ಬಲಿಷ್ಠವಾಗಿಸೋಣ. ನಾವು ಬುದ್ಧಿವಂತರಾಗುವುದರ ಜತೆಗೆ ವಿದ್ಯಾ, ವಿನಯ ಸಂಪನ್ನರಾಗೋಣ, ಮದ- ಮಾತ್ಸರ್ಯದಿಂದ ದೂರವಿ ರೋಣ. ಸುಖ -ಶಾಂತಿ ಸಮೃದ್ಧಿಯ ಬಾಳು ನಮ್ಮದಾಗಲಿ ಎಂದರು.
ಈ ಸಂದರ್ಭ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಮುಖ್ಯ ಅತಿಥಿ ಸುಲತಾ ಸತೀಶ್ ಶೆಟ್ಟಿ ಗೌರವ ಅತಿಥಿಗಳಾದ ರಮಾ ವಿವೇಕ್ ಶೆಟ್ಟಿ, ಶೋಭಾ ಸದಾನಂದ ಶೆಟ್ಟಿಯವರನ್ನು ಶಾಲು ಹೊದಿಸಿ, ಪುಷ್ಫಗುಚ್ಛ, ನೆನಪಿನ ಕಾಣಿಕೆಯನಿತ್ತು ಮಹಿಳಾ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಉಪಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಗೌರವ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ, ಕೋಶಾಧಿಕಾರಿ ಆಶಾ ವಿ. ರೈ, ಜತೆ ಕಾರ್ಯದರ್ಶಿ ಮನೋರಮಾ ಎನ್.ಬಿ. ಶೆಟ್ಟಿ, ಜತೆ ಕೋಶಾಧಿಕಾರಿ ರತ್ನಾಪಿ. ಶೆಟ್ಟಿ ಸಮ್ಮಾನಿಸಿದರು. ಉಪ ಸಮಿತಿಗಳ ಪದಾಧಿಕಾರಿಗಳಾದ ಪ್ರಶಾಂತಿ ಡಿ. ಶೆಟ್ಟಿ, ಶಶಿಕಲಾ ಪೂಂಜ, ಅಮಿತಾ ಶೆಟ್ಟಿ, ಲತಾ ಕರ್ನಿರೆ ವಿಶ್ವನಾಥ ಶೆಟ್ಟಿ ಇವರು ದೀಪ ಬೆಳಗಿ, ಅರಸಿನ ಕುಂಕುಮ, ತಾಂಬೂಲ ಅಕ್ಷತೆಯೊಂದಿಗೆ ಅತಿಥಿ ಗಣ್ಯರನ್ನು ಗೌರವಿಸಿದರು.
Advertisement
ಆ. 20ರಂದು ಮಂಗಳವಾರ ಸಂಘದ ಮಹಿಳಾ ವಿಭಾಗದ ಆಶ್ರಯದಲ್ಲಿ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿದ ಶ್ರಾವಣ ಸಂಭ್ರಮ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೂ ಸಂಸ್ಕೃತಿಯಲ್ಲಿ ಅರಸಿನ ಮತ್ತು ಕುಂಕುಮಕ್ಕೆ ಆತ್ಯಂತ ಮಹತ್ವದ ಸ್ಥಾನವಿದೆ. ಹಳದಿ ನಮ್ಮ ಆರೋಗ್ಯದ ಸಂಕೇತವಾದರೆ, ಕುಂಕುಮ ಸೌಭಾಗ್ಯದ ಸಂಕೇ ತವಾಗಿದೆ. ಹಿಂದಿನ ಕಾಲದಲ್ಲಿ ಒಂದು ಹೆಣ್ಣು ವಿವಾಹವಾಗಿದ್ದಾಳೆ ಎಂದು ನಿರ್ಧರಿಸುತ್ತಿದ್ದುದು ಆಕೆಯ ಹಣೆಯಲ್ಲಿನ ಚಂದ್ರಾಕಾರದ ಕುಂಕುಮದ ಬೊಟ್ಟು ಅವಳ ವಿವಾಹಕ್ಕೆ ಸಾಕ್ಷಿ ನೀಡುತ್ತಿತ್ತು. ಲೋಕಕ್ಕೆ ಸದಾ ಸುಖವಾಗಲಿ ಎಂಬುದೇ ನಮ್ಮ ಎಲ್ಲ ಹಬ್ಬಗಳ ಆಶಯವಾಗಿದೆ. ಅರಸಿನ-ಕುಂಕುಮದ ಈ ಸಂಪ್ರದಾಯ ಮುಂದೆ ಉಳಿಯ ಬೇಕಾದರೆ, ಅದನ್ನು ಈಗಿನಿಂದಲೇ ನಮ್ಮ ಹೊಸ ಪೀಳಿಗೆಗೆ ತಿಳಿ ಹೇಳುವ ಅಗತ್ಯವಿದೆ. ಒಂದು ಮನೆ ನಂದನವನವಾಗಬೇಕಾದರೆ ಆ ಮನೆಯಲ್ಲಿರುವ ಗೃಹಿಣಿಯ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿದೆ. ಗೃಹಿಣಿ ಇಲ್ಲದ ಗೃಹ ಅರಣ್ಯಕ್ಕೆ ಸಮಾನವೆಂಬ ಚಿಂತಕರ ನುಡಿ ಅಕ್ಷರಶಃ ಸತ್ಯವಾಗಿದೆ. ಸ್ತ್ರೀ ಮತ್ತು ಪುರುಷ ಶಕ್ತಿಯ ಸಂಬಂಧ ಅತ್ಯಂತ ಗಟ್ಟಿಯಾಗಲು ನಾವು ಪ್ರಯತ್ನಿಸೋಣ ಎಂದರು.
Related Articles
Advertisement
ಸಮ್ಮಾನಿತರನ್ನು ಮಹಿಳಾ ವಿಭಾಗದ ಕೋಶಾಧಿಕಾರಿ ಆಶಾ ವಿ. ರೈ, ಉಪಕಾರ್ಯಾಧ್ಯಕ್ಷೆ ಉಮಾಕೃಷ್ಣ ಶೆಟ್ಟಿ, ಕಾರ್ಯಾದರ್ಶಿ ಚಿತ್ರಾ ಆರ್.ಶೆಟ್ಟಿ ಕ್ರಮವಾಗಿ ಪರಿಚಯಿಸಿದರು. ವೇದಿಕೆಯಲ್ಲಿ ಸಮ್ಮಾನಿತರ ಜತೆಗೆ ಬೊಲ್ಯಗುತ್ತು ವಿವೇಕ್ ಶೆಟ್ಟಿ, ಡಾ| ಸತೀಶ್ ಶೆಟ್ಟಿ ಕುಟುಂಬಿಕರು ಉಪಸ್ಥಿತರಿದ್ದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರನ್ನು ರಂಜನಿ ಎಸ್ ಹೆಗ್ಡೆ ಹೂಗುಚ್ಛ ನೀಡಿ ಗೌರವಿಸಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಸಂಘದ ಉಪಾಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಬಿ. ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಯುವ ವಿಭಾಗದ ಕಾರ್ಯಧ್ಯಕ್ಷ ಶರತ್ ಶೆಟ್ಟಿ ಅವರಲ್ಲದೆ ಸಂಘದ ಮಾಜಿ ಅಧ್ಯಕ್ಷ ನ್ಯಾಯವಾದಿ ಆರ್. ಸಿ. ಶೆಟ್ಟಿ, ಸುಧಾಕರ ಎಸ್. ಹೆಗ್ಡೆ, ಬಿ. ವಿವೇಕ್ ಶೆಟ್ಟಿ, ಶಕಿಲಾ ಪಿ. ಶೆಟ್ಟಿ, ಶೋಭಾ ಶಂಕರ್‌ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರಾದ ಸುಜಯಾ ಆರ್. ಶೆಟ್ಟಿ, ಲತಾ ಜಯರಾಮ ಶೆಟ್ಟಿ, ಪುಣೆ ಬಂಟರ ಸಂಘದ ಉಪಾಧ್ಯಕ್ಷ ಸತೀಶ್ ಶೆಟ್ಟಿ ಹಾಗೂ ಮಹಿಳಾ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಸಂಘದ ನೂತನ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್. ಪಯ್ಯಡೆ, ಕೊಡುಗೆ ದಾನಿ ಆರತಿ ಶಶಿಕಿರಣ್ ಶೆಟ್ಟಿ ಅವರ ತಾಯಿ ಲೀಲಾವತಿ ಹೆಗ್ಡೆಯವರನ್ನು ಗೌರವಿಸಲಾಯಿತು. ಸಂಘದ ಉಪ ಸಮಿತಿಗಳ ಕಾರ್ಯಾಧ್ಯಕ್ಷರು, ಪ್ರಾದೇಶಿಕ ಸಮನ್ವಯಕರು, ಪ್ರಾದೇಶಿಕ ಕಾರ್ಯಾಧ್ಯಕ್ಷೆಯರು, ವಿವಿಧ ಬಂಟ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಗೌರವ ನೀಡಲಾಯಿತು. ಡಾ| ಸುನೀತಾ ಶೆಟ್ಟಿ, ಭೂಮಿಕಾ ಶೆಟ್ಟಿಯವರ ಪ್ರಾಯೋಜಿಕತ್ವದಲ್ಲಿ ಬಂಟರವಾಣಿಯ ವರ್ಷದ ಅತ್ಯುತ್ತಮ ಬರಹ ಪ್ರಶಸ್ತಿಯನ್ನು ಡಾ| ಪ್ರೀತಾ ಶೆಟ್ಟಿಯವರಿಗೆ ಪ್ರದಾನಿಸಲಾಯಿತು. ಡಾ| ಸುನೀತಾ ಶೆಟ್ಟಿ, ಭೂಮಿಕಾ ಶೆಟ್ಟಿ, ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತರಾಮ ಬಿ. ಶೆಟ್ಟಿ ವೇದಿಕೆಯಲ್ಲಿದ್ದರು.
ಮಹಿಳಾ ವಿಭಾಗದ ಗೌರವ ಕಾರ್ಯದರ್ಶಿ ಚಿತ್ರಾ ಆರ್. ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಸಂಘದ ಉಮಾಕೃಷ್ಣ ಶೆಟ್ಟಿ ಮೆನೇಜ್‌ಮೆಂಟ್ ಕಾಲೇಜಿನ ವಿದ್ಯಾರ್ಥಿನಿ ವೈಭವ ವಿ. ಶೆಟ್ಟಿಯವರಿಗೆ ಅತ್ಯುತ್ತಮ ವಿದ್ಯಾರ್ಥಿನಿ ಪುರಸ್ಕಾರ, ವಿನೋದಾ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಸಂಘದ ಅಣ್ಣಲೀಲಾ ಕಾಲೇಜಿನ ವಿದ್ಯಾರ್ಥಿನಿ ಸ್ಪರ್ಷಾ ಶೆಟ್ಟಿಯವರಿಗೆ ಆಲ್ರೌಂಡರ್ ಪ್ರಶಸ್ತಿ, ಸಂಘದ ಗೌರವ ಕೋಶಾಧಿಕಾರಿ ಪ್ರವೀಣ್ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಸಂಘದ ಎಸ್.ಎ. ಶೆಟ್ಟಿ ಕಾಲೇಜಿನ ವಿದ್ಯಾರ್ಥಿನಿ ಶ್ರೇಯಾ ಯತೀಂದ್ರ ರೈಯರಿಗೆ ಅತ್ಯುತ್ತಮ ವಿದ್ಯಾರ್ಥಿನಿ ಪ್ರಶಸ್ತಿ, ಸಂಘದ ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿಯವರ ಪ್ರಾಯೋಜಕತ್ವದಲ್ಲಿ ಅಕ್ಷಿತಾ ಶೆಟ್ಟಿಯವರಿಗೆ ಅತ್ಯುತ್ತಮ ವಿದ್ಯಾರ್ಥಿನಿ ಪ್ರಶಸ್ತಿ, ಭವಾನಿ ರಘುರಾಮ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ವಿಕಲಚೇತನ ಮಗು ಶ್ರೇಯಾಂಕ್ ಶೆಟ್ಟಿಯವರಿಗೆ ಗೌರವ ನೀಡಲಾಯಿತು.
ಆರಂಭದಲ್ಲಿ ಜಯಲಕ್ಷ್ಮೀ ಜಗನ್ನಾಥ ಶೆಟ್ಟಿ ಪ್ರಾರ್ಥನೆ ಹಾಡಿದರು. ಸಂಘದ ಮಹಿಳಾ ವಿಭಾಗದ ಸದಸ್ಯೆಯರು ಬಂಟಗೀತೆ ಹಾಡಿದರೆ, ಸಭಿಕರು ಎದ್ದು ನಿಂತು ಗೌರವ ಸಲ್ಲಿಸಿದರು. ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಹಾಗೂ ಅತಿಥಿ ಗಣ್ಯರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ ಅವರು ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಚಿತ್ರಾ ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಮನೋರಮಾ ಎನ್.ಬಿ. ಶೆಟ್ಟಿ, ಆಮಂತ್ರಿತ ಗಣ್ಯರ ಹೆಸರು ವಾಚಿಸಿದರು. ಡಾ| ಪೂರ್ಣಿಮಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಮನೋರಮಾ ಎನ್. ಬಿ. ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಭೋಜನದ ವ್ಯವಸ್ಥೆ ಮಾಡಲಾ ಯಿತು. ಸಭಾ ಕಾರ್ಯಕ್ರಮಕ್ಕೆ ಮುನ್ನ ಮಹಿಳಾ ಸದಸ್ಯೆಯರಿಂದ ಭಜನೆ ಜರಗಿತು. ಶಾಂತಾರಾಮ ಪುತ್ರನ್ ಸಹಕರಿಸಿದ್ದರು. ಆ ಬಳಿಕ ವಿಶ್ವೇಶದಾಸ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಇವರಿಂದ ಸತಿ ಸುಕನ್ಯಾ ಹರಿಕಥಾ ಕಾಲಕ್ಷೇಪ ಜರಗಿತು. ಹಿಮ್ಮೇಳದಲ್ಲಿ ಶೇಖರ್ ಸಸಿಹಿತ್ಲು, ಜನಾರ್ದನ್, ರವಿ, ಸಂಜಯ್ ಸಹಕರಿಸಿದ್ದರು. ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು.
ಮಹಿಳಾ ವಿಭಾಗವು ಡಾ| ಶಾರದಾ ಶೆಟ್ಟಿಯವರ ಕಾರ್ಯಾಧ್ಯಕ್ಷತೆಯಲ್ಲಿ ಆರಂಭಗೊಂಡಂದಿನಿಂದ ಇಂದಿನ ವರೆಗೆ ವಿವಿಧ ಚಟುವಟಿಕೆಗಳ ಜತೆಗೆ ಶ್ರಾವಣ ಸಂಭ್ರಮ, ಅರಸಿನ -ಕುಂಕುಮ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಿಕೊಂಡು ಬರಲಾಗುತ್ತಿದೆ. ವಿಶಿಷ್ಟ ತಿಂಗಳಾದ ಶ್ರಾವಣ ಮಾಸದಿಂದ ಮೊದಲ್ಗೊಂಡು ಹಬ್ಬ ಹರಿದಿನಗಳು ಆರಂಭವಾಗತೊಡಗಿವೆ. ಸೃಷ್ಟಿ ಅಥವಾ ಪ್ರಕೃತಿ ಪೂಜೆಯಿಂದ ಎಲ್ಲರ ಮನ ಬೆಳಗಲಿ, ಸಂತೃಪ್ತಿ ದೊರೆಯಲೆಂದು ಆಶಿಸಿದರು. ಆರೋಗ್ಯದ ಗುಣ ಹೊಂದಿರುವ ಹಳದಿ ಹಾಗೂ ಆಧ್ಯಾತ್ಮಿಕ ಶಕ್ರಿಯನ್ನು ಹೊಂದಿರುವ ಕುಂಕುಮ ಮುತ್ತೈದೆಯರಿಗೆ ಆಯುರಾರೋಗ್ಯ ಐಶ್ವರ್ಯ ತುಂಬಲೆಂದು ಹಾರೈಸುತ್ತಿದ್ದೇನೆ. ಬಂಟರ ಸಂಘವು ಆರಂಭದಿಂದಲೂ ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯವನ್ನು ನೀಡುತ್ತಾ ಬಂದಿದೆ. ಈ ಕಾರಣದಿಂದಲೇ ಮಹಿಳೆಯರ ಸಂಘಟನೆ, ಸಾಮಾಜಿಕ ಕಾರ್ಯ ಚಟುವಟಿಕೆಗಳು ಬೆಳೆಯಲು ಸಾಧ್ಯವಾಗಿದೆ. – ರಂಜನಿ ಸುಧಾಕರ ಹೆಗ್ಡೆ, ಕಾರ್ಯಾಧ್ಯಕ್ಷೆ, ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗ