Advertisement

ಹಬ್ಬಗಳು ಭಾರತೀಯ ಸಂಸ್ಕೃತಿಯ ಪ್ರತೀಕ

09:58 PM Jan 18, 2022 | Team Udayavani |

ಮಹಾಲಿಂಗಪುರ: ಹಬ್ಬಗಳು ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ ಮತ್ತು ದೇಶಿಯ ಸೊಗಡಿನ ಐತಿಹಾಸಿಕ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿವೆ ಎಂದು ಕೆಎಲ್‌ಇ ಪಾಲಿಟೆಕ್ನಿಕ್‌ ಪ್ರಾಚಾರ್ಯ ಎಸ್‌.ಐ. ಕುಂದಗೋಳ ಹೇಳಿದರು.

Advertisement

ವಿವೇಕ ಜಯಂತಿ ಮತ್ತು ಮಕರಸಂಕ್ರಮಣ ಹಬ್ಬದ ನಿಮಿತ್ತ ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ ಸಿಪಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸಂಕ್ರಾಂತಿ ಸೊಗಡು-ವಿವೇಕ ಚಿಂತನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಧುನೀಕರಣ, ಜಾಗತೀಕರಣ ಪರಿಣಾಮ ಇಂದು ನಮ್ಮ ಮೂಲ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿಗಳು ಸಂಕ್ರಾಂತಿ ಸೊಗಡು-ವಿವೇಕ ಚಿಂತನೆ ಕಾರ್ಯಕ್ರಮದ ಮೂಲಕ ನಮ್ಮ ದೇಶ, ನಾಡಿನ ಸಂಸ್ಕೃತಿ, ಆಚಾರಗಳನ್ನು ನೆನಪಿಸುವ ಮತ್ತು ಮಕ್ಕಳಿಗೆ ಪರಿಚಯಿಸುವ ಕಾರ್ಯಕ್ರಮ ಮಾಡಿದ್ದು ಸ್ವಾಗತಾರ್ಹ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಥಮಿಕ ಶಾಲೆಯ ಮುಖ್ಯಗುರುಮಾತೆ ಆರ್‌.ಎ.ಬನ್ನೂರ ಮಾತನಾಡಿ, ಸಂಕ್ರಾಂತಿ ಮತ್ತು ವಿವೇಕಾಂದರ ಜಯಂತಿ ಎರಡು ಕಾರ್ಯಕ್ರಮಗಳನ್ನು ಒಟ್ಟಿಗೆ ಆಚರಿಸಲು ನಿರ್ಣಯಿಸಿ ಸಂಕ್ರಾಂತಿ ಸೊಗಡು-ವಿವೇಕ ಚಿಂತನೆ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ನಮ್ಮ ಹಬ್ಬ ಹರಿದಿನಗಳ ಮಹತ್ವವನ್ನು ಅವರ ಚಟುವಟಿಕೆಗಳ ಮೂಲಕವೇ ಪರಿಸಲು ಪ್ರಯತ್ನಿಸಿದ್ದೇವೆ. ಈ ಅಪರೂಪದ ಕಾರ್ಯಕ್ರಮಕ್ಕೆ ನಮ್ಮ ಶಿಕ್ಷಕಿಯರ ಬಳಗದ ಶ್ರಮ ಮತ್ತು ಪಾಲಕರ ಸಹಕಾರ ಮುಖ್ಯವಾಗಿದೆ ಎಂದರು. ಪತ್ರಕರ್ತ ಚಂದ್ರಶೇಖರ ಮೋರೆ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳಿಗೆ ವಿದ್ಯೆಯ ಜತೆಗೆ ಮೌಲ್ಯಾಧಾರಿತ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡಬೇಕಾಗಿದ್ದು ಅಗತ್ಯವಾಗಿದೆ. ಮನುಷ್ಯ ಸಮಾಜದಲ್ಲಿ ಗೌರವಯುತ, ಸಂಸ್ಕಾರಸಹಿತ, ಕುಟುಂಬ ಮತ್ತು ಸಮಾಜಕ್ಕೆ ಹೊರೆಯಾಗದಂತೆ ಸ್ವಾವಲಂಬಿಯಾಗಿ ಬದುಕಲು ಕಲಿಸುವುದೇ ನಿಜವಾದ ಶಿಕ್ಷಣವಾಗಿದೆ ಎಂದರು.

ಗಮನ ಸೆಳೆದ ಮಕ್ಕಳ ಸ್ಪರ್ಧೆಗಳು: ಸಂಕ್ರಾಂತಿ ಸೊಗಡು-ವಿವೇಕ ಚಿಂತನೆ ಕಾರ್ಯಕ್ರಮದ ನಿಮಿತ್ತ 1ರಿಂದ 7ನೇ ತರಗತಿವರೆಗೂ ಎಲ್ಲ ಮಕ್ಕಳಿಗೂ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಬಿ.ಎ.ಬಂತಿ, ಪ್ರೌಢಶಾಲೆಯ ಪ್ರಭಾರಿ ಉಪಪ್ರಾಚಾರ್ಯ ಬಿ.ಎನ್‌.ಅರಕೇರಿ, ಶಿಕ್ಷಕಿಯರಾದ ಜೆ.ಎಸ್‌.ಹಿರೇಮಠ, ಕೆ.ಎಂ. ಹುನಗುಂದ, ಬಿ.ಎಸ್‌.ಜೇಡರ, ಎಸ್‌.ಎಸ್‌.ಹುಡೇದ, ಎನ್‌.ಪಿ. ಹೊಸಪೇಟಿ, ನೀಲಿ ಮೇಡಂ ಇದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next