ನೋಟವೂ ಬದಲಾಗುತ್ತಿದೆ.
Advertisement
ನನ್ನ ಮಗಳು “ಅಪ್ಪಾ ಹೋಳಿ ಹಬ್ಬಕ್ಕೆ ಏಕೆ ವಿಶ್ ಮಾಡಲಿಲ್ಲ?’ ಅಂತ ಕೇಳಿದಾಕ್ಷಣ ಉತ್ತರಿಸಲು ಹಿಂಜರಿದದ್ದು ಏಕೆ ಅಂತ ಯೋಚಿಸುತ್ತಾ ಕುಳಿತೆ. ಕೆಲ ವರ್ಷಗಳ ಹಿಂದೆ ಮಹಾರಾಷ್ಟ್ರದ ಪೂನಾ ನಗರದಲ್ಲಿ ಹೋಳಿಹಬ್ಬದಂದು ನಡೆದ ಘಟನೆ ಕಣ್ಣ ಮುಂದೆ ಬಂದುಬಿಟ್ಟಿತು. ಅಲ್ಲಿ ಬಡವರು, ಶ್ರೀಮಂತರು, ವಿದ್ಯಾವಂತರು, ಹೆಂಗಸರು, ಗಂಡಸರು, ಮಕ್ಕಳು ಎಲ್ಲರೂ ಸೇರಿ ಹೋಳಿಯಾಡಿಹಬ್ಬವನ್ನು ಕೊಂಡಾಡಿದರು. ಸಂಭ್ರಮ ಬಣ್ಣಗೆಡಲು ಜಾಸ್ತಿ ಹೊತ್ತು ಬೇಕಿರಲಿಲ್ಲ. ಇದ್ದಕ್ಕಿದ್ದಂತೆ ಹೋಲಿಯಾಡುತ್ತಿದ್ದ 270 ಜನ
ರನ್ನು ಒಂದೇ ಸಲ ಅರೆಸ್ಟ್ ಮಾಡಿದ ಸುದ್ದಿ ಕೇಳಿಬಂತು. ನೋಡಿದರೆ, ಇದರಲ್ಲಿ ಮುಕ್ಕಾಲು ಪಾಲು ಹದಿಹರೆಯದವರು. ಅದೂ ವಿದ್ಯಾವಂತ ರಾದ, ಕೈತುಂಬ ಸಂಬಳ ಪಡೆಯುವ ಯುವಕ, ಯುವತಿಯರು. ಅಸಲಿ ವಿಚಾರ ಏನೆಂದರೆ, ಇವರೆಲ್ಲರೂ
ರೇವ್ ಪಾರ್ಟಿಯಲ್ಲಿ ಭಾಗಿಗಳಾಗಿದ್ದರು. ಅದಕ್ಕಾಗಿ ಪೊಲೀಸರು ಅರೆಸ್ಟ್ ಮಾಡಿ ಕರೆದೊಯ್ಯುತ್ತಿದ್ದಾಗ ಮುಖಗಳನ್ನು ಬಟ್ಟೆಗಳಿಂದ ಮುಚ್ಚಿಕೊಂಡು ತಲೆ ತಗ್ಗಿಸಿ ಹೋಗುತ್ತಿದ್ದರು. ಹಿಂದಿನ ರಾತ್ರಿ ಇದ್ದ ಸಂತೋಷ ಮರುದಿನದ ಹಗಲಲ್ಲಿ ಅವಮಾನವಾಗಿ
ಎದುರಿಗೆ ನಿಂತಿದೆ. ಅರೆಸ್ಟ್ ಆದವರ ಅಪ್ಪ ಅಮ್ಮಂದಿರಿಗೆ ಸುದ್ದಿ ಮುಟ್ಟಿತು. “ನಮ್ಮ ಮಕ್ಕಳು ಪಾರ್ಟಿಗೆ ಹೋಗಿದ್ದರಾ?’ ಅಂತ ಶಾಕ್ ಆದರು. ಆ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ತಮ್ಮ ಸಂಭ್ರಮ, ಸಡಗರದ ಬಗೆಗಿನ ಪಾಪಪ್ರಜ್ಞೆಯ
ಅರಿವಿತ್ತು. ಅದಕ್ಕೆ ತಾವು ಎಲ್ಲಿಗೆ ಹೋಗುತ್ತಿದ್ದೇವೆ ಅಂತ ಹೆತ್ತವರಿಗೆ ಹೇಳಿಯೇ ಇರಲಿಲ್ಲ. ಮಾದಕವಸ್ತುಗಳ ಮತ್ತಿನಲ್ಲಿ ಬದುಕನ್ನು ಸಂಭ್ರಮಿಸಬಹುದು ಎಂದು ಯೋಚಿಸುವ ಆ ಯುವ ಪೀಳಿಗೆಯನ್ನು ನೋಡಿದಾಗ ಒಬ್ಬ ತಂದೆಯಾಗಿ ನನ್ನ ಎದೆ ತಲ್ಲಣಗೊಂಡಿತು.
“ಯಾಕಪ್ಪಾ ನನಗೆ ಹೋಲಿಗೆ ವಿಶ್ ಮಾಡಲಿಲ್ಲ?’ ಮತ್ತದೇ ಮಗಳ ಪ್ರಶ್ನೆ ಕಾಡತೊಡಗಿತು. ತಮ್ಮ ಮಕ್ಕಳನ್ನು ಯಾರೋ ಯಾಮಾರಿಸಿ, ರೇವ್ ಪಾರ್ಟಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೆತ್ತವರು ಪೊಲೀಸರ ಮುಂದೆ ರೋಧಿಸುತ್ತಿದ್ದಾರೆ.
ಹಾಗಂತ ಅವರೆಲ್ಲ ಮಕ್ಕಳ ಮನಸ್ಸನ್ನು ಅರಿಯದವರೇ ಅಥವಾ ಆ ಕ್ಷಣದಲ್ಲಿ ತಮ್ಮ ಮಕ್ಕಳನ್ನು ಪೊಲೀಸರಿಂದ ಹೇಗಾದರು ಮಾಡಿ ಕಾಪಾಡಬೇಕೆಂದು ಏನೂ ಅರಿಯದಂತೆ ನಟಿಸುತ್ತಿದ್ದಾರೆಯೇ? ಕಂಡು ಹಿಡಿಯಲು ಆಗಲಿಲ್ಲ. ಬಣ್ಣದ ಸೌಂದರ್ಯ ಬೆಳಕಿನಲ್ಲೇ ಗೊತ್ತಾಗೋದು. ಹೋಳಿ ಹಬ್ಬವನ್ನು ಕತ್ತಲಲ್ಲಿ ಕೊಂಡಾಡಬೇಕು ಅಂತ ಅವರ ಮಕ್ಕಳು ಯೋಚಿಸಿದಾಗಲೇ ಅವರು ಒಬ್ಬರ
ಮೇಲೊಬ್ಬರು ಎರಚಿಕೊಂಡದ್ದು ಬಣ್ಣಗಳನ್ನಲ್ಲ, ಮಸಿಯನ್ನು ಎಂಬುದು ಅರ್ಥವಾಗುತ್ತದೆ. ಮಾದಕ ವಸ್ತುಗಳಿಂದ -ಕಾಂಡೋಮ್‌ವರೆಗೆ
ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾಮಿಸುವುದಕ್ಕೆ ಮುಂಜಾಗ್ರತೆ ಇರಬೇಕೆಂದು ಯೋಚಿಸಿದ ಮಕ್ಕಳಿಗೂ, ಈ ಕ್ಷಣದಲ್ಲಿ ಹೇಗಾದರು ಮಕ್ಕಳನ್ನು ಬಚಾವ್ ಮಾಡಲು ಹವಣಿಸುತ್ತಿರುವ ಹೆತ್ತವರಿಗೂ ದೊಡ್ಡ ವ್ಯತ್ಯಾಸವೇನು ಕಾಣಿಸುತ್ತಿಲ್ಲ. ಇದೆಲ್ಲ
ಎಲ್ಲೋ ದೂರದ ಮಹಾರಾಷ್ಟ್ರದಲ್ಲಿ ನಡೆದದ್ದು ಅಂತ ನಾವೆಲ್ಲ ಮುಗುಮ್ಮಾಗಿರಲು ಆಗದು. ಆಭಾಸವೂ, ಹಿಂಸೆಯೂ ನಮ್ಮ ಸಡಗರಗಳಲ್ಲೂ ಸೇರಿವೆ. ಸಂಭ್ರಮಿಸುವ ಅರ್ಥ ತಿಳಿಯದ ನಮ್ಮ ಮಕ್ಕಳೂ ಇದ್ದಾರೆ.
ಬೇಕಿಲ್ಲ’ ಅಂತ ಮುಖಕ್ಕೆ ರಾಚುವಂತೆ ಹೇಳಿದಳು. ಆಕೆಯ ಮಾತಿನ ಹಿಂದೆ ಕಹಿಘಟನೆಯೊಂದು ಇತ್ತು. ಹಲವು ವರ್ಷಗಳ ಹಿಂದೆ ಈಕೆ ಒಬ್ಬರ ಮೇಲೊಬ್ಬರು ಬಣ್ಣಗಳನ್ನು ಎರಚುತ್ತಾ, ಬೀದಿ, ಬೀದಿಗಳಲ್ಲಿ ಸಂತೋಷದ ಓಕಳಿ ಆಡುತ್ತಿದ್ದಾಗ, ಅವಳ ಹಾಗೇ ಮೈಯೆಲ್ಲಾ ಬಣ್ಣ ಮೆತ್ತಿಕೊಂಡವನೊಬ್ಬ ತುಂಬಾ ಅನುಚಿತವಾಗಿ ನಡೆದುಕೊಡಿದ್ದಾನೆ. ಅವನು ಯಾರೆಂದು ಕಂಡು ಹಿಡಿದು ಹೇಳಲಾಗಲಿಲ್ಲ ಅವಳಿಗೆ.
ತನ್ನ ಗೆಳತಿಯರಿಗೂ ಇಂಥದೇ ಅನುಭವವಾಗಿದೆ. ಆಗಿನಿಂದ ಹೋಳಿ ಅಂದರೆ ಆಕೆಗೆ ಆಗೋಲ್ಲ. ಹೀಗೆ ಬಣ್ಣದ ಮುಖವಾಡದೊಂದಿಗೆ ಹೆಣ್ಣು ಮಕ್ಕಳನ್ನು ಬಲತ್ಕಾರ ಮಾಡಿದ ಬಹಳಷ್ಟು ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದಿನದಿಂದ ದಿನಕ್ಕೆ
ಇಂಥ ಸಡಗರದ ನೆಪದಲ್ಲಿ ಬಹಳಷ್ಟು ಘಟನೆಗಳು ದಾಖಲೆಯಾದ ಉದಾಹರಣೆ ಇದೆ. ಬದುಕು ಎನ್ನುವುದು ನಮಗೆ ದೊರೆತ ವರ. ಅದನ್ನು ಸರಿಯಾಗಿ ಬಳಸಲು ತಿಳಿದಿರಬೇಕು. ಇಲ್ಲವಾದಲ್ಲಿ ಭಸ್ಮಾಸುರರಾಗಿಬಿಡುತ್ತೇವೆ. ಈ ವರಕ್ಕೆ ಬೆಳೆಸುವ ಶಕ್ತಿಯೂ ಇದೆ, ಅಳಿಸುವ ಶಕ್ತಿಯೂ ಇದೆ. ಬದುಕೆಂಬ ವರವನ್ನು ತಪ್ಪಾಗಿ ಬಳಸಿಕೊಳ್ಳುವ ಯೋಚನೆ ಮನುಷ್ಯನಿಗೆ ಬಂದೊಡನೆ ತನ್ನ ತಲೆಯ ಮೇಲೆ ತಾನೇ ಕೈ ಇಟ್ಟುಕೊಳ್ಳುವ ಕ್ಲೈಮ್ಯಾಕ್ಸ್ ಶುರುವಾಗಿಬಿಡುತ್ತದೆ. ಬದುಕನ್ನು ಕೊಂಡಾಡಬೇಕು, ಸಂಭ್ರಮಿಸಬೇಕು. ಇದ್ದ ಹಲವು ವರ್ಷಗಳಾದರೂ ತೀವ್ರವಾಗಿ ಜೀವಿಸಿಬಿಡಬೇಕು. ಇದು ನನ್ನ ಪಾಲಿಸಿ.
ಏಕೆಂದರೆ, ಸಾವಿನ ಬಗ್ಗೆ ಚಿಂತೆ ಇಲ್ಲ ನನಗೆ. ಅದು ಒಮ್ಮೆ ಮಾತ್ರ ಬರುತ್ತದೆ. ಬದುಕಿನ ಬಗ್ಗೆಯೇ ಅಕ್ಕರೆ. ಪ್ರತಿದಿನ, ಪ್ರತಿ ಕ್ಷಣ ಬದುಕಿ ತೀರಲೇಬೇಕಲ್ಲವೇ?
Related Articles
ಸಿಡಿಸುವ ದೀಪಾವಳಿಗಳನ್ನು, ಎಲ್ಲರನ್ನೂ ಬೆಚ್ಚಿ ಬೀಳುವಂತೆ ಕರ್ಕಷವಾದ ಸಿನಿಮಾ ಹಾಡಿನ ಮಟ್ಟಿಗೆ ಅರಚುವ ದೇವರನಾಮ ಸ್ಮರಣೆಗಳನ್ನು, ಮೀಸೈಲ್‌ಗಳಂತೆ ಹಾರುವ ಬೀರ್‌ಬಾಟಲ್‌ಗಳ ನಡುವೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವ ಹ್ಯಾಪಿ ನ್ಯೂಇಯರ್‌ಗಳನ್ನು, ಅಷ್ಟೇಕೆ, ಇತ್ತೀಚೆಗೆ ಉತ್ತರಭಾರತದಲ್ಲಿ ಹೆಲಿಕಾಪ್ಟರ್ ಎಂಬ ಪುಷ್ಪಕವಿಮಾನದಲ್ಲಿ ರಾಮಾ, ಸೀತೆ, ಲಕ್ಷ್ಮಣರೂ ಬಂದಿಳಿದದ್ದನ್ನು ನೋಡಿದ್ದೇವೆ. ಇವೆಲ್ಲವೂ ನಮ್ಮ ಸಂಸ್ಕೃತಿ, ಅದರ ಮೇಲೆ ನಾವಿಟ್ಟ ನಂಬಿಕೆಗಳೆಲ್ಲ ಬುಡಮೇಲಾಗುತ್ತಿರುವ ಉದಾಹರಣೆಗಳಂತೆ ಕಾಣುತ್ತಿಲ್ಲವೇ? ನಾವು, ನಮ್ಮ ಹಬ್ಬ, ಅದರ ಹಿಂದಿನ ಸಂಸ್ಕೃತಿಯನ್ನು ನೋಡುತ್ತಿರುವುದೇ ಹೀಗೆ. ನೋಟ
ಒಂದು ಭಾವ ಹಲವು. ಹಿಂದೆ ಇದ್ದದ್ದು ಭಾವ ಒಂದು ನೋಟ ಹಲವು -ಆಗ ಅದರಲ್ಲಿದ್ದ ಸಂಭ್ರಮ, ಖುಷಿ ಈಗಿನ ಹಬ್ಬಗಳಲ್ಲಿ ಇಲ್ಲ. ಹೀಗೆ ನಗರಗಳಿಂದ ಪ್ರಾರಂಭವಾಗಿ ಹಳ್ಳಿಯವರೆಗೆ ಜರುಗುವ ಸಡಗರ, ಸಂಭ್ರಮಗಳು ಪೊಲೀಸರ ಬಿಗಿಕಾವಲಿನಲ್ಲಿ ನಡೆಯುತ್ತಿರುವುದು ದುರಂತ. “ಇವತ್ತು ಹಬ್ಬ, ಮನೆಯಿಂದ ಹೊರಗೆ ಹೋಗಬೇಡಿ’ ಅಂತ ಎಚ್ಚರಿಸುವಷ್ಟರ ಮಟ್ಟಿಗೆ
ಸಡಗರಗಳಾಗಿಬಿಡಬಾರದು. ಒಂದು ಹಣತೆ ನೂರಾರು, ಸಾವಿರಾರು ದೀಪ ಗಳನ್ನು ಹೊತ್ತಿಸುವಂತೆಯೇ, ಒಂದು
ಹಬ್ಬವೇ ಲಕ್ಷಾಂತರ ಬದುಕುಗಳ ದೊಡ್ಡ ಸಡಗರ, ಸಂಭ್ರಮವಾಗಬೇಕು. ಇಲ್ಲವಾದರಲ್ಲಿ ಸಂತೋಷವೇ ಅವಮಾನವಾಗುತ್ತದೆ.
ಏನಂತೀರಿ?
Advertisement