Advertisement

ಭೂ ತಾಯಿಗೆ ಚರಗದ ನಮನ

06:02 PM Jan 03, 2022 | Team Udayavani |

ಬಾಗಲಕೋಟೆ: ಉತ್ತರ ಕರ್ನಾಟಕದ ರೈತರು ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರುವ ಎಳ್ಳ ಅಮಾವಾಸ್ಯೆಯ ಚರಗ ಚೆಲ್ಲುವ ಸಂಭ್ರಮ ರವಿವಾರ ಎಲ್ಲೆಡೆ ಕಂಡು ಬಂತು.

Advertisement

ರವಿವಾರ ರಜೆಯೂ ಇದ್ದ ಕಾರಣ, ಇಡೀ ಕುಟುಂಬದ ಸಮೇತ ಮನೆಯಲ್ಲಿ ಸಜ್ಜೆ ರೊಟ್ಟಿ, ಮಡಿಕೆ ಕಾಳು ಪಲ್ಯ, ಶೇಂಗಾ ಹೋಳಿಗೆ ಹೀಗೆ ವಿವಿಧ ಮೃಷ್ಟಾನ್ನ ಭೋಜನ ತಯಾರಿಸಿ ಕಟ್ಟಿಕೊಂಡು ಕೆಲವರು ಎತ್ತಿನ ಬಂಡಿ, ಕಾರಿನಲ್ಲಿ ತಮ್ಮ ತಮ್ಮ ಹೊಲಕ್ಕೆ ತೆರಳಿದರು. ಕುಟುಂಬ ಸಮೇತ ಭೂಮಿಗೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ ಹಸಿರ ಸಿರಿ ಇಮ್ಮಡಿಯಾಗಲಿ ಎಂದು ಬೇಡಿದರು. ಬಳಿಕ ಕುಟುಂಬ ಸದಸ್ಯರು, ಬಂಧು-ಬಾಂಧವರೊಂದಿಗೆ ಹೊಲದಲ್ಲಿ ಸಿಹಿ ಭೋಜನ ಮಾಡಿದರು.

ಊಟ-ಸನ್ಮಾನ: ಮುಧೋಳ ತಾಲೂಕಿನ ಪ್ರಗತಿಪರ ಯುವ ರೈತ ಮಹಾಂತೇಶ ಯರಗಟ್ಟಿ ಹೊಲದಲ್ಲಿ ಎಳ್ಳ ಅಮಾವಾಸ್ಯೆಯನ್ನು ವಿಶೇಷವಾಗಿ ಆಚರಿಸಲಾಯಿತು. ಉತ್ತರಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿಯಿಂದ ಚರಗ ಚೆಲ್ಲಿ, ಸಿಹಿ ಭೋಜನ ಮಾಡುವ ಜತೆಗೆ 90 ವರ್ಷ ದಾಟಿದ ಹಿರಿಯ ದಂಪತಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next