ಬಾದಾಮಿ: ಬದುಕಿ ಬಾಳುವ ಜನಾಂಗಕ್ಕೆ ಶಾಂತಿ ನೆಮ್ಮದಿಯನ್ನು ತುಂಬಿದ ಮೂಲ ಧರ್ಮ ಸಿದ್ದಾಂತವನ್ನು ಮರೆತರೆ ಅಪಾಯ ತಪ್ಪಿದ್ದಲ್ಲ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ಜರುಗಿದ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಶ್ರೀ ಕಾಡಸಿದ್ದೇಶ್ವರ ಜಾತ್ರೋತ್ಸವ ಧರ್ಮ ಸಮಾರಂಭದಲ್ಲಿ ಅವರು ಮಾತನಾಡಿದರು.
ಮನುಷ್ಯ ಜೇವನದಲ್ಲಿ ನಿರಂತರ ಪರಿಶ್ರಮ ಮೂಲಕ ಬದುಕನ್ನು ಕಟ್ಟಕೊಳ್ಳಬೇಕಾಗಿದೆ ವೀರಶೈವ ಧರ್ಮ ಬಹು ಪ್ರಾಚೀನವಾಗಿದ್ದು, ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಭೂಮಂಡಲದಲ್ಲಿ ಸಂಸ್ಥಾಪಿಸಿ ಬೋಧನೆಗೊಳ್ಳಿಸಿದ್ದು ಮರೆಯಲಾಗದು. ಇತಿಹಾಸ ಅರಿಯದವರು ಹೊಸ ಇತಿಹಾಸವನ್ನು ಎಂದಿಗೂ ಸೃಷ್ಟಿ ಸಲಾರರು ಧರ್ಮ ಶ್ರೀಮಂತಿಕೆ ಹೊಂದಿರುವ ಧರ್ಮವನ್ನು ಯಾರಾದರೂ ಹಾಳು ಮಾಡಲು ಹೊರಟರೆ ಅವರೇ ನಾಶ ಹೊಂದುತ್ತಾರೆ ಎಂದರು.
ಉಪನ್ಯಾಸ ನೀಡಿದ್ದ ಡಾ|ವಿಜಯಕುಮಾರ ಕಟ್ಟಗಿಹಳ್ಳಿಮಠ ಮಾತನಾಡಿ, ವೀರಶೈವ ಧರ್ಮದ ಮೂಲ ಆಚಾರ್ಯ ನೆನವುಗಳನ್ನು ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರನ್ನು ಸ್ಮರಿಸಿಕೊಂಡದನ್ನು ನಾವೆಲ್ಲ ನೆನಪಿಸಿಕೊಳ್ಳುವ ಅಗತ್ಯ ಇದೆ ಎಂದರು. ಗುಳೇದಗುಡ್ಡ ಮರಡಿ ಮಠದ, ಕಲಾದಗಿ ಹಿರೇಮಠದ ಶ್ರೀಗಳು, ಚಿಮ್ಮಲಗಿ ದೇವರು, ಡಾ|ಕುಬಕಡ್ಡಿ, ಡಾ| ನಂದಿಕೋಲಮಠ, ಶಿವಾನಂದ ತಿಮ್ಮಾಪುರ, ಡಾ|ಭಂಡಾರಿಮಠ, ಸುರೇಶ ನಾರಪ್ಪನ್ನವರ, ಪರಿಶ್ರಮ ಗ್ರುಪ್ಸ್ ಅಧ್ಯಕ್ಷ ವೀರೇಶ ಹಿರೇಮಠ ಇದ್ದರು.
ಗುರುವೇದ ಶಾಸ್ತ್ರೀಗಳು ಸ್ವಾಗತಿಸಿದರು. ರೇವಣಸಿದ್ದೇಶ ಬೆನ್ನೂರ ಪ್ರಾರ್ಥಿಸಿದರು. ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೃಂದಗಳೊಂದಿಗೆ ಗ್ರಾಮದೆಲ್ಲೆಡೆ ಜರುಗಿತು.