Advertisement

ಬಿಎಸ್‌ಎನ್‌ಎಲ್‌ ನೌಕರರಿಗೆ ಹಬ್ಬಕ್ಕಿಂತಲೂ ಮೊದಲೇ ಸಂಬಳ

09:57 AM Oct 16, 2019 | Team Udayavani |

ಹೊಸದಿಲ್ಲಿ: ವಿಳಂಬವಾದ ಸಂಬಳವನ್ನು ಹಬ್ಬಕ್ಕೂ ಮೊದಲು ಕೊಡುವಂತೆ ಕಾರ್ಮಿಕ ಸಂಘಟನೆಗಳು ಆಗ್ರಹಿಸಿರುವಂತೆಯೇ ಬಿಎಸ್‌ಎನ್‌ಎಲ್‌ ಸಿಇಒ ಪಿ.ಕೆ. ಪುರ್‌ವಾರ್‌ ಅವರು ಇದಕ್ಕೆ ಸಮ್ಮತಿಸಿದ್ದಾರೆ.

Advertisement

ಸೆಪ್ಟೆಂಬರ್‌ ಸಂಬಳವನ್ನು ದೀಪಾವಳಿಗೆ ಮೊದಲು 1.76 ಲಕ್ಷ ಸಿಬಂದಿಗೆ ನೀಡುವುದಾಗಿ ಅವರು ಹೇಳಿದ್ದಾರೆ.  ನಮ್ಮ ಬಳಿ ಇರುವ ಮೂಲಗಳಿಂದ ಸಂಬಳ ಪಾವತಿ ಮಾಡುತ್ತೇವೆ. ಮಾಸಿಕ ನಾವು ವಿವಿಧ ಮೂಲಗಳಿಂದ 1600 ಕೋಟಿ ರೂ. ಸಂಪಾದಿಸುತ್ತೇವೆ. ಇದನ್ನು ಸದ್ಯ ಸಿಬಂದಿ ವೇತನಕ್ಕೆ ವಿನಿಯೋಗ ಮಾಡುತ್ತೇವೆ ಎಂದು ಹೇಳಿದ್ದಾರೆ.

ಆದರೆ ಮೂಲಗಳ ಪ್ರಕಾರ 1600 ಕೋಟಿ ರೂ. ಮಾಸಿಕ ಆದಾಯವಿದ್ದರೂ ಸಂಬಳ ಕೊಡುವುದು ಕಷ್ಟವಾಗಿದೆ. ಕಾರಣ ಬಿಎಸ್‌ಎನ್‌ಎಲ್‌ ಮಾಸಿಕ ನಿರ್ವಹಣೆ ಖರ್ಚು ವೆಚ್ಚಗಳಿಗೆ ಇದಕ್ಕೂ ಹೆಚ್ಚಿನ ಮೊತ್ತ ಬೇಕು. ಆದ್ದರಿಂದ ಸಂಬಳಕ್ಕೆ ಅಗತ್ಯವಿರುವ 850 ಕೋಟಿ ರೂ.ಗಳನ್ನು ಭರಿಸುವುದು ಕಷ್ಟ ಎಂದು ಐಎಎನ್‌ಎಸ್‌ ವರದಿ ಮಾಡಿದೆ. ಬಿಎಸ್‌ಎನ್‌ಎಲ್‌ 2019ನೇ ಸಾಲಿನಲ್ಲಿ 13,804 ಕೋಟಿ ರೂ. ನಷ್ಟ ಅನುಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next