Advertisement
ಹೆಸರುಘಟ್ಟ ಹೋಬ ಳಿಯ ಅರಕೆರೆ ಗ್ರಾಪಂಯಲ್ಲಿ ಸ್ವತ್ಛ ಸಂಕೀರ್ಣ ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಹೆಜ್ಜೆಯಿರಿಸಿದ್ದು, ಸಾವ ಯವ ತ್ಯಾಜ್ಯ ಪರಿವರ್ತಕ ಯಂತ್ರ ಅಳವಡಿಕೆ ಮಾಡ ಲಾಗುತ್ತಿದೆ. ಇಡೀ ಜಿಲ್ಲೆಗೆ ಮಾದರಿ ಘಟಕ ಇದಾಗಲಿದೆ.ನಗರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ 86 ಗ್ರಾಪಂ ಗಳಿದ್ದು ಈಗಾಗಲೇ ಹದಿನೇಳು ಗ್ರಾಪಂಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಮಾಡಲಾಗಿದೆ.
Related Articles
Advertisement
ಇದನ್ನೂ ಓದಿ: ರಾಯರ ವೃಂದಾವನಕೆ ಬೆಳ್ಳಿ ಕವಚ ಸಮರ್ಪಣೆ
ಸ್ವತ್ಛ ಭಾರತ್ ಮಿಷನ್ ಯೋಜನೆ ಅನು ದಾನ ಕೂಡ ಬಳಕೆ ಮಾಡಿಕೊಳ್ಳಲಾಗುವುದು.ಉಳಿದ ಹಣವನ್ನು ಪಂಚಾಯ್ತಿಯ ಸ್ವನಿಧಿಯಿಂದ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಆಧುನಿಕ ಯಂತ್ರ ಅಳವಡಿಕೆ: ಗ್ರಾಪಂ ವ್ಯಾಪ್ತಿಯ ಲ್ಲೀಗ ಸುಮಾರು 400 ರಿಂದ 500 ಕೆ.ಜಿ.ಹಸಿಕ ಕಸ ಉತ್ಪತ್ತಿಯಾಗುತ್ತಿದೆ. ಆದರೆ ಭವಿಷ್ಯತ್ತಿನ ಹಿನ್ನೆಲೆಯಲ್ಲಿ 1 ಟನ್ ಹಸಿಕಸವನ್ನು ಗೊಬ್ಬರ ಮಾಡುವ ಆಧುನಿಕ ಯಂತ್ರ ಅಳವಡಿಕೆ ಮಾಡಲಾಗುತ್ತಿದೆ.
ಇದು ಜಿಲ್ಲೆಗೆ ಮಾದರಿ ಘಟಕವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿ ದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದೊಡ್ಡ ಮಟ್ಟದಲ್ಲಿ ಅತಿ ವೇಗವಾಗಿ ಅಭಿವೃದ್ದಿಯಾಗು ತ್ತಿದ್ದು ಮುಂದಿನ ದಿನಗಳಲ್ಲಿ ಅದಕ್ಕೆ ಹೊಂದಿಕೊಂಡಿ ರುವ ಪ್ರದೇಶದಲ್ಲಿ ಕಸದ ತೊಂದರೆ ಉಂಟಾಗಬಾ ರದು ಎಂಬ ಸದುದ್ದೇಶ ಕೂಡ ಇದರಲ್ಲಿದೆ ಎಂದು ಹೇಳಿದ್ದಾರೆ.
“ಅರಕೆರೆ ಗ್ರಾಪಂಯಲ್ಲಿ ಭವಿಷ್ಯತ್ತನ್ನು ದೃಷ್ಟಿಯಲ್ಲಿಟ್ಟುಕೊಂಡು ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಮಾಡುವ ಕಾರ್ಯ ನಡೆದಿದೆ. ಹಾಗೆಯೇ ಬಹುವಿಧಗಳಲ್ಲಿ ಕಸ ಸಂಗ್ರಹಣ ಮಾಡುವ ಕಾರ್ಯಕೂಡ ಇಲ್ಲಿ ನಡೆಯಲಿದೆ.ಗಾರ್ಡನ್ ಕೂಡ ನಿರ್ಮಾಣ ಮಾಡಲಾಗುತ್ತಿದ್ದು ಮಾದರಿ ಘನ ತ್ಯಾಜ್ಯ ಘಟಕ ನಿರ್ಮಾಣ ಮಾಡಲಾಗುತ್ತದೆ.” ●ಚಂದ್ರಪ್ಪ, ಪಿಡಿಒ, ಅರೆಕೆರೆ ಗ್ರಾಪಂ
ಎಲ್ಲೆಲ್ಲಿ ಘಟಕ ಸ್ಥಾಪನೆ ?
ನಗರ ಜಿಲ್ಲಾ ಪಂಚಾಯ್ತಿಯ ಪ್ರತಿಯೊಂದು ಗ್ರಾಪಂಯಲ್ಲೂ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಮಾಡುವ ಉದ್ದೇಶ ಜಿಲ್ಲಾಡಳಿತಕ್ಕೆ ಇದೆ. ಈ ಹಿಂದೆ ಕೆಲವು ಗ್ರಾಪಂಯಲ್ಲಿ ಘನತ್ಯಾಜ್ಯ ನಿರ್ವಹಣೆ ಮತ್ತು ಘಟಕ ಸ್ಥಾಪನೆಗೆ ಜಾಗದ ಸಮಸ್ಯೆ ಉಂಟಾಗಿತ್ತು. ಆದರೆ ಈಗ 54 ಗ್ರಾಪಂಗಳಲ್ಲಿ ಜಾಗ ಗುರುತಿಸುವ ಕೆಲಸ ಕೂಡ ನಡೆದಿದೆ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜಾನುಕುಂಟೆ, ಸಿಂಗನಾಯಕನಹಳ್ಳಿ, ದೊಡ್ಡ ಜಾಲ, ಹುಸ್ಕೂರು, ಹಾಲೂರು, ದೊಡ್ಡಗುಬ್ಬಿ, ಕಣ್ಣೂರು, ಕಿತ್ತಗನೂರು, ಹೆಸರುಘಟ್ಟ, ಶಾಂತಿಪುರ, ಮಾಯಸಂದ್ರ ಸೇರಿದಂತೆ 17 ಗ್ರಾಪಂಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ ಮಾಡಲಾಗಿದೆ.ಕೆಲವು ಘಟಕಗಳಲ್ಲಿ ಉತ್ಪಾದನೆ ಆಗುತ್ತಿರುವ ಗೊಬ್ಬರನ್ನು ರೈತರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.