Advertisement

ರಸಗೊಬ್ಬರ ಬೆಲೆ: ಅಧಿಕೃತ ಆದೇಶ

11:21 PM May 20, 2021 | Team Udayavani |

ಬೆಂಗಳೂರು: ಮುಂಗಾರು ಹಂಗಾಮಿನಲ್ಲಿ ಡಿಎಪಿ ಹಾಗೂ ಪಿ – ಕೆ ರಸಗೊಬ್ಬರ ಸಬ್ಸಿಡಿಯನ್ನು 50-ಕೆ.ಜಿ. ಚೀಲವೊಂದಕ್ಕೆ 511ರಿಂದ 1,211 ರೂಪಾಯಿಗೆ (ಶೇ.140) ಹೆಚ್ಚಿಸಿ ಕೇಂದ್ರ ರಸಗೊಬ್ಬರ ಇಲಾಖೆಯು ಗುರುವಾರ ಅಧಿಕೃತ ಆದೇಶ ಹೊರಡಿಸಿದೆ.

Advertisement

ಪೋಷಕಾಂಶ ಆಧಾರಿತ ರಸಗೊಬ್ಬರ ಸಬ್ಸಿಡಿ (ಎನ್‌.ಬಿ.ಎಸ್‌.) ಯೋಜನೆಯಡಿ ಗುರುವಾರ  ಹೊರಡಿಸಿದ ಪರಿಷ್ಕೃತ ಆದೇಶದ ಪ್ರಕಾರ ರಸಗೊಬ್ಬರದಲ್ಲಿ ಬಳಕೆಯಾಗುವ ಪ್ರತಿ ಟನ್‌ ನೈಟ್ರೋಜನ್‌ಗೆ 18,789 ರೂ., ಪೋಸ್ಪೇಟ್‌ ಗೆ 45,323 ರೂ., ಪೊಟಾಷ್‌ 10,116 ರೂ ಮತ್ತು ಸಲ#ರ್‌ಗೆ 2,374 ರೂ. ಸಬ್ಸಿಡಿ ದೊರೆಯಲಿದೆ. ಪೋಷಕಾಂಶ ಆಧಾರಿತ ರಸಗೊಬ್ಬರ ಸಬ್ಸಿಡಿ (ಎನ್‌.ಬಿ.ಎಸ್‌.) ಯೋಜನೆಯಡಿ 22 ನಮೂನೆ ಗೊಬ್ಬರಗಳಿದ್ದು ಈ ಪಟ್ಟಿಗೆ ಹೊಸದಾಗಿ ಎನ್‌ಪಿಕೆ 8-21-21 ಮತ್ತು ಎನ್‌ಪಿಕೆ 9-24-24 ನಮೂನೆ ರಸಗೊಬ್ಬರಗಳನ್ನು ಸೇರಿಸಲಾಗಿದೆ. ಪರಿಷ್ಕೃತ ಸಬ್ಸಿಡಿ ದರ ಮುಂಗಾರು ಹಂಗಾಮಿನವರೆಗೆ ಅಂದರೆ, ಈ ವರ್ಷದ  ಅಕೊ³àಬರ್‌ 31ರ ವರೆಗೆ  ಜಾರಿಯಲ್ಲಿರಲಿದೆ.

ರಸಗೊಬ್ಬರ ಸಬ್ಸಿಡಿಗಾಗಿ ಕೇಂದ್ರ ಸರಕಾರ ಪ್ರತಿವರ್ಷ ಸುಮಾರು 80,000 ಕೋ. ರೂ. ವ್ಯಯಿಸುತ್ತಿದೆ. ಈಗಿನ ಸಬ್ಸಿಡಿ ಹೆಚ್ಚಳದಿಂದಾಗಿ ಕೇಂದ್ರವು ಹೆಚ್ಚುವರಿಯಾಗಿ 14,775 ಕೋ. ರೂ. ಖರ್ಚು ಮಾಡುತ್ತಿದ್ದು ದೇಶಾದ್ಯಂತ 9.57 ಕೋ.ರೂ.ಗಿಂತ ಹೆಚ್ಚು ರೈತರಿಗೆ ಇದರ ಲಾಭ ದೊರೆಯಲಿದೆ.  ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ಅಂದಾಜು 5 ಲಕ್ಷ ಟನ್‌ ಡಿಎಪಿ ಮತ್ತ ಪಿ-ಕೆ ರಸಗೊಬ್ಬರ ಬಳಸುತ್ತಿದ್ದು, ಈಗ ರಸಗೊಬ್ಬರ ಸಬ್ಸಿಡಿ ಹೆಚ್ಚಿಸಿರುವುದರಿಂದ ರಾಜ್ಯದ ರೈತರಿಗೆ ಕನಿಷ್ಠ ಪಕ್ಷ 700 ಕೋ. ರೂ. ಉಳಿತಾಯ ಆಗಲಿದೆ ಎಂದು ಕೇಂದ್ರ ರಸಗೊಬ್ಬರ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next