ಬಳ್ಳಾರಿ: ಈ ಹಿಂದೆ ದೊರೆಯುತ್ತಿದ್ದ ಖಾಸಗಿ ಕಂಪೆನಿಗಳ ರಸಗೊಬ್ಬರಗಳು ಹಾಗೂ ಕೃಷಿ ಪರಿಕರಗಳು ಇನ್ನು ಮುಂದೆ ಭಾರತ್ ಬ್ರ್ಯಾಂಡ್ ಗಳಲ್ಲಿ ಎಲ್ಲ ರಸಗೊಬ್ಬರ ಅಂಗಡಿಗಳಲ್ಲಿ ದೊರೆಯಲಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನಗರದ ಕೆಸಿ ರಸ್ತೆಯಲ್ಲಿ ಖಾಸಗಿ ಮಳಿಗೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರದ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಆಶಯದಂತೆ ಬಳ್ಳಾರಿ ಸಹಿತ 43 ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು ಉದ್ಘಾಟನೆಗೊಳ್ಳಲಿವೆ.
ಇಲ್ಲಿ ಸಿಗುವಂಥ ಎಲ್ಲ ರಸಗೊಬ್ಬರಗಳು ಭಾರತ್ ಬ್ರಾÂಂಡ್‌ಗಳಲ್ಲಿ ಇರಲಿವೆ ಎಂದರು.
ಈ ಮೊದಲು ದೊರೆಯುತ್ತಿದ್ದ ಯೂರಿಯಾ 1 ಚೀಲ ಗೊಬ್ಬರದ ಬೆಲೆ 1,666 ರೂ.ಇದ್ದು, ಈಗ 266 ರೂ.ಗೆ ದೊರೆಯಲಿದೆ. ಇನ್ನುಳಿದ 1,400 ರೂ. ಸಬ್ಸಿಡಿ ರೂಪದಲ್ಲಿ ಕೇಂದ್ರ ಸರಕಾರ ವೆಚ್ಚ ಭರಿಸಲಿದೆ. ಅದರಂತೆಯೇ 1 ಚೀಲ ಗೊಬ್ಬರಕ್ಕೆ ಡಿಎಪಿ ಬೆಲೆ 3,850 ರೂ.ಇದ್ದು, 1,350 ರೂ.ನೀಡಿದರೆ ಇನ್ನುಳಿದ 2,500 ರೂ. ಸಬ್ಸಿಡಿ ಸಿಗಲಿದೆ. ಎಂಒಪಿ ಬೆಲೆ 2,459 ರೂ. ಇದ್ದು, 1,700 ರೂ.ಗೆ ರೈತರಿಗೆ ವಿತರಿಸಲಾಗುತ್ತಿದ್ದು, ಇನ್ನುಳಿದ 759 ರೂ. ಸಬ್ಸಿಡಿ ನೀಡಲಿದೆ. ಕಾಂಪ್ಲೆಕ್ಸ್ 1 ಚೀಲದ ಗೊಬ್ಬರದ ಬೆಲೆ 3,204 ರೂ. ಇದ್ದು, ರೈತರಿಗೆ 1,470 ರೂ.ಗೆ ನೀಡಲಿದ್ದು, 1,734 ರೂ. ಕೇಂದ್ರ ಸರಕಾರದಿಂದ ಸಬ್ಸಿಡಿ ರೂಪದಲ್ಲಿ ಒದಗಿಸಲಿದೆ. ಒಟ್ಟಾರೆ 2,020 ಲಕ್ಷ ಕೋಟಿ ರೂ. ಅನ್ನು ರೈತರಿಗೆ ರಸಗೊಬ್ಬರ ಖರೀದಿಸಲು ಕೇಂದ್ರ ಸರಕಾರ ಸಬ್ಸಿಡಿ ರೂಪದಲ್ಲಿ ನೀಡಲಿದೆ ಎಂದರು.
ಪ್ರಧಾನಿ ಉದ್ಘಾಟನೆ
ಇದೇ ಸಂದರ್ಭ ಪ್ರಧಾನಿ ಮೋದಿ ವರ್ಚುವಲ್ ಮೂಲಕ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಅನಾವರಣ ಗೊಳಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೃಷಿ ಸಾಧkರನ್ನು ಸಮ್ಮಾನಿಸಲಾಯಿತು. ಸಂಸದರಾದ ವೈ. ದೇವೇಂದ್ರಪ್ಪ, ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.