Advertisement

ಬೇಲಿ ನಾಶ, ಜಾತಿನಿಂದನೆ: ಪೆರುವಾಜೆ ಗ್ರಾ. ಪಂ. ಸದಸ್ಯನ ವಿರುದ್ದ ಪ್ರಕರಣ ದಾಖಲು

11:27 PM Jul 19, 2023 | Team Udayavani |

ಸವಣೂರು: ಪೆರುವಾಜೆ ಗ್ರಾಮದ ಪೆಲತಡ್ಕ ಎಂಬಲ್ಲಿ ಬೇಲಿ ನಾಶ ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿರುವುದಾಗಿ ಪೆರುವಾಜೆ ಗ್ರಾ. ಪಂ. ಸದಸ್ಯನ ವಿರುದ್ಧ ದಾಮೋದರ ನಾಯ್ಕ ಎಂಬವರು ಜು. 18ರಂದು ದೂರು ನೀಡಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪೆಲತಡ್ಕ ನಿವಾಸಿ ದಾಮೋದರ ನಾಯ್ಕ ಅವರ ಮನೆ ಸಮೀಪ ಸಾರ್ವಜನಿಕ ರಸ್ತೆ ಕಾಮಗಾರಿ ನಡೆಯುತ್ತಿದ್ದು , ಮನೆಯ ಜಮೀನಿನ ಬೇಲಿಯು ಅರ್ಧದಷ್ಟು ನಾಶವಾಗಿದ್ದರ ಬಗ್ಗೆ ವಾರ್ಡ್‌ ಸದಸ್ಯ ಸಚಿನ್‌ ರಾಜ್‌ ಶೆಟ್ಟಿಯವರಲ್ಲಿ ತಿಳಿಸಿದರೆನ್ನಲಾಗಿದೆ.

ಆಗ ಸಚಿನ್‌ ರಾಜ್‌ ಶೆಟ್ಟಿಯವರು ಇದನ್ನು ನಾನು ಸರಿಪಡಿಸುವುದಿಲ್ಲ ಎಂದು ಹೇಳಿದ ಬಳಿಕ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು. ಅನಂತರ ಸಚಿನ್‌ ರಾಜ್‌ ಶೆಟ್ಟಿ ಅವರು ಜಾತಿ ನಿಂದನೆಗೈದಿದ್ದಲ್ಲದೇ ಬೆದರಿಕೆ ಹಾಕಿದ ಎಂದು ದಾಮೋದರ ನಾಯ್ಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next