Advertisement

ಗುಂಡ್ಲುಪೇಟೆ:  ಹೆಣ್ಣು ಹುಲಿ ಮೃತ ದೇಹ ಪತ್ತೆ

06:21 PM May 22, 2021 | Team Udayavani |

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗ, ನುಗು ವನ್ಯಜೀವಿ ವಲಯದ ಲಕ್ಷ್ಮಣಾಪುರ ಗಸ್ತಿನ ಸೋರನಗುಡ್ಡ ಅರಣ್ಯ ಪ್ರದೇಶದ ಬಳಿಯ ಆನೆ ತಡೆ ಕಂದಕದಲ್ಲಿ ಹೆಣ್ಣು ಹುಲಿಯೊಂದರ ಮೃತ ದೇಹ ಪತ್ತೆಯಾಗಿದೆ.

Advertisement

ಮೃತ ಹುಲಿ ಸುಮಾರು 8 ರಿಂದ 9 ವರ್ಷ ವಯಸ್ಸು ಎಂದು ಅಂದಾಜಿಸಲಾಗಿದ್ದು, ಹುಲಿಯ ಎಲ್ಲಾ ಉಗುರು, ಹಲ್ಲುಗಳು ಹಾಗೂ ಇತರೆ ಅಂಗಾಗಳು ಸುರಕ್ಷಿತವಾಗಿದೆ. ಮೇಲ್ನೋಟಕ್ಕೆ ಸ್ವಾಭಾವಿಕವಾಗಿ ಮೃತಪಟ್ಟಿರಬಹುದು ಎಂದು ಅರಣ್ಯ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಪಶು ವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ಹುಲಿಯ ಮರಣೋತ್ತರ ಶವ ಪರೀಕ್ಷೆ ನಡೆಸಿದ ನಂತರ ವನ್ಯಜೀವಿ ಪರಿಪಾಲಕರಾದ ಕೃತಿಕ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಆರ್. ರಘುರಾಮ್ ಹಾಗೂ ಸ್ಥಳೀಯ ಪಂಚಾಯಿತಿ ಸಮ್ಮುಖದಲ್ಲಿ ಹುಲಿ ಮೃತ ದೇಹ ಸುಡಲಾಯಿತು.

ಈ ಬಗ್ಗೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್ ಪ್ರತಿಕ್ರಯಿಸಿ, ಮೃತ ಹೆಣ್ಣು ಹುಲಿಯ ದೇಹವನ್ನು ಪರಿಶೀಲಿಸಿದಾಗ ಯಾವುದೇ ಹುರುಳಿನಿಂದ ಅಥವಾ ವಿಷ ಪ್ರಾಸನದಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿಲ್ಲ. ಹಾಗೂ ಹುಲಿಯ ದೇಹದ ಮೇಲೆ ಯಾವುದೇ ಗಾಯಗಳು ಸಹ ಕಂಡು ಬಂದಿಲ್ಲ. ಹುಲಿಯ ಸಾವಿಗೆ ನಿಖರ ಕಾರಣವನ್ನು ಪರೀಕ್ಷಾ ವರದಿ ಬಂದ ನಂತರ ಖಚಿತಪಡಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next