ಚೆನ್ನೈ: ನಡು ರಸ್ತೆಯಲ್ಲೇ ಮಹಿಳಾ ಪ್ರಾಧ್ಯಾಪಕಿಯೊಬ್ಬರ ಮೇಲೆ ಹಲ್ಲೆ ನೆಡೆಸಿ ಎಳೆದುಕೊಂಡು ಹೋಗಿ ದರೋಡೆಗೈದ ಘಟನೆ ತಮಿಳುನಾಡಿನ ತಿರುಚಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಅಣ್ಣಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಸೀತಾಲಕ್ಷ್ಮಿ( 53) ಗಾಯಗೊಂಡ ಮಹಿಳೆ. ಇತ್ತೀಚೆಗೆ ಸೀತಾಲಕ್ಷ್ಮೀ ಶಾಲೆಯ ಬಳಿ ನಡೆದುಕೊಂಡು ಹೋಗುವ ವೇಳೆ ವ್ಯಕ್ತಿಯೊಬ್ಬ ಮರದ ಹಲಗೆಯಿಂದ ಹಲ್ಲೆ ಮಾಡಿದ್ದಾನೆ. ಏಟು ತಿಂದ ಪರಿಣಾಮ ಸೀತಾಲಕ್ಷ್ಮೀ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ.
ಆ ಬಳಿಕ ಆರೋಪಿ ಸೀತಾಲಕ್ಷ್ಮೀ ಅವರನ್ನು ರಸ್ತೆಯಲ್ಲೇ ಎಳೆದುಕೊಂಡು ಹೋಗಿ ಅವರ ಸ್ಕೂಟಿಯ ಕೀಯನ್ನು ಪಡೆದುಕೊಂಡು ಮೊಬೈಲ್ ಫೋನ್ ಎಳೆದುಕೊಂಡು ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಅಮೆರಿಕಾದ ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಪಂಜಾಬಿ ನಟನ ಮೇಲೆ ಚೂರಿಯಿಂದ ದಾಳಿ
Related Articles
ಈ ಕುರಿತು ಗಾಯಾಳು ಸೀತಾಲಕ್ಷ್ಮಿ ಅವರ ದೂರಿನ ಆಧಾರದ ಮೇಲೆ ಪೊಲೀಸರು ತಮಿಳುನಾಡಿನ ಪಜಮನಾರಿ ಮೂಲದ ಸೆಂಥಿಲ್ ಕುಮಾರ್ ಅವರನ್ನು ಬಂಧಿಸಿದ್ದಾರೆ.
ಪೊಲೀಸರು ಸೆಂಥಿಲ್ ಕುಮಾರ್ ನನ್ನು ಬಂಧಿಸಲು ತೆರಳುವಾಗ ಆತ ಪೊಲೀಸರಿಂದ ತಪ್ಪಿಸುವ ಭರದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗಿ ಅಪಘಾತ ಮಾಡಿಕೊಂಡಿದ್ದಾನೆ. ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸೀತಾಲಕ್ಷ್ಮೀ ಅವರನ್ನು ಎಳೆದುಕೊಂಡು ಹೋಗುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕವಾಗಿ ಈ ರೀತಿಯ ವರ್ತನೆ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ.