Advertisement

ಗರ್ಭಧಾರಣೆಯ ಸಂದರ್ಭದಲ್ಲಿ ಸ್ತ್ರೀ ಜನನಾಂಗದ ಕ್ಯಾಂಡಿಡಿಯಾಸಿಸ್‌

04:23 PM May 14, 2023 | Team Udayavani |

ಪ್ರಸ್ತಾವನೆ
ತಾಯ್ತನವು ಮಹಿಳೆಯ ಪಾಲಿಗೆ ಸುಂದರ, ಉಲ್ಲಾಸ ದಾಯಕ ಅನುಭವ. ತಾಯಿಯೊಬ್ಬಳು ತನ್ನ ಮಗುವಿಗೆ ಕೊಡಬಹುದಾದ ಅತ್ಯುತ್ತಮ ಅಮೂಲ್ಯ ಉಡುಗೊರೆ ಯೆಂದರೆ ಉತ್ತಮ ಆರೋಗ್ಯ. ಆದುದರಿಂದ ಗರ್ಭಿಣಿ ಅವಧಿ ಯಲ್ಲಿ ಕಾಣಿಸಿಕೊಳ್ಳಬಹುದಾದ ಸೊಂಕಿನ ತೊಂದರೆಯಿಂದ ತಾಯಿ ದೂರವಿರಬೇಕಾದುದು ಅತ್ಯಗತ್ಯ. ಈ ಅವಧಿಯಲ್ಲಿ ಉಂಟಾಗಬಹುದಾದ ಸೋಂಕು ತೊಂದರೆಗಳಲ್ಲಿ ಬಹಳ ಸಾಮಾನ್ಯವಾದುದು ಯೋನಿಯ ಈಸ್ಟ್‌ ಸೋಂಕು. ಇದು ಕ್ಯಾಂಡಿಡಾ ಎಂಬ ಶಿಲೀಂಧ್ರ ಯಾ ಏಕಾಣು ಜೀವಿ ಬೂಸ್ಟ್‌ (ಈಸ್ಟ್‌)ಗಳಿಂದ ಉಂಟಾಗುತ್ತದೆ. ಯೋನಿಯ ಈಸ್ಟ್‌ ಸೊಂಕಿನ ತೊಂದರೆ ಇರುವಂತೆಯೇ ಮಹಿಳೆ ಮಗುವಿಗೆ ಜನ್ಮ ನೀಡಿದಲ್ಲಿ, ಈ ತೊಂದರೆ ಜನಿಸಿದ ಮಗುವಿಗೂ ಹರಡಿ ಶಿಶುವಿನ ಗಂಟಲು ಅಥವಾ ಕರುಳಿಗೆ ಈ ಸೋಂಕು ತಗಲುವ ಸಾಧ್ಯತೆ ಇರುತ್ತದೆ.

Advertisement

ಸ್ತ್ರೀ ಜನನಾಂಗದ ರಚನೆ ಮತ್ತು ಕಾರ್ಯಗಳು
ಬಾಹ್ಯ ಜನನಾಂಗ ರಚನೆ
ಬಾಹ್ಯ ಜನನಾಂಗ (ವಲ್ವ) ಭೃಗಾಂಕುರ (ಮಾನ್ಸ್‌ ಪ್ಯುಬಿಸ್‌), ಯೋನಿಯ ಹೊರತುಟಿ (ಭಗ ಬಾಹೊÂàಷ್ಠ), ಯೋನಿಯ ಒಳತುಟಿ (ಭಗ ಅಂತರೋಷ್ಠ), ಚಂದ್ರನಾಡಿ, ಸಂಪರ್ಕನಾಳ (ವೆಸ್ಟಿಬೂಲ್‌) ಮತ್ತು ಮೂಲಾಧಾರ (ಪೆರಿನಿಯಮ್‌) ಅನ್ನು ಒಳಗೊಂಡಿದ್ದು, ಇದು ಪರೀಕ್ಷಿಸಿದಾಗ ಕಣ್‌ ದೃಷ್ಟಿಗೆ ಗೋಚರವಾಗುತ್ತದೆ.
ಭೃಗಾಂಕರ : ರೋಮಗಳಿಂದಾವೃತವಾಗಿರುವ ಇಂಗ್ಲಿಷ್‌ನ “ವಿ’ ರೂಪದಲ್ಲಿರುವ ಸಂವೇದನಾಶೀಲ ಜಾಗ
ಯೋನಿಯ ಹೊರಭಾಗ (ಭಗ ಭಾಹೊÂàಷ್ಠ): ಯೋನಿದ್ವಾರದ ಸುತ್ತ ಕವಚದಂತಿರುವ, ಯೋನಿ ಭಾಗದಲ್ಲಿ ಕಾಣಿಸುವ ರಚನೆ. ಇದು ಯೋನಿ ರಚನೆಯಲ್ಲಿ ಎದ್ದುನಿಂತ ಮಾದರಿಯಲ್ಲಿ ಗೋಚರಿಸುತ್ತದೆ.
ಯೋನಿಯ ಒಳತುಟಿ (ಭಗ ಅಂತರೋಷ್ಠ): ಯೋನಿ ಹೊರತುದಿಯ ಎರಡೂ ಭಾಗಗಳಲ್ಲಿ ಇರುವ ದಪ್ಪ ಚರ್ಮದ ರಚನೆ ಇದು. ಯೋನಿ ದ್ವಾರದಲ್ಲಿ ಕಾಣಿಸುವಂತಹ ಕೂದಲು ರಹಿತ ರಚನೆಯಾಗಿದ್ದು, ಇದು ಹಿಂಬದಿ ಮತ್ತು ಮುಂಭಾಗವನ್ನು ಸೇರಿಸುವಂತಹ ರಚನೆಯಾಗಿದೆ. ಮುಂಭಾಗದಲ್ಲಿ ಚಂದ್ರನಾಡಿಗೆ ಆವರಿಸಿಕೊಂಡಿರುವ ರೀತಿಯಲ್ಲಿ ಹೋಳಾಗಿರುತ್ತದೆ.

ಚಂದ್ರನಾಡಿ (ಭಗಾಂಕುರ): ಯೋನಿದ್ವಾರದ ಮುಂಭಾಗದಲ್ಲಿ ಇರುವಂತಹ ಸಣ್ಣ ಬಟಾಣಿ ಕಾಳಿನ ಆಕಾರದಲ್ಲಿರುವ ಒಂದು ರಚನೆ.
ಸಂಪರ್ಕ ನಾಳ (ವೆಸ್ಟಿಬ್ಯೂಲ್‌): ಭಗಾಂಕುರ ಹೊರಭಾಗದಲ್ಲಿ ಇರುವಂತೆ ತ್ರಿಕೋನಾಕಾರದಲ್ಲಿರುವ ಒಂದು ರಚನೆ ಮತ್ತು ಪಿರ್ರೆಗಳು ಆವರಿಸಿರುವಂತೆ ಮತ್ತು ಯೋನಿ ಒಳತುಟಿಯ ಎರಡೂ ಕಡೆ ಇರುವಂತಹ ಪೊರೆಯಾಕಾರ (ಪೊರ್‌ಷೆಟ್‌)ದ ರಚನೆ.
ಪೆರಿನಿಯಮ್‌ (ಮೂಲಾಧಾರ): ತೊಡೆ ಮತ್ತು ಪಿರ್ರೆಗಳ ನಡುವೆ ನರವ್ಯೂಹದ ಅಂತ್ಯಭಾಗದಲ್ಲಿ ಕಾಣಿಸುವಂತಹ ವಜ್ರಾಕೃತಿಯ ಪ್ರದೇಶ ಇದು.

ಅಂತರ್‌ ಜನನೇಂದ್ರಿಯಗಳು
ಸ್ತ್ರೀ ಜನನಾಂಗ ರಚನೆಯ ಒಳಭಾಗದಲ್ಲಿ ಯೋನಿ, ಗರ್ಭಕೋಶ, ಎರಡು ಅಂಡನಾಳಗಳು ಮತ್ತು ಎರಡು ಅಂಡಾಶಯಗಳು ಒಳಗೊಂಡಿರುತ್ತವೆ. ಈ ಅಂಗರಚನೆಗಳು ಶ್ರೋಣಿ ಕುಹರ (ಪೆಲ್ವಿಕ್‌ ಕ್ಯಾವಿಟಿ)ದ ಒಳಭಾಗದಲ್ಲಿದ್ದು ಮತ್ತು ಇವುಗಳನ್ನು ಪರೀಕ್ಷಿಸಲು ವಿಶೇಷ ಸಲಕರಣೆಗಳು ಅಗತ್ಯವಾಗಿರುತ್ತವೆ.
ಗರ್ಭಕೋಶ (ಯುಟರಸ್‌)
ಗರ್ಭಕೋಶವು ಮೂರು ಪದರಗಳಿಂದುಂಟಾಗಿರುವ ಒಂದು ಸ್ನಾಯು ರಚನೆಯಾಗಿದೆ. ಅಂಡಾಣುವು ಗರ್ಭಕೋಶದ ಒಳಪೊರೆಯ ಪದರದಲ್ಲಿ ಬೀಜಾಂಕುರವಾಗಿ ಅಂತರ್ನಿವಿಷ್ಟಗೊಂಡು (ಒಳಸೇರಿ) ಗರ್ಭಾವಸ್ಥೆಯ ಪೂರ್ಣಾವಧಿಯಲ್ಲಿ ಬೆಳೆದು ಅಭಿವೃದ್ಧಿಗೊಳ್ಳುವುದು. ಇದೇ ಗರ್ಭಕೋಶದಲ್ಲಿ. ಗರ್ಭಕೋಶದ ಸಂಯೋಗವು ತಳಭಾಗದಿಂದಿದ್ದು, ಇದನ್ನು ಕೊರ್ನ್ವಾ ಎಂದು ಮತ್ತು ಇದನ್ನು ಗರ್ಭಕೋಶದ ಕೆಳ ಭಾಗವನ್ನು ನಾಳ (ಸರ್ವಿಕ್ಸ್‌) ಎಂದು ಕರೆಯುತ್ತಾರೆ. ಗರ್ಭಾವಸ್ಥೆ ರಹಿತ ಗರ್ಭಕೋಶದ ತೂಕ 50 ಗ್ರಾಂನಿಂದ 80 ಗ್ರಾಂ ತನಕವಿರುತ್ತದೆ. ಇದು ಎರಡು ಅಂಡನಾಳಗಳನ್ನು ಹೊಂದಿರುತ್ತದೆ.
ಅಂಡನಾಳ (ಫ್ಯಾಲೋಪಿಯನ್‌ ಟ್ಯೂಬ್‌) ಅಂಡನಾಳಗಳು 10 ಸೆಂಟಿಮೀಟರ್‌ನಷ್ಟು ಉದ್ದವಿದ್ದು, ಗರ್ಭಕೋಶದ ಮೇಲ್ಭಾಗದಲ್ಲಿ ಚಾಚಿಕೊಂಡಂತಿರುತ್ತದೆ ಮತ್ತಿದು ಅಂಡಾಶಯದವರೆಗೆ ಸಂಪರ್ಕಿಸಿರುತ್ತವೆ. ಅಂಡಗಳು ಫ‌ಲವತ್ತತೆ ಪಡೆಯುವುದು ಇದೇ ಅಂಡನಾಳಗಳಲ್ಲಿ.

ಅಂಡಾಶಯ (ಓವರಿ)
ಗರ್ಭಕೋಶದ ಎರಡೂ ಬದಿ ಗಳಲ್ಲಿ ಒಂದೊಂದರಂತೆ ಎರಡು ಅಂಡಾಶಯ ಗಳಿರುತ್ತವೆ. ಈ ಅಂಡಾಶಯಗಳು ಬೆದೆಕಾರಿ ಹಾರ್ಮೋನ್‌ಗಳು (ಈಸ್ಟ್ರೊಜನ್‌) ಮತ್ತು ಗರ್ಭಧಾರಣಾ ಸಂರಕ್ಷಣಾ ಹಾರ್ಮೋನ್‌ (ಪ್ರೊಜೆಸ್ಟರೋನ್‌)ಗಳನ್ನು ಉತ್ಪಾದಿಸುವ (ಸ್ರವಿಸುವ) ಕಾರ್ಯಗಳನ್ನೂ ನಿರ್ವಹಿಸುತ್ತವೆ, ಇವುಗಳು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

Advertisement

ಗರ್ಭ ದ್ವಾರ (ಸರ್ವಿಕ್ಸ್‌)
ಸಂತಾನೋತ್ಪತ್ತಿಯ ಈ ಭಾಗವು ಯೋನಿ ಮತ್ತು ಗರ್ಭಾಶಯದ ಮಧ್ಯೆ ಸ್ಥಿತವಾಗಿದೆ. ಇದು ವೀರ್ಯಾಣುವು ಫ‌ಲಿತಗೊಂಡು ಅಂಡವಾಗುವುದಕ್ಕೆ ಅಥವಾ ಆಗದಿರುವಂತೆ ಅಗತ್ಯ ಲೋಳೆಯನ್ನು ಸ್ರವಿಸುವ ಕಾರ್ಯವನ್ನು ಮಾಡುತ್ತದೆ.

ಯೋನಿ (ವಜೈನ)
ಸ್ತ್ರೀ ಬಾಹ್ಯ ಜನನಾಂಗದೊಂದಿಗೆ ಅಂತರ್‌ ಜನನಾಂಗ ರಚನೆಗಳನ್ನು ಸಂಪರ್ಕಿಸುವ ಕೊಳವೆ (ನಾಳ) ಮಾದರಿಯ ರಚನೆಯಿದು. ಈ ಕೊಳವೆಯ ಸುತ್ತಳತೆ ಅಥವಾ ಅಗಲ (ಡಯಾಮೀಟರ್‌) ಸುಮಾರು 2.5 ಸೆಂಟಿಮೀಟರ್‌ನಷ್ಟಿರುತ್ತದೆ ಹಾಗೂ ಮೇಲ್ಭಾಗದಲ್ಲಿ ಅಗಲವಾಗಿದ್ದು ಒಳತುದಿಯಲ್ಲಿ ಕಿರಿದಾಗಿರುತ್ತದೆ. ಇದು ಸಂಭೋಗ ಸಮಯದಲ್ಲಿ ವೀರ್ಯಾಣುಗಳ ಸಾಗುವಿಕೆಗೆ ಸಹಕರಿಸಿ, ಗರ್ಭ ಫ‌ಲಿಸಿ ಪ್ರಸವ ಸಮಯದಲ್ಲಿ ಶಿಶು ಹೊರಬಂದು ಪ್ರಪಂಚದ ಬೆಳಕು ಕಾಣಲು ಕಾರಣವಾಗುವ ಪ್ರಮುಖ ಅಂಗವಾಗಿದೆ.

ಯೋನಿ ಸ್ರಾವ
ಸಾಮಾನ್ಯ ಯೋನಿ ಸ್ರಾವ
ಸಾಮಾನ್ಯ ಯೋನಿ ಸ್ರಾವ ಸಣ್ಣ ಪ್ರಮಾಣದಲ್ಲಿರುತ್ತದೆ ಮತ್ತು ಇದು ಯೋನಿ ಪ್ರದೇಶವನ್ನು ತೇವ ಇರಿಸುವಷ್ಟು ಮಟ್ಟಿಗಿರುತ್ತದೆ. ಸಾಮಾನ್ಯವಾಗಿ ಋತುಸ್ರಾವದ ಮಧ್ಯಾವಧಿಯಲ್ಲಿ ಅಥವಾ ಋತುಸ್ರಾವಕ್ಕಿಂತ ಸ್ವಲ್ಪ ಮುಂಚೆ, ಗರ್ಭಿಣಿ ಅವಧಿಯಲ್ಲಿ ಮತ್ತು ಲೈಂಗಿಕವಾಗಿ ಪ್ರಚೋದಿತವಾಗಿರುವ ಸಂದರ್ಭಗಳಲ್ಲಿಯೂ ಈ ಸ್ರಾವ ಪ್ರಮಾಣ ಸ್ವಲ್ಪ ಹೆಚ್ಚಿರುತ್ತದೆ. ಈ ಸ್ರಾವವು ಗರ್ಭದ್ವಾರ, ಗರ್ಭಕೋಶ ಮತ್ತು ಬಾತೊìಲಿನ್‌ (ಲೈಂಗಿಕ ಪ್ರಚೋದನೆ ಸಮಯದಲ್ಲಿ) ಗ್ರಂಥಿಗಳಿಂದ ಉತ್ಪತ್ತಿಯಾಗುತ್ತವೆ. ಸಾಮಾನ್ಯವಾಗಿ ಯೋನಿಯ ಪಿ.ಎಚ್‌. ಆಮ್ಲಿàಯ (ಆ್ಯಸಿಡಿಕ್‌) ರೂಪದಲ್ಲಿರುತ್ತದೆ ಮತ್ತು ಇದು ಜೀವನದ ಮತ್ತು ಋತುಸ್ರಾವದ ವಿವಿಧ ಹಂತಗಳಲ್ಲಿ ಬದಲಾವಣೆಗೊಳಪಡುತ್ತಿರುತ್ತದೆ. ಡೊಡೆರ್ಲಿನ್‌ ಬ್ಯಾಸಿಲ್ಲಿನಿಂದಾಗಿ ಯೋನಿಯಲ್ಲಿ ಗ್ಲೆ„ಕೋಜಿನ್‌ ಇಯ್ನಾಟಿ ಆಮ್ಲವಾಗಿ ಪರಿವರ್ತನೆಯಾಗುವುದು ಈಸ್ಟ್ರೋಜನ್‌ ಮೇಲೆ ಅವಲಂಬಿಸಿರುತ್ತದೆ. ಈ ಆಮ್ಲಿàಯ ಪಿ.ಎಚ್‌. ಇತರ ರೋಗಜನಕ ಅಂಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಶಿಶು ಗರ್ಭದಲ್ಲಿರುವ ಸಂದರ್ಭದಲ್ಲಿ ಈ ಪಿ.ಎಚ್‌. ಹೆಚ್ಚು ಆಮ್ಲಿಯವಾಗಿರುತ್ತದೆ ಮತ್ತು ಈ ಪ್ರಮಾಣ 4ರಿಂದ 5.5ರಷ್ಟಿದ್ದು , ಸರಾಸರಿ 4.5 ಅಗಿರುತ್ತದೆ.

ಅಂತರ್‌ ಜನನೇಂದ್ರಿಯ ಭಾಗಗಳು
1) ಯೋನಿ (ವಜೈನ)
2) ಗರ್ಭದ್ವಾರ (ಸರ್ವಿಕ್ಸ್‌)
3) ಗರ್ಭಕೋಶ (ಯೂಟರಸ್‌)
4) ಅಂಡನಾಳ (ಫ್ಯಾಲೋಪಿಯನ್‌ ಟ್ಯೂಬ್‌)
5) ಅಂಡಾಶಯ (ಓವರಿ)

ಅಸಹಜ ಯೋನಿಸ್ರಾವ
ಅಸಹಜ ಯೋನಿಸ್ರಾವವು ಅನೇಕ ಮಹಿಳೆಯರು ಎದುರಿಸುವ ಸರ್ವೇ ಸಾಮಾನ್ಯ ಸಮಸ್ಯೆಯಾಗಿದೆ. ಈ ಸ್ರಾವ ಸಾಮಾನ್ಯ ಎನ್ನಬಹುದಾದ ಸ್ಥಿತಿಗಿಂತ ಜಾಸ್ತಿ ಪ್ರಮಾಣ¨ªಾಗಿರುತ್ತದೆ. ಇದು ರಕ್ತವರ್ಣದಲ್ಲಿ ವಿಸರ್ಜಿತವಾಗಬಹುದು ಅಥವಾ ಮೂತ್ರದೊಂದಿಗೆ ಸೇರಿಯೂ ವಿಸರ್ಜಿತವಾಗಬಲ್ಲುದಾಗಿರುತ್ತದೆ. ಅಸಹಜ ಯೋನಿಸ್ರಾವದ ಕಾರಣಗಳನ್ನು ನಕ್ಷೆಯ ರೂಪದಲ್ಲಿ ಈ ಕೆಳಗೆ ವಿವರಿಸಲಾಗಿದೆ:

ಬಿಳಿ ಸೆರಗು (ಲೂಕರಿಯ)
ಸಾಮಾನ್ಯ ಮಟ್ಟಕ್ಕಿಂತ ಅಧಿಕವಾಗಿರುವ ಯೋನಿಸ್ರಾವವನ್ನು ಬಿಳಿ ಸೆರಗು ಎಂದು ಕರೆಯುತ್ತಾರೆ. ಇದು ಸಾಮಾನ್ಯ ಮತ್ತು ಸಾಂಕ್ರಾಮಿಕವಲ್ಲ ಎಂಬುದಾಗಿ ನಿರ್ಧರಿಸಲು ವೈದ್ಯಕೀಯ ಮತ್ತು ಪ್ರಯೋಗಾಲಯ ತನಿಖೆ ಅಗತ್ಯವಾಗಿರುತ್ತದೆ ಇದು ಈ ಕೆಳಗಿನ
ಮಾನದಂಡಕ್ಕೊಳಪಡಬೇಕಾಗಿರುತ್ತದೆ :
– ಯೋನಿಯ ತೇವಾಂಶ ಮಟ್ಟದ ಅಥವಾ ಒಳ ಉಡುಪುಗಳಲ್ಲಿ ಕಾಣಿಸುವ ಕಲೆ (ಒಣಗಿದ ಬಳಿಕ ಕಂದು ಹಳದಿ ಬಣ್ಣ) ಅಥವಾ ಯೋನಿ ಪ್ಯಾಡ್‌ಗಳ ಬಳಕೆಯು ಅತಿ ಸ್ರಾವಕ್ಕೆ ಸಾಕ್ಷಿಯಾಗುತ್ತದೆ.
– ಇದು ಕೀವು ರಹಿತ ಮತ್ತು ದುರ್ವಾಸನೆ ಮುಕ್ತ
-ಇದು ಉದ್ರೇಕಕಾರಿಯಲ್ಲ (ಕಿರಿ ಕಿರಿ ರಹಿತ) ಮತ್ತು ಇದು ಯಾವತ್ತೂ ತುರಿಕೆ ಉಂಟುಮಾಡುವುದಿಲ್ಲ

ಅತಿಯಾದ ಯೋನಿ ಸ್ರಾವಕ್ಕೆ ಈ ಕೆಳಗಿನ ಮೂರು ಅಂಶಗಳೇ ಪ್ರಮುಖ ಕಾರಣಗಳು :
-ಹೆಚ್ಚುವರಿ ದೈಹಿಕತೆ
-ಗರ್ಭಕೋಶ ಸಂಬಂಧಿ ಕಾರಣ
-ಯೋನಿ ಕಾರಣ

– ಹೆಚ್ಚುವರಿ ದೈಹಿಕತೆ : ಈಸ್ಟ್ರೊಜನ್‌ ಮಟ್ಟದಲ್ಲಿ ಹೆಚ್ಚಳ ಉಂಟಾದಾಗ ಸಾಮಾನ್ಯ ಸ್ರಾವ ಮಟ್ಟದಲ್ಲಿ ಹೆಚ್ಚಳ ಉಂಟಾಗುತ್ತದೆ ಮತ್ತು ಇದನ್ನು ಹೆಚ್ಚುವರಿ ದೈಹಿಕತೆ ಎಂಬುದಾಗಿ ಕರೆಯುತ್ತಾರೆ. ಮೈ ನೆರೆ ಯುವಿಕೆಯ ಸಂದರ್ಭದಲ್ಲಿ ಈ ಬದಲಾವಣೆ ಗೋಚರ ವಾಗುತ್ತದೆ, ಋತುಚಕ್ರ ಸಮಯದಲ್ಲಿ ಮತ್ತು ಗರ್ಭಿಣಿ ಆಗಿರುವ ಸಂದರ್ಭದಲ್ಲಿ (ಗರ್ಭಿಣಿ ಅವಧಿಯಲ್ಲಿ ಅಧಿಕ ನಾಳೀಯತೆಯ ಹೈಪೊರೆನಿಟ್ರಿಸಮ್‌ ಇರುತ್ತದೆ. ಇದು ಅತಿಯಾದ ಯೋನಿ ಸ್ರಾವಕ್ಕೆ ಕಾರಣವಾಗುತ್ತದೆ ಮತ್ತು ಗರ್ಭದ್ವಾರ ಗ್ರಂಥಿ ಸ್ರಾವಕ್ಕೂ ಕಾರಣ)
– ಗರ್ಭಕೋಶ ಸಂಬಂಧಿ ಕಾರಣ : ಸಾಂಕ್ರಾಮಿಕವಲ್ಲದ ಗರ್ಭದ್ವಾರದ ರೋಗಸೂಚಕವೂ ಸಹ ಅತಿಯಾದ ಸ್ರಾವಕ್ಕೆ ಕಾರಣವಾಗಿ ಅದು ಯೋನಿಯಲ್ಲಿ ಒಸರುವಂತಾಗುತ್ತದೆ. ಈ ರೋಗಸೂಚಕಗಳು – ಗರ್ಭದ್ವಾರದ ಕೊರೆತ (ಕ್ಷರಣ), ಗಂಭೀರ ಗರ್ಭದ್ವಾರದ ತೊಂದರೆ ಮತ್ತು ಲೋಳೆಪೊರೆಯ ಊತಕದಿಂದುಂಟಾಗುವ ಚಾಚಿಕೆ.
ಯೋನಿ ಕಾರಣ : ಶ್ರೋಣಿ ಕುಹರದಲ್ಲಿ ಉಂಟಾಗುವ ರಕ್ತ ನಿಬಿಡತೆ ಸ್ಥಿತಿಯಿಂದಾಗಿ ಅತಿಯಾದ ಯೋನಿ ಸ್ರಾವ ಸಂಭವಿಸುತ್ತದೆ. ಈ ಸ್ಥಿತಿಗಳೆಂದರೆ – ಗರ್ಭಕೋಶದ ಜಾರುವಿಕೆ, ಪೂರ್ವಸ್ಥಿತಿಗೆ ಮರಳಿರುವ ಗರ್ಭಕೋಶ, ಗಂಭೀರ ಶ್ರೋಣಿ ಕುಹರದ ಊತಕ, ಮಾತ್ರೆಗಳ ಬಳಕೆ, ಅನಾರೋಗ್ಯ.

ಯೋನಿಯ ಈಸ್ಟ್‌ ಸೋಂಕು
ಅರ್ಥ : ಯೋನಿಯ ಈಸ್ಟ್‌ ಸೋಂಕು ಎಂದರೆ, ಯೋನಿಯಲ್ಲಿ ಕಾಣಿಸಿಕೊಳ್ಳುವ ಶಿಲೀಂಧ್ರ (ಫ‌ಂಗಲ್‌) ಅಥವಾ ಈಸ್ಟ್‌ ಸೋಂಕು. ಇದು ಆರೋಗ್ಯವಂತ ಮಹಿಳೆಯಲ್ಲಿಯೂ ಕಾಣಿಸಿಕೊಳ್ಳಬಹುದಾದಂತಹ ಸಾಂದರ್ಭಿಕ ಸಮಸ್ಯೆಯಾಗಿರಬಹುದು. ಇದಕ್ಕೆ ಕ್ಯಾಂಡಿಡಾ ಅಲ್ಬಿಕನ್ಸ್‌ ಕಾರಣ.
ಯಾವುದೇ ಲಕ್ಷಣಗಳಿಲ್ಲದೆ ಸುಮಾರು 20 ಪ್ರತಿಶತ ಮಹಿಳೆಯರಲ್ಲಿ ಈ ಈಸ್ಟ್‌ ಸೋಂಕು ಯೋನಿ ಪ್ರದೇಶದಲ್ಲಿ ಕಾಣಿಸುತ್ತದೆ. ಇದು ಆಮ್ಲಿàಯ ರೂಪದಲ್ಲಿ ಅದರಲ್ಲೂ ಕಾಬೊìಹೈಡ್ರೇಟ್‌ ಅಂಶ ಹೆಚ್ಚಾಗಿರುವಂತೆ ಇರುತ್ತದೆ. ಈಸ್ಟ್‌ ಸೋಂಕು ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ವೈಜ್ಞಾನಿಕ ಸಂಶೋಧನೆಗಳಿಂದ ಸಾಧಿತವಾಗಿರುವ ಪ್ರಕಾರ ಗರ್ಭಿಣಿ ಮಹಿಳೆಯರು ಹೆಚ್ಚು ಪ್ರಮಾಣದ ಈಸ್ಟ್‌ ಸೋಂಕು ಶಂಕಿತರಾಗಿರುತ್ತಾರೆ. ಆದರೆ ಈ ಈಸ್ಟ್‌ ಸೋಂಕು ಹುಟ್ಟುವ ಮಗುವಿಗೆ ಯಾವುದೇ ರೀತಿ ಅಪಾಯಕಾರಿಯಲ್ಲ, ಇದು ಜನನ ಶಿಶು ನ್ಯೂನತೆಗಾಗಲಿ ಅಥವಾ ಮಗುವಿಗೆ ಯಾವುದೇ ಸಮಸ್ಯೆಕಾರಕವಾಗಲಿ ಆಗಿರುವುದಿಲ್ಲ. ಆದರೆ ಇದು ತೀವ್ರ ರೀತಿಯಲ್ಲಿ ಅಹಿತಕಾರಿ.
ಘಟನೆಗಳು: ಸರಿಸುಮಾರು ಶೇ.75 ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಒಂದು ಅಥವಾ ಅದಕ್ಕಿಂತಲೂ ಹೆಚ್ಚು ಬಾರಿ ಈ ಯೋನಿಯ ಈಸ್ಟ್‌ ಸೋಂಕಿಗೆ ಒಳಗಾಗಿರುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ, ಸುಮಾರು ಶೇ.40-50 ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಎರಡನೇ ಬಾರಿಗೆ ಈ ಯೋನಿಯ ಈಸ್ಟ್‌ ಸೋಂಕು ತೊಂದರೆಗೊಳಗಾಗುವವರಿ¨ªಾರೆ, ಆದರೆ ಶೇ. 5 ಮಹಿಳೆಯರು ಪುನರಾವರ್ತಿತ ಯೋನಿಯ ಈಸ್ಟ್‌ ಸೋಂಕಿನ ಸಮಸ್ಯೆಗೊಳಗಾದ ವರದಿ ಲಭ್ಯವಿದೆ, ಇದಲ್ಲದೆ, ಸುಮಾರು ಶೇ.75 ಮಹಿಳೆಯರು ಗರ್ಭಾವಸ್ಥೆ ಹಂತದಲ್ಲಿ ಯೋನಿಯ ಈಸ್ಟ್‌ ಸೋಂಕಿಗೆ ಒಳಗಾದ ವರದಿಗಳೂ ಇವೆ.

ಯೋನಿಯ ಈಸ್ಟ್‌ ಸೋಂಕಿನ ಅಪಾಯಕಾರಿ ಅಂಶಗಳು
ಸೋಂಕು ಉಂಟುಮಾಡುವ ಅವಕಾಶಗಳನ್ನು
ಹೆಚ್ಚಿಸಲು ಅನೇಕ ಅಪಾಯಕಾರಿ ಅಂಶಗಳು ಕಾರಣವಾಗಿವೆ, ಇವುಗಳಲ್ಲಿ ಮುಖ್ಯವಾಗಿ, ಯೋನಿಯಲ್ಲಿರುವ ಆರೋಗ್ಯವಂತ ಬ್ಯಾಕ್ಟೀರಿಯ(ಜಮ್ಸ್‌ì)ಗಳ ಸಾಮಾನ್ಯ ಸಮತೋಲನಾ ಮಟ್ಟದಲ್ಲಿ ವ್ಯತ್ಯಾಸವುಂಟಾಗುವುದು. ಈ ಕೆಳಗಿನ ಅಂಶಗಳನ್ನೊಳಗೊಂಡಂತೆ ಅನೇಕ ಅಂಶಗಳು ಈ ಆರೋಗ್ಯವಂತ ಬ್ಯಾಕ್ಟೀರಿಯಗಳ ಸಮತೋಲನ ಮಟ್ಟ ವ್ಯತ್ಯಾಸವಾಗಲು ಕಾರಣವಾಗುತ್ತವೆ :
1 ಗರ್ಭಾವಸ್ಥೆ – ತಮ್ಮ ಗರ್ಭಿಣಿ ಅವಧಿಯಲ್ಲಿ ಸ್ತ್ರೀಯರು ಈಸ್ಟ್‌ ಸೋಂಕಿನ ಅಪಾಯಕ್ಕೊಳಗಾಗುವ ಸಾಧ್ಯತೆಗಳು ಬಹಳ ಹೆಚ್ಚಾಗಿವೆ ಎಂಬುದನ್ನು ವೈಜ್ಞಾನಿಕ ಅಧ್ಯಯನಗಳು ಧೃಢಪಡಿಸಿವೆ. (ಯೋನಿಯಲ್ಲಿನ ಅಧಿಕ ಆಮ್ಲಿàಯತೆ, ಅಧಿಕ ಗ್ಲೆ„ಕೋಜನ್‌ ಮತ್ತು ಮೂತ್ರದಲ್ಲಿ ಅಧಿಕವಿರುವ ಸಕ್ಕರಾಂಶ)
2 ಮಧುಮೇಹ (ಡಯಾಬಿಟಿಸ್‌) – ಮಧುಮೇಹ ಈಸ್ಟ್‌ ಸೋಂಕಿಗೆ ಕಾರಣವಾಗುತ್ತದೆ, ಮುಖ್ಯವಾಗಿ ಯಾರ ರಕ್ತದಲ್ಲಿನ ಸಕ್ಕರಾಂಶವು ಸರಿಯಾದ ನಿಯಂತ್ರಣದಲ್ಲಿರುವುದಿಲ್ಲವೋ ಅವರಲ್ಲಿ ಈ ಅಪಾಯ ಹೆಚ್ಚಿರುತ್ತದೆ. ರಕ್ತದಲ್ಲಿ ಮತ್ತು ಮೂತ್ರದಲ್ಲಿ ಹೆಚ್ಚು ಪ್ರಮಾಣದಲ್ಲಿರುವ ಸಕ್ಕರೆಯ ಅಂಶ, ಮತ್ತು ಸೋಂಕು ತಡೆಯ ಕ್ಷೀಣ ಅವಕಾಶಗಳೂ ಈಸ್ಟ್‌ ಬೆಳವಣಿಗೆಗೆ ಸಹಕಾರಿಯಾಗಿವೆ.
3ರಕ್ತಹೀನತೆ (ಅನೀಮಿಯಾ) – ಕಬ್ಬಿಣಾಂಶ ಕೊರತೆಯ ರಕ್ತಹೀನತೆ
4 ಅಸಮರ್ಪಕ ನೈರ್ಮಲ್ಯ ಕಾಪಾಡುವಿಕೆ :
-ಬಿಗಿಯಾದ ಉಡುಪು ಧರಿಸುವುದು ಮತ್ತು ಸಿಂಥೆಟಿಕ್‌ ರಹಿತವಾಗಿ ತಯಾರಿಸಿದ ಉಡುಪುಗಳನ್ನು ಧರಿಸುವುದು.
– ಶೌಚದ ಬಳಿಕ ಹಿಂದಿನಿಂದ ಮುಂದಕ್ಕೆ ತೊಳೆಯುವುದು
– ಸ್ನಾನದ ಬಳಿಕ ಅಥವಾ ಶೌಚದ ಬಳಿಕ ಜನನಾಂಗವನ್ನು ಶುಷ್ಕಗೊಳಿಸದಿರುವುದು
– ನೀರು ಅಥವಾ ಕ್ರಿಮಿನಾಶಕಗಳಿಂದ ಸ್ವತ್ಛಗೊಳಿಸುವುದು ಅಥವಾ ಸ್ವತ್ಛ ಸ್ಪ್ರೆàಗಳ ಬಳಕೆ
– ಸುಗಂಧಭರಿತ ಸ್ಯಾನಿಟರಿ ಪ್ಯಾಡ್‌ಗಳು ಅಥವಾ ಮೆತ್ತೆ (ಟ್ಯಾಂಪುನ್‌) ಬಳಕೆ
– ಬಣ್ಣದ ಅಥವಾ ಸುಗಂಧಭರಿತ ಟಾಯ್ಲೆಟ್‌ ಪೇಪರ್‌ಗಳ ಬಳಕೆ. ಈ ವಸ್ತುಗಳು ಯೋನಿಯಲ್ಲಿನ ಆಮ್ಲಿàಯತೆಯ ಸಮತೋಲನದಲ್ಲಿ ಪರಿಣಾಮ ಬೀರುತ್ತವೆ ಮತ್ತು ಯೋನಿ ಈಸ್ಟ್‌ ಸೋಂಕಿಗೆ ಕಾರಣವಾಗುತ್ತದೆ.
– ತೇವ ಬಟ್ಟೆಯನ್ನು ಬದಲಾಯಿಸದಿರುವುದು
– ಪ್ರತಿದಿನ ಸ್ನಾನ ಮಾಡದೇ ಇರುವುದು
5 ರೋಗನಿರೋಧಕಗಳು (ಪ್ರತಿಜೀವಕ) (ಆ್ಯಂಟಿ ಬಯೋಟಿಕ್‌) – ಹೆಚ್ಚನ ಪ್ರತಿಜೀವಕಗಳು ಯೋನಿಯಲ್ಲಿ ಇರುವಂತಹ ಸಾಮಾನ್ಯ ಬ್ಯಾಕ್ಟೀರಿಯಾಗಳ ಸಹಿತ ವಿವಿಧ ರೀತಿಯ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುತ್ತವೆ. ಈ ಬ್ಯಾಕ್ಟೀರಿಯಾಗಳು ಈಸ್ಟ್‌ಗಳ ಹೆಚ್ಚುವರಿ ಬೆಳವಣಿಗೆಯಿಂದ ಯೋನಿಯನ್ನು ರಕ್ಷಿಸುತ್ತವೆ. ಪ್ರತಿಜೀವಕ ಸೇವಿಸುತ್ತಿರುವ ಮಹಿಳೆಯರಲ್ಲಿ ಈಸ್ಟ್‌ ಸೋಂಕು ಕಂಡುಬಂದಿರುವುದು ಈ ಅಂಶವನ್ನು ಪುಷ್ಠಿàಕರಿಸುತ್ತದೆ (ಆಮ್ಲಕಾರಕ ಲ್ಯಾಕ್ಟೊಬ್ಯಾಸಿಲ್ಲಿಯನ್ನು ನಾಶಗೊಳಿಸುತ್ತದೆ).
6 ವೈದ್ಯಕೀಯ ಚಿಕಿತ್ಸೆ – ಸ್ಟಿರಾಯ್ಡ ಹಾರ್ಮೊನ್‌ಗಳು, ಋತುಚಕ್ರ ಮುಂದೂಡಲು ಸೇವಿಸುವ ಇಮ್ಯುನೋಸಪ್ರಸಂಟ್‌ ಮತ್ತು ಆ್ಯಂಟಿ ಇನ್‌ಫ್ಲಮೇಟರಿ ಔಷಧಗಳು.
7 ಹಾವೊìನ್‌ ಸಂಬಂಧಿತ ಗರ್ಭನಿರೋಧಕಗಳು – ಉದಾಹರಣೆಗೆ, ಜನನ ನಿಯಂತ್ರಣ ಮಾತ್ರೆಗಳು. ಈಸ್ಟ್ರೊಜನ್‌ಯುಕ್ತ ಜನನ ನಿಯಂತ್ರಣಗಳನ್ನು ಉಪಯೋಗಿಸುವ ಮಹಿಳೆಯರಲ್ಲಿ ಈಸ್ಟ್‌ ಸೋಂಕಿನ ಅಪಾಯ ಹೆಚ್ಚಾಗಿರುತ್ತದೆ.
8 ಕ್ಷೀಣಿತ ರೋಗನಿರೋಧಕ ವ್ಯವಸ್ಥೆ – ಎಚ್‌.ಐ.ವಿ. ಕಾರಣದಿಂದ ದುರ್ಬಲ ರೋಗನಿರೋಧಕ ವ್ಯವಸ್ಥೆಯ ಮಹಿಳೆಯರಲ್ಲಿ ಈಸ್ಟ್‌ ಸೋಂಕು ಸಾಮಾನ್ಯವಾಗಿರುತ್ತದೆ.
9 ಲೈಂಗಿಕ ಚಟುವಟಿಕೆ – ಯೋನಿಯ ಈಸ್ಟ್‌ ಸೋಂಕು ಲೈಂಗಿಕ ವಾಗಿ ಹರಡುವಂತಹ ಸೊಂಕು ಆಗಿರುವುದಿಲ್ಲ. ಇವುಗಳು ಎಂದಿಗೂ ಲೈಂಗಿಕವಾಗಿ ಸಕ್ರಿಯವಿಲ್ಲದ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು, ಆದರೆ ಲೈಂಗಿಕವಾಗಿ ಕ್ರಿಯಾಶೀಲರಾಗಿರುವ ಮಹಿಳೆಯರಲ್ಲಿಯೂ ಸಾಮಾನ್ಯವಾಗಿ ಕಾಣಿಸಬಹುದು.
10 ಈ ಪರೋಪ ಜೀವಿ ಮತ್ತು ಕರುಳು ಹುಳುಗಳು ಪರೋಪಜೀವಿಗಳು ಕರುಳಿನಲ್ಲಿರುವ ಉಪಕಾರಿ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುತ್ತವೆ, ಇದರಿಂದ ಈಸ್ಟ್‌ನ ಶೀಘ್ರ ಬೆಳವಣಿಗೆ ಸಾಧ್ಯವಾಗುತ್ತದೆ.
11 ಹೈಪೊಥೈರಾಯ್ಡ – ಕ್ಯಾಂಡಿಡಾ ಪ್ರಕರಣಗಳಲ್ಲಿ ನಿಮ್ನ ಥೈರಾಯ್ಡ ಸಾಮಾನ್ಯವಾಗಿರುತ್ತದೆ. ಥೈರಾಯ್ಡ ಗ್ರಂಥಿಯು ಪ್ರತಿಬಂಧಕದಲ್ಲಿ ಪ್ರಮುಖ ಪರಿಣಾಮವನ್ನು ಉಂಟುಮಾಡುತ್ತದೆ. ಸಾಕಷ್ಟು ಪ್ರಮಾಣದ ಥೈರಾಯ್ಡ ಕ್ರಿಯೆಯು ಜೀರ್ಣಾಂಗ ಕಾರ್ಯದ ಸರಾಗತೆಗೆ ಸಹಾಯವಾಗಿದೆ. ಸರಿಯಾದ ಜೀರ್ಣರಸಗಳ ಉತ್ಪತ್ತಿಯ ಕೊರತೆಯು ಸ್ನೇಹಿ ಬ್ಯಾಕ್ಟೀರಿಯಾಗಳ ಉತ್ಪತ್ತಿ ಕುಂಠಿತಗೊಳ್ಳಲು ಕಾರಣವಾಗುತ್ತದೆ.
12 ಅತಿಯಾದ ಒತ್ತಡ ಮತ್ತು ಹೆಚ್ಚಿದ ಕಾರ್ಟಿಸೋಲ್‌: ಒತ್ತಡವು ಹಲವಾರು ಕಾರಣಗಳಿಗಾಗಿ ಯೀÓr… ಬೆಳವಣಿಗೆಗೆ ಕಾರಣವಾಗಬಹುದು. ಒತ್ತಡವು ಕಾರ್ಟಿಸೋಲ್‌ ಎಂಬ ನಿರ್ದಿಷ್ಟ ಹಾರ್ಮೋನ್‌ ಬಿಡುಗಡೆಗೆ ಕಾರಣವಾಗುತ್ತದೆ. ಕಾರ್ಟಿಸೋಲ್‌ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕುಗ್ಗಿಸಬಹುದು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸಬಹುದು. ರಕ್ತದಲ್ಲಿನ ಸಕ್ಕರೆಯ ಹೆಚ್ಚಳವು ಯೀÓr… ಕೋಶಗಳನ್ನು ಪೋಷಿಸುತ್ತದೆ ಮತ್ತು ಅವುಗಳನ್ನು ತ್ವರಿತವಾಗಿ ಬೆಳೆಯಲು ಅನುವು ಮಾಡಿಕೊಡುತ್ತದೆ.

-ಪ್ರತಿಭಾ ಕಾಮತ್‌
ಅಸಿಸ್ಟೆಂಟ್‌ ಪ್ರೊಫೆಸರ್‌,
ಒಬಿಜಿ ನರ್ಸಿಂಗ್‌ ವಿಭಾಗ,
ಎಂಸಿಒಎನ್‌, ಮಾಹೆ, ಮಣಿಪಾಲ
ಡಾ| ಸುಷ್ಮಿತಾ ಆರ್‌. ಕರ್ಕಡ
ಅಸಿಸ್ಟೆಂಟ್‌ ಪ್ರೊಫೆಸರ್‌ (ಸೀನಿಯರ್‌),
ಒಬಿಜಿ ನರ್ಸಿಂಗ್‌ ವಿಭಾಗ,
ಎಂಸಿಒಎನ್‌, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next