Advertisement

ಕೋವಿಡ್ ವಾರಿಯರ್ಸ್ ಗೆ ಸನ್ಮಾನ

09:47 AM Jun 22, 2020 | Suhan S |

ರಾಣಿಬೆನ್ನೂರ: ಕೋವಿಡ್ ವೈರಸ್‌ ತಡೆಗಟ್ಟಲು ಕೋವಿಡ್ ವಾರಿಯರ್ಸ್ಗಳ ಸೇವೆ ಅಮೋಘವಾದದ್ದು. ಈ ನಿಟ್ಟಿನಲ್ಲಿ ಅವರನ್ನು ಗೌರವಿಸುವುದು ಮಾನವೀಯ ಧರ್ಮ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

Advertisement

ತಾಲೂಕಿನ ಕವಲೆತ್ತು ಗ್ರಾಮದ ಮಾರ್ಗದ ದುರ್ಗಮ್ಮ ದೇವಿ ದೇವಸ್ಥಾನ ಸಭಾಭನದಲ್ಲಿ ಜಿಪಂ, ತಾಪಂ, ಗ್ರಾಪಂ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೋವಿಡ್ ವಾರಿಯರ್ಸ್ ಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದ್ದು, ಗ್ರಾಮದ ಪ್ರತಿಯೊಬ್ಬ ನಾಗರಿಕರು ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು ಎಂದರು.

ಕೋವಿಡ್ ವಾರಿಯರ್ಸ್ ಗಳಾದ ಆಶಾ, ಅಂಗನವಾಡಿ ಕಾರ್ಯಕರ್ತರು, ಪೊಲೀಸ್‌ ಸಿಬ್ಬಂದಿ, ಪೌರಕಾರ್ಮಿಕರನ್ನು ಗೌರವಿಸಲಾಯಿತು. ನಗರಯೋಜನಾ ಪ್ರಾಧಿಕಾರ ಅಧ್ಯಕ್ಷ ಚೋಳಪ್ಪ ಕಸವಾಳ, ಜಿಪಂ ಸದಸ್ಯೆ ಮಂಗಳಗೌರಿ ಪೂಜಾರ, ದುರುಗಮ್ಮ ಜಾಡರ, ತಾಪಂ ಇಒ ಎಸ್‌.ಎಂ. ಕಾಂಬಳೆ, ವ್ಯವಸ್ಥಾಪಕ ಬಸವರಾಜ ಶಿಡೇನೂರು, ಬಿ.ಎಸ್‌. ಪಾಟೀಲ, ಅಶೋಕ ನಾರಜ್ಜಿ, ನೇತ್ರಾವತಿ, ರೇಣುಕಮ್ಮ ಪೂಜಾರ, ಶ್ರೀನಿವಾಸ, ಕರಬಸಮ್ಮ ಬಣಕಾರ, ಸರ್ವಮಂಗಳಮ್ಮ ಓಲೇಕಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next