ಉದ್ಯಾವರ: ಯೋಗಾಸನದಲ್ಲಿ ವಿವಿಧ ಸಾಧನೆ ಮಾಡಿ ಗಿನ್ನಿಸ್ ದಾಖಲೆ ಮಾಡಿರುವ ತನುಶ್ರೀ ಪಿತ್ರೋಡಿ ಅವರಿಗೆ ಶನಿವಾರ ಉದ್ಯಾವರ ಕೊಪ್ಲ ರಾಮ ಮಂದಿರ ವತಿಯಿಂದ ಸನ್ಮಾನ ನಡೆಯಿತು. ಇವರೊಂದಿಗೆ ಶಿಕ್ಷಕಿ ಉಮಾವತಿ, ಮಾಸ್ಟರ್ ಲಿಖಿತ್ ಅವರನ್ನು ಸನ್ಮಾನಿಸಲಾಯಿತು.
ಶನಿವಾರ ಉದ್ಯಾವರದ ಕೊಪ್ಲದಲ್ಲಿ ನಡೆದ ರಾಮ ಮಂದಿರದ ವಾರ್ಷಿಕ ವರ್ಧಂತ್ಸುವದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ತನುಶ್ರೀ ಅವರು ಯೋಗಾಸನದ ಭಂಗಿಯನ್ನು ಒಂದು ನಿಮಿಷದಲ್ಲಿ 42 ಬಾರಿ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದರು. ಈ ಸಾಧನೆಗಾಗಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ೩೫ ವರ್ಷ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಸರಕಾರದ ಸೇವೆಗಳನ್ನು ಮನೆಮನೆಗೆ ತಲುಪಿಸುವ ಮಹತ್ತರ ಕಾರ್ಯವನ್ನು ಮಾಡಿರುವ ಉಮಾವತಿಯವರನ್ನು ಕೂಡಾ ಸನ್ಮಾನಿಸಲಾಯಿತು. ಸಂಗೀತ ಕ್ರೀಡೆ ಮುಂತಾದ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಾಸ್ಟರ್ ಲಿಖಿತ್ ಅವರು ಕೂಡಾ ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದರು.