Advertisement

ತಂಗಿಯ ಕೊಲೆಗೆ ತಾರತಮ್ಯದ ಭಾವನೆಯೇ ಕಾರಣ: ಡಾ|ಹರ್ಷ

11:21 PM Oct 28, 2019 | mahesh |

ಮಂಗಳೂರು: ಹೆತ್ತವರು ತನ್ನನ್ನು ಕಡೆಗಣಿಸುತ್ತಿದ್ದಾರೆ ಮತ್ತು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪಿಯ ಭ್ರಮೆಯೇ ಕಂಬಳಪದವಿನ ವಿದ್ಯಾರ್ಥಿನಿ ಫಿಯೋನಾ ಸ್ವೀಡಲ್‌ ಕುಟಿನ್ಹೊ (16)ಳ ಕೊಲೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್‌ ಆಯುಕ್ತ
ಡಾ| ಹರ್ಷ ಪಿ.ಎಸ್‌. ತಿಳಿಸಿದ್ದಾರೆ.

Advertisement

ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದ ಆರೋಪಿ ಸ್ಯಾಮ್ಸನ್‌ ಮಾದಕ ವ್ಯಸನ ಮತ್ತಿತರ ದುಶ್ಚಟಗಳಿಗೆ ಬಲಿಯಾಗಿ ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಮನೆಯಲ್ಲಿದ್ದ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ತಂಗಿ ಫಿಯೋನಾ ಪ್ರತಿಭಾನ್ವಿತಳಾಗಿದ್ದು, ಆಕೆಯ ಬಗ್ಗೆ ಹೆತ್ತವರು ಹೆಚ್ಚು ಮಮತೆ ತೋರುತ್ತಿದ್ದಾರೆ ಎಂಬ ಭಾವನೆ ಸ್ಯಾಮ್ಸನ್‌ನಲ್ಲಿತ್ತು ಎಂದು ಆಯುಕ್ತರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೆತ್ತವರು ತಂಗಿಗೆ ಒಳ್ಳೆಯ ಮೊಬೈಲ್‌ ಫೋನ್‌ ಕೊಡಿಸಿದ್ದರು. ಊಟ, ತಿಂಡಿಯಲ್ಲೂ ಆಕೆಗೆ ಆದ್ಯತೆ ನೀಡಲಾಗುತ್ತಿತ್ತು ಎಂದು ಸ್ಯಾಮ್ಸನ್‌ ತಿಳಿ ಸಿದ್ದಾನೆ. ಇಂಥ ಭಾವನೆ ಆತನಲ್ಲಿ ಬೆಳೆದು ಸಹೋದರಿ ಮೇಲೆ ಅಸೂಯೆಪಟ್ಟು ಕೊಲೆ ಮಾಡಿದ್ದಾನೆ ಎಂಬುದು ಈ ವರೆಗಿನ ತನಿಖೆಯಿಂದ ತಿಳಿದು ಬಂದಿದೆ ಎಂದು ಆಯುಕ್ತರು ತಿಳಿಸಿದರು.

ಫಿಯೋನಾ ನಾಪತ್ತೆ ಬಗ್ಗೆ ಆಕೆಯ ಹೆತ್ತವರು ಅ. 9ರಂದು ಕೊಣಾಜೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಸ್ತೃತ ತನಿಖೆ ನಡೆಸಿದ್ದ ರೂ ಸುಳಿವು ಲಭ್ಯವಾಗಿಲ್ಲ. ಆಕೆಯ ಮೊಬೈಲ್‌ ಫೋನ್‌ ಕರೆ ವಿವರ ಹಾಗೂ ಸ್ಥಳೀಯರಿಂದ ಸಿಕ್ಕಿದ ಮಾಹಿತಿ ಪ್ರಕಾರ ಅವ ಳು ಅ. 8ರಂದು ಮನೆಯಿಂದ ಹೊರಗೆ ಹೋಗಿಲ್ಲ ಎಂಬುದು ತಿಳಿ ಯಿತು. ಹಾಗಾಗಿ ಮನೆಯವರ ಮೇಲೆಯೇ ಸಂಶಯ ಮೂಡಿತ್ತು. ಬಳಿಕ ಸ್ಯಾಮ್ಸನ್‌ನನ್ನು ಹೆಚ್ಚಿನ ತನಿಖೆಗೆ ಒಳಪಡಿ ಸಿ ದಾಗ ಕೊಲೆಯ ಬಗ್ಗೆ ಒಪ್ಪಿ ಕೊಂಡ. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದು, ಅವನನ್ನು ಪೊಲೀಸ್‌ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ ನಡೆಸಲಾಗುವುದು. ಫಿಯೋನಾಳನ್ನು ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಆರೋಪಿ ತಿಳಿಸಿದ್ದು, ಮೃತದೇಹದ ಅವಶೇಷಗಳ ಬಗ್ಗೆ ಫೂರೆನ್ಸಿಕ್‌ ತಜ್ಞರಿಂದಲೂ ವರದಿ ತರಿಸಿ ತನಿಖೆ ನಡೆಸಲಾಗುವುದು ಎಂದು ಆಯು ಕ್ತರು ಹೇಳಿದರು.

2 ದಿನ ಆತ ಮನೆಯಲ್ಲಿರಲಿಲ್ಲ
ಕೊಲೆ ಮಾಡಿದ ಬಳಿಕ ಎರಡು ದಿನ ಆರೋಪಿ ಮನೆಯಲ್ಲಿರಲಿಲ್ಲ. ತನಗೆ ತಲೆನೋವು ಎಂದು ಹೇಳಿ ಆತ ಹೊರಗೆ ಹೋಗಿದ್ದ. ತಮ್ಮ ಮಕ್ಕಳು ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗಿದ್ದಾರೆ ಎಂದು ಒಪ್ಪಿಕೊಳ್ಳಲು ಯಾವುದೇ ಹೆತ್ತವರು ಸಿದ್ಧರಿಲ್ಲ. ಹಾಗಾಗಿ ಮಾದಕ ದ್ರವ್ಯ ವ್ಯಸನ ವಿರುದ್ಧ ಜಾಗೃತಿ ಮೂಡಿಸಲು ಪೊಲೀಸರು ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ ಎಂದು ಪೊಲೀಸ್‌ ಆಯುಕ್ತರು ವಿವರಿಸಿದರು.

Advertisement

ಒಬ್ಬನಿಂದಲೇ ಕೃತ್ಯ
ಸುತ್ತಿಗೆಯಿಂದ ತಲೆಗೆ ಮರಣಾಂತಿಕ ಹಲ್ಲೆ ನಡೆಸಿದ್ದರಿಂದ ಫಿಯೋನಾ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಳು. ಬಳಿಕ ಮೃತದೇಹವನ್ನು ಮನೆಯಿಂದ ಸುಮಾರು 100 ಮೀ. ದೂರ ಕಾಡಿನ ಮಧ್ಯೆ ಇರುವ ತೋಡಿಗೆ ಎಸೆದಿದ್ದ. ಇಲ್ಲಿ ಜನಸಂಚಾರ ಕಡಿಮೆ ಇದ್ದು, ಮಳೆಯೂ ಬರುತ್ತಿದ್ದ ಕಾರಣ ಶವ ಕೊಳೆತರೂ ವಾಸನೆ ಬಂದಿರಲಿಲ್ಲ. ಕೊಲೆ ಬಳಿಕ ಆತನೊಬ್ಬನೇ ಶವವನ್ನು ಹೊತ್ತೂಯ್ದಿರುವುದು ಈ ವರೆಗಿನ ತನಿಖೆಯಿಂದ ತಿಳಿದು ಬಂದಿದೆ ಎಂದು ಆಯುಕ್ತರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next