Advertisement

UGC: ಕಾಲೇಜು ವೆಬ್‌ಸೈಟ್‌ಗಳಲ್ಲಿ ಶುಲ್ಕ ವಿವರ ಕಡ್ಡಾಯ

08:24 PM Oct 11, 2023 | Pranav MS |

ನವದೆಹಲಿ: ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಶುಲ್ಕ ಮತ್ತು ಮರುಪಾವತಿ ನೀತಿಯ ವಿವರಗಳು, ಹಾಸ್ಟೆಲ್‌ ಸೌಲಭ್ಯ, ಶಿಷ್ಯವೇತನ, ಶ್ರೇಯಾಂಕ ಮತ್ತು ಮಾನ್ಯತೆ ಕುರಿತ ಸರಿಯಾದ ಮಾಹಿತಿಯನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಯುಜಿಸಿ ಸೂಚಿಸಿದೆ.

Advertisement

ಹಲವು ವಿಶ್ವವಿದ್ಯಾಲಯಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಕನಿಷ್ಠ ಮಾಹಿತಿಯನ್ನು ಒದಗಿಸಿಲ್ಲ. ಜತೆಗೆ ಕೆಲವು ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸದೇ ಇರುವುದು ಹಾಗೂ ನವೀಕರಣಗೊಳದೇ ಇರುವುದನ್ನು ಗಮನಿಸಿರುವ ಯುಜಿಸಿ, ಈ ಕ್ರಮವನ್ನು ಕೈಗೊಂಡಿದೆ.

ಪೇಟೆಂಟ್‌ಗಳ ವಿವರಗಳು, ವಿದೇಶಿ ಮತ್ತು ಉದ್ಯಮ ಸಹಯೋಗಗಳ ಮಾಹಿತಿ, ಆಂತರಿಕ ಗುಣಮಟ್ಟದ ಭರವಸೆ ಘಟಕ, ಆಂತರಿಕ ದೂರು ಸಮಿತಿ, ಸಹಾಯವಾಣಿ ಸಂಖ್ಯೆಯೊಂದಿಗೆ ರ್ಯಾಗಿಂಗ್‌ ವಿರೋಧಿ ಘಟಕ ಮತ್ತು ಸಮಾನ ಅವಕಾಶ ಘಟಕದ ಕುರಿತ ಮಾಹಿತಿಯನ್ನು ಕೂಡ ವೆಬ್‌ಸೈಟ್‌ಗಳಲ್ಲಿ ವಿಶ್ವವಿದ್ಯಾಲಯಗಳು ಒದಗಿಸಬೇಕು ಎಂದು ಯುಜಿಸಿ ಸೂಚಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next