Advertisement

ಫೆಡರರ್‌ ಮರಳಿ ನಂ.1; ಅಗ್ರಸ್ಥಾನಕ್ಕೆ ನೆಗೆದ ಅತೀ ಹಿರಿಯ ಟೆನಿಸಿಗ!

06:40 AM Feb 18, 2018 | Team Udayavani |

ರೋಟರ್‌ಡ್ಯಾಮ್‌ (ಹಾಲೆಂಡ್‌): ಸ್ವಿಜರ್‌ಲ್ಯಾಂಡಿನ ಟೆನಿಸ್‌ ಕಿಂಗ್‌ ರೋಜರ್‌ ಫೆಡರರ್‌ 5 ವರ್ಷಗಳ ಬಳಿಕ ಮರಳಿ ವಿಶ್ವದ ನಂಬರ್‌ ವನ್‌ ಟೆನಿಸಿಗನಾಗಿ ಮೂಡಿಬಂದಿದ್ದಾರೆ. ಇದಕ್ಕಿಂತ ಮಿಗಿಲಾದ ಸಂಗತಿಯೆಂದರೆ, ಅವರು ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟ ವಿಶ್ವದ ಅತೀ ಹಿರಿಯ ಟೆನಿಸಿಗ ಎಂಬುದು. “ಫ್ರೆಡ್ಡಿ’ಗೆ ಈಗ 36ರ ಹರೆಯ!

Advertisement

ಇಲ್ಲಿ ನಡೆಯುತ್ತಿರುವ ಎಬಿಎನ್‌ ಅನ್ರೊ ವರ್ಲ್ಡ್ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ತವರಿನ ರಾಬಿನ್‌ ಹಾಸ್‌ ಅವರನ್ನು 4-6, 6-1, 6-1 ಅಂತರದಿಂದ ಮಣಿಸುವ ಮೂಲಕ ಫೆಡರರ್‌ ವಿಶ್ವದ ನಂ.1 ಟೆನಿಸಿಗನೆನಿಸಿದರು. ಈವರೆಗೆ ಆಂದ್ರೆ ಅಗಾಸ್ಸಿ 33ರ ಹರೆಯದಲ್ಲಿ ನಂ.1 ಎನಿಸಿದ್ದು ದಾಖಲೆಯಾಗಿತ್ತು. “ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. 37ರ ಹರೆಯದ ಹೊಸ್ತಿಲಲ್ಲಿ ನಾನು ನಂ.1 ಆಗಿದ್ದೇನೆ. ಈ ಕ್ಷಣವನ್ನು ಆನಂದಿಸುತ್ತೇನೆ’ ಎಂದು ಫೆಡರರ್‌ ಹೇಳಿದ್ದಾರೆ. 

ಸೋಮವಾರ ಅಧಿಕೃತ ರ್‍ಯಾಂಕಿಂಗ್‌ ಬಿಡುಗಡೆಯಾಗಲಿದ್ದು, ರಫೆಲ್‌ ನಡಾಲ್‌ ಅವರನ್ನು ಕೆಳಕ್ಕಿಳಿಸುವ ಮೂಲಕ ಫೆಡರರ್‌ ನಂ.1 ಸ್ಥಾನವನ್ನು ಅಲಂಕರಿಸುವರು.

ಫೆಡರರ್‌ 14 ವರ್ಷಗಳ ಹಿಂದೆ ಮೊದಲ ಸಲ ನಂ.1 ಟೆನಿಸಿಗನಾಗಿ ಮೂಡಿಬಂದಿದ್ದರು. ಸೋಮವಾರಕ್ಕೆ ಅವರು ತಮ್ಮ ನಂ.1 ದಾಖಲೆಯನ್ನು 302ನೇ ವಾರಕ್ಕೆ ವಿಸ್ತರಿಸಲಿದ್ದಾರೆ. ಈ ಸಾಧನೆಯಲ್ಲಿ ಪೀಟ್‌ ಸಾಂಪ್ರಾಸ್‌ ಅವರಿಗೆ ದ್ವಿತೀಯ ಸ್ಥಾನ (286 ವಾರ).

Advertisement

Udayavani is now on Telegram. Click here to join our channel and stay updated with the latest news.

Next