Advertisement

3 ವರ್ಷಗಳ ಬಳಿಕ ಫ್ರೆಂಚ್‌ ಓಪನ್‌ನಲ್ಲಿ ಫೆಡರರ್‌ ಆಟ

12:30 AM Jan 22, 2019 | |

ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಿಂದ ಶೀಘ್ರ ನಿರ್ಗಮನದ ಬಳಿಕ ಸ್ವಿಸ್‌ ತಾರೆ ರೋಜರ್‌ ಫೆಡರರ್‌ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಆಗ 3 ವರ್ಷಗಳ ವಿರಾಮದ ಬಳಿಕ ಅವರು “ರೊಲ್ಯಾಂಡ್‌ ಗ್ಯಾರೋಸ್‌’ನಲ್ಲಿ ಕಣಕ್ಕಿಳಿದಂತಾಗುತ್ತದೆ.

Advertisement

2009ರಲ್ಲಿ ಫ್ರೆಂಚ್‌ ಓಪನ್‌ ಪ್ರಶಸ್ತಿ ಜಯಿಸಿದ್ದ ಫೆಡರರ್‌ 2015ರ ಬಳಿಕ ಈ ಟೂರ್ನಿಯಲ್ಲಿ ಸ್ಪರ್ಧಿಸಲಿರಲಿಲ್ಲ. ಗಾಯದಿಂದಾಗಿ 2016ರ ಟೂರ್ನಿಯಿಂದ ಹಿಂದೆ ಸರಿದಿದ್ದ ಫೆಡರರ್‌, ಅನಂತರದ 2 ಟೂರ್ನಿಗಳಿಂದಲೂ ದೂರ ಉಳಿದಿದ್ದರು.

ಮೇ 26ರಿಂದ ಈ ಬಾರಿಯ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಆರಂಭಗೊಳ್ಳಿದೆ.

3 ಸ್ಥಾನ ನಷ್ಟ
ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯ ರವಿವಾರ ಪಂದ್ಯದಲ್ಲಿ ಫೆಡರರ್‌ ಗ್ರೀಕ್‌ನ ಸ್ಟೆಫ‌ನಸ್‌ ಸಿಸಿಪಸ್‌ ವಿರುದ್ದ ಪರಾಭವಗೊಂಡಿದ್ದರು. ಈ ಸೋಲಿನಿಂದಾಗಿ ಅವರು ನೂತನ ರ್‍ಯಾಂಕಿಂಗ್‌ನಲ್ಲಿ ಅಗ್ರ 5 ಆಟಗಾರರ ಪಟ್ಟಿಯಿಂದ ಹೊರಹೋಗಲಿದ್ದು, 6ನೇ ಸ್ಥಾನಕ್ಕೆ ಇಳಿಯಲಿದ್ದಾರೆ. ಸದ್ಯ 4ನೇ ಸ್ಥಾನದಲ್ಲಿರುವ ಅಲೆಕ್ಸಾಂಡರ್‌ ಜ್ವೆರೇವ್‌ 3ನೇ ಸ್ಥಾನಕ್ಕೇರಲಿದ್ದು, ಮಾರ್ಟಿನ್‌ ಡೆಲ್‌ ಪೆಟ್ರೊ 4ನೇ ಸ್ಥಾನ ಹಾಗೂ ಕೆವಿನ್‌ ಆ್ಯಂರ್ಡಸನ್‌ 5ನೇ ಸ್ಥಾನ ಪಡೆಯಲಿದ್ದಾರೆ.ಒಂದು ವೇಳೆ ಜಪಾನಿನ ಟೆನಿಸಿಗ ಕೀ ನಿಶಿಕೊರಿ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ ಪ್ರವೇಶಿಸಿದರೆ ಫೆಡರರ್‌ 7ನೇ ಸ್ಥಾನಕ್ಕಿಳಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next