Advertisement

ಫೆಡರರ್‌ ಫೇವರಿಟ್‌; ಸಿಲಿಕ್‌ಗೆ ಇದೆಯೇ ಲಕ್‌?

03:55 AM Jul 16, 2017 | Team Udayavani |

ಲಂಡನ್‌: ಸ್ವಿಟ್ಸರ್‌ಲ್ಯಾಂಡಿನ ರೋಜರ್‌ ಫೆಡರರ್‌ ಮತ್ತು ಕ್ರೊವೇಶಿಯಾದ ಮರಿನ್‌ ಸಿಲಿಕ್‌ 2017ರ ವಿಂಬಲ್ಡನ್‌ ಪುರುಷರ ಸಿಂಗಲ್ಸ್‌ ಪ್ರಶಸ್ತಿಗಾಗಿ ರವಿವಾರ ಸ್ಪರ್ಧೆಗಿಳಿಯ ಲಿದ್ದಾರೆ. ಟೆನಿಸ್‌ ಲೋಕದ ಹಿರಿಯಣ್ಣ, 18 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ವಿಜೇತ, 7 ಸಲ ವಿಂಬಲ್ಡನ್‌ ಕಿರೀಟ ಧರಿಸಿರುವ ಫೆಡರರ್‌ ಅವರೇ ಇಲ್ಲಿನ ಫೇವರಿಟ್‌ ಆಟಗಾರನಾಗಿರುವುದರಿಂದ ಸಿಲಿಕ್‌ಗೆ ಲಕ್‌ ಇದೆಯೇ ಎಂಬುದು ಫೈನಲ್‌ ಹಣಾಹಣಿಯ ದೊಡ್ಡ ಕುತೂಹಲ.

Advertisement

ಶುಕ್ರವಾರ ತಡರಾತ್ರಿ ನಡೆದ 2ನೇ ಸೆಮಿಫೈನಲ್‌ನಲ್ಲಿ 35ರ ಹರೆಯದ ರೋಜರ್‌ ಫೆಡರರ್‌ 11ನೇ ಶ್ರೇಯಾಂಕಿತ ಜೆಕ್‌ ಆಟಗಾರ ಥಾಮಸ್‌ ಬೆರ್ಡಿಶ್‌ ವಿರುದ್ಧ ಭಾರೀ ಹೋರಾಟ ಸಂಘಟಿಸಿ 7-6 (7-4), 7-6 (7-4), 6-4ರಿಂದ ಗೆದ್ದು ಬಂದರು. ಇವರಿಬ್ಬರ ಕಾಳಗ 2 ಗಂಟೆ, 18 ನಿಮಿಷಗಳ ತನಕ ಸಾಗಿತು. 

2010ರ ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಫೆಡರರ್‌ಗೆ ಸೋಲುಣಿಸಿದ್ದ ಬೆರ್ಡಿಶ್‌, ಈ ಬಾರಿಯೂ ಇಂಥದೇ ಫ‌ಲಿತಾಂಶವನ್ನು ಪುನರಾವರ್ತಿಸುವ ಸಾಧ್ಯತೆಯೊಂದು ಗೋಚ ರಿಸಿತ್ತು. ಬೆರ್ಡಿಶ್‌ ಮೊದಲೆರಡು ಸೆಟ್‌ಗಳನ್ನು ಟೈ-ಬ್ರೇಕರ್‌ಗೆ ವಿಸ್ತರಿಸಿದ್ದರು. ಆದರೆ ಫೆಡರರ್‌ ನಿರ್ಣಾಯಕ ಹಂತದಲ್ಲಿ ತಮ್ಮ ಅನುಭವವನ್ನೆಲ್ಲ ಬಳಸಿಕೊಂಡು ಜೆಕ್‌ ಆಟಗಾರನಿಗೆ “ಚೆಕ್‌ ಮೇಟ್‌’ ಮಾಡಿಸುವಲ್ಲಿ ಯಶಸ್ವಿಯಾದರು. 

8ನೇ ಪ್ರಶಸ್ತಿಯ ಸನಿಹದಲ್ಲಿ…
ಇದು ಫೆಡರರ್‌ ಕಾಣುತ್ತಿರುವ 11ನೇ ವಿಂಬಲ್ಡನ್‌ ಪ್ರಶಸ್ತಿ ಕಾಳಗ. ಹಿಂದಿನ 10 ಫೈನಲ್‌ಗ‌ಳಲ್ಲಿ 7 ಸಲ ಚಾಂಪಿಯನ್‌ ಆಗಿದ್ದ ಫೆಡರರ್‌, 3 ಸಲ ರನ್ನರ್ ಅಪ್‌ಗೆ ತೃಪ್ತರಾಗಿದ್ದರು. 2003ರಿಂದ ಸತತ 5 ವರ್ಷ ಕಾಲ ಫೆಡರರ್‌ ವಿಂಬಲ್ಡನ್‌ ರಾಜನಾಗಿ ಮೆರೆದಿದ್ದರು. ನಡುವೆ 2008ರಲ್ಲಿ ಬ್ರೇಕ್‌ ಬಿತ್ತು. 2009ರಲ್ಲಿ ಮತ್ತೆ ಪ್ರಶಸ್ತಿ ಎತ್ತಿದರು. ಕೊನೆಯ ಸಲ ಚಾಂಪಿಯನ್‌ ಎನಿಸಿದ್ದು 2012ರಲ್ಲಿ. 

ಈ ಬಾರಿ ಸ್ವಿಸ್‌ ತಾರೆ ವಿಶಿಷ್ಟ ದಾಖಲೆ
ಯೊಂದಕ್ಕೆ ಭಾಜನರಾಗಿದ್ದಾರೆ. 1974ರ ಬಳಿಕ ವಿಂಬಲ್ಡನ್‌ ಫೈನಲ್‌ ತಲುಪಿದ ಅತೀ ಹಿರಿಯ ಟೆನಿಸಿಗನಾಗಿದ್ದಾರೆ. ಅಂದು ಆಸ್ಟ್ರೇಲಿಯದ ಕೆನ್‌ ರೋಸ್‌ವಾಲ್‌ ವಿಂಬಲ್ಡನ್‌ ಫೈನಲ್‌ ಆಡುವಾಗ 39ರ ಹರೆಯದಲ್ಲಿದ್ದರು. ಫೈನಲ್‌ನಲ್ಲಿ ಅವರು ಅಮೆರಿಕದ ಜಿಮ್ಮಿ ಕಾನರ್ಗೆ ಶರಣಾದರು.

Advertisement

ರೋಜರ್‌ ಫೆಡರರ್‌ಗೆ ಇದು 29ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಆಗಿದ್ದು, 18ರಲ್ಲಿ ಚಾಂಪಿಯನ್‌ ಎನಿಸಿಕೊಂಡಿದ್ದಾರೆ. ಈ ಬಾರಿ ಅವರು ಒಂದೂ ಸೆಟ್‌ ಕಳೆದುಕೊಳ್ಳದೆ ಪ್ರಶಸ್ತಿ ಸುತ್ತಿಗೆ ಆಗಮಿಸಿದ್ದಾರೆ. ಇದು “ಆಲ್‌ ಇಂಗ್ಲೆಂಡ್‌ ಕ್ಲಬ್‌’
ನಲ್ಲಿ ಫೆಡರರ್‌ ದಾಖಲಿಸಿದ 90ನೇ ಗೆಲುವು. ಅಂದಹಾಗೆ ಸಿಲಿಕ್‌ ವಿರುದ್ಧ ಫೆಡರರ್‌ 6-1 ಗೆಲುವಿನ ದಾಖಲೆ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next