ಆಗ್ರ 11ರಲ್ಲಿ ನಾಲ್ವರ ಗೈರಿನೊಂದಿಗೆ ಈ ಬಾರಿಯ ಯುಎಸ್ ಓಪನ್ ಆರಂಭ ವಾಗಲಿದೆ. ಇದರಲ್ಲಿ ಹಾಲಿ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕ ಕೂಡ ಸೇರಿದ್ದಾರೆ. 2 ಬಾರಿಯ ಪ್ರಶಸ್ತಿ ವಿಜೇತ ನೊವಾಕ್ ಜೊಕೋವಿಕ್, 2014ರ ರನ್ನರ್ ಅಪ್ ಕೀ ನಿಶಿಕೊರಿ ಮತ್ತು ಅಪಾಯಕಾರಿ ಆಟಗಾರ ಮಿಲೋಸ್ ರಾನಿಕ್ ನ್ಯೂಯಾರ್ಕ್ ಸಮರದಿಂದ ದೂರ ಉಳಿದಿರುವ ಉಳಿದ ಆಟಗಾರರು.
Advertisement
2012ರ ಚಾಂಪಿಯನ್ ಆ್ಯಂಡಿ ಮರ್ರೆ ಹಾಗೂ 2014ರ ವಿಜೇತ ಮರಿನ್ ಸಿಲಿಕ್ ಇಲ್ಲಿ ಸೆಣಸುವರಾದರೂ ಇವರ ಫಿಟ್‌ನೆಸ್ ಚಿಂತೆಯ ಸಂಗತಿಯಾಗಿದೆ. ಆದರೆ ಫೆಡರರ್ ಮತ್ತು ನಡಾಲ್ ಇಂಥ ಯಾವುದೇ ಸಮಸ್ಯೆಗೆ ಸಿಲುಕಿಲ್ಲ. ಈ ವರ್ಷ ಆಸ್ಟ್ರೇಲಿಯನ್ ಓಪನ್ ಮತ್ತು ವಿಂಬಲ್ಡನ್ ಪ್ರಶಸ್ತಿ ಎತ್ತಿರುವ ರೋಜರ್ ಫೆಡರರ್ 2007ರ ಬಳಿಕ ಮೊದಲ ಬಾರಿಗೆ ಒಂದೇ ಋತುವಿನಲ್ಲಿ 3 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವತ್ತ ಹೊರಟಿದ್ದಾರೆ. ಆದರೆ, ಒಟ್ಟು 5 ಸಲ ಯುಎಸ್ ಓಪನ್ ಪ್ರಶಸ್ತಿ ಗೆದ್ದಿರುವ ಫೆಡರರ್‌ಗೆ 2008ರ ಬಳಿಕ “ನ್ಯೂಯಾರ್ಕ್ ಕ್ರೌನ್’ ಮರೀಚಿಕೆಯಾಗುತ್ತಲೇ ಇದೆ.
ಇನ್ನೊಂದೆಡೆ ನಡಾಲ್ ಹೆಸರಲ್ಲಿರುವುದು 2 ಯುಎಸ್ ಓಪನ್ ಪ್ರಶಸ್ತಿ ಮಾತ್ರ (2010 ಮತ್ತು 2013). ಈ ವರ್ಷ ಫ್ರೆಂಚ್ ಓಪನ್ ಕಿರೀಟವನ್ನು ಮರಳಿ ಧರಿಸಿದ್ದಾರೆ.