Advertisement
ಬುಧವಾರದ ಜಾವೆಲಿನ್ ಸ್ಪರ್ಧೆಯಲ್ಲಿ ಹರಿಯಾಣದ ನೀರಜ್ ಚೋಪ್ರಾ 82.27 ಮೀ. ಸಾಧನೆಯೊಂದಿಗೆ ಬಂಗಾರಕ್ಕೆ ಗುರಿ ಇರಿಸಿದರು. ಅವರ ಈ ಗರಿಷ್ಠ ದೂರ 4ನೇ ಸುತ್ತಿ ನಲ್ಲಿ ದಾಖಲಾಯಿತು. ಹೀಗಾಗಿ ಕೊನೆಯ ಸುತ್ತಿನಲ್ಲಿ ಸ್ಪರ್ಧಿಸಲಿಲ್ಲ. ರಾಜ್ಯದ ಡಿ.ಪಿ. ಮನು ಬೆಳ್ಳಿ ಪದಕ ಗೆದ್ದರು (82.06 ಮೀ.).ನೀರಜ್ ಚೋಪ್ರಾ 2021ರ ಮಾರ್ಚ್ 17ರಂದು ಕೊನೆಯ ಸಲ ದೇಶಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅದು ಕೂಡ ಫೆಡರೇಶನ್ ಕಪ್ ಪಂದ್ಯಾವಳಿಯೇ ಆಗಿತ್ತು. ಅಂದು 87.80 ಮೀ. ಸಾಧನೆಯೊಂದಿಗೆ ಚಿನ್ನದ ಪದಕ ಜಯಿಸಿದ್ದರು. ಅಂದಿನ ದೂರಕ್ಕೆ ಹೋಲಿಸಿದರೆ ಭುವನೇಶ್ವರ ಕೂಟದಲ್ಲಿ ನೀರಜ್ ಸಾಧನೆ ತೀರಾ ಸಾಮಾನ್ಯ ಎಂದೇ ಹೇಳಬೇಕು.
**
ಬಂಗಾರ ಗೆದ್ದ ಪೂವಮ್ಮ
ಮಹಿಳೆಯರ 100 ಮೀ. ಓಟದಲ್ಲಿ ರಾಜ್ಯದ ಎಸ್.ಎಸ್. ಸ್ನೇಹಾ, ಹೈಜಂಪ್ನಲ್ಲಿ ಅಭಿನಯಾ ಎಸ್. ಶೆಟ್ಟಿ ಮತ್ತು 400 ಮೀ. ಓಟದಲ್ಲಿ ಎಂ.ಆರ್. ಪೂವಮ್ಮ ಬಂಗಾರದ ಪದಕ ಗೆದ್ದಿದ್ದಾರೆ.