Advertisement

ಫೆಡರೇಷನ್‌ ಕಪ್‌ ಕಬಡ್ಡಿ: ಕರ್ನಾಟಕ ರನ್ನರ್‌ಅಪ್‌

06:45 AM Feb 15, 2018 | Team Udayavani |

ಮುಂಬೈ: ವಾಣಿಜ್ಯ ನಗರಿಯಲ್ಲಿ ನಡೆದ ಫೆಡರೇಷನ್‌ ಕಪ್‌ ಕಬಡ್ಡಿ ಕೂಟದಲ್ಲಿ ಕರ್ನಾಟಕ ತಂಡ ರೋಚಕ ಹಣಾಹಣಿಯಲ್ಲಿ ಸರ್ವಿಸಸ್‌ ವಿರುದ್ಧ ಸೋಲುಂಡಿತು. ರನ್ನರ್‌ಅಪ್‌ ಪ್ರಶಸ್ತಿಗೆ ಸಮಾಧಾನಪಟ್ಟುಕೊಂಡಿತು.

Advertisement

28 ವರ್ಷದ ಬಳಿಕ ರಾಜ್ಯ ತಂಡ ರನ್ನರ್‌ಅಪ್‌ ಪ್ರಶಸ್ತಿ ಪಡೆಯಿತು ಎನ್ನುವುದು ವಿಶೇಷ. ರೋಚಕವಾಗಿ ಸಾಗಿದ ಫೈನಲ್‌ನಲ್ಲಿ ರಾಜ್ಯ ತಂಡ ಮಿಂಚಿನ ಆಟ ಪ್ರದರ್ಶಿಸಿತು. ಆದರೆ 2 ಅಂಕಗಳ ಅಂತರದಿಂದ ಪರಾಭವಗೊಂಡು ತೀವ್ರ ನಿರಾಸೆ ಅನುಭವಿಸಿತು.

28 ವರ್ಷದ ಕನಸು ಭಗ್ನ: ಫೈನಲ್‌ಗೇರಿದ್ದ ರಾಜ್ಯ ತಂಡ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿತ್ತು. ಶಬ್ಬೀರ್‌ಬಾಪು ಕರ್ನಾಟಕ ತಂಡವನ್ನು ಮುನ್ನಡೆಸಿದ್ದರು. ಪ್ರೊಕಬಡ್ಡಿ ಸ್ಟಾರ್‌ ಆಟಗಾರರಾದ ಸುಕೇಶ್‌ ಹೆಗ್ಡೆ, ಪ್ರಶಾಂತ್‌ ರೈ ಹಾಗೂ ಜೆ.ದರ್ಶನ್‌ ತಂಡದ ಪರ ಅದ್ಭುತ ಪ್ರದರ್ಶನ ನೀಡಿದರು. ಅನುಭವಿ ಜೀವಾ ಕುಮಾರ್‌ ಕೂಡ ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ತಂಡಕ್ಕೆ ನೆರವಾದರು. ಆದರೆ ಕೊನೆಯ ಹಂತದಲ್ಲಿ ಎಸಗಿದ ಸ್ವಯಂಕೃತ ತಪ್ಪಿನಿಂದ ರಾಜ್ಯ ತಂಡ ಅಂಕ ಕಳೆದುಕೊಂಡಿತು. ಸೋಲಿಗೆ ಸುಳಿಗೆ ಸಿಲುಕಿತು. ಒಟ್ಟಾರೆ 28 ವರ್ಷದ ಬಳಿಕ ಕರ್ನಾಟಕ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿತು.

ಇತ್ತೀಚೆಗೆ ಕರ್ನಾಟಕ ತಂಡ ರಾಷ್ಟ್ರೀಯ ಕಬಡ್ಡಿ ಕೂಟದಲ್ಲಿ ಮಹಾರಾಷ್ಟ್ರ ವಿರುದ್ಧ ಸೆಮಿಫೈನಲ್‌ನಲ್ಲಿ ಸೋಲುಂಡಿತ್ತು. ಅದೇ ಮಹಾರಾಷ್ಟ್ರ ತಂಡವನ್ನು ರಾಜ್ಯ ಆಟಗಾರರು ಫೆಡರೇಷನ್‌ ಕಪ್‌ ಸೆಮಿಫೈನಲ್‌ನಲ್ಲಿ ಸೋಲಿಸಿ ಫೈನಲ್‌ಗೆ ಏರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next