ನವ ದೆಹಲಿ : ಆಹಾರ ಮತ್ತು ಇಂಧನದ ಬೆಲೆಗಳ ಹೆಚ್ಚಳದಿಂದಾಗಿ ಫೆಬ್ರವರಿ ತಿಂಗಳಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಚಿಲ್ಲರೆ ಹಣದುಬ್ಬರವು 5.03% ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸಿವೆ.
ಜನವರಿಯಲ್ಲಿ ಚಿಲ್ಲರೆ ಹಣದುಬ್ಬರವು 4.06% ರಷ್ಟಿತ್ತು.
ಓದಿ : ಅತ್ಯಾಚಾರಕ್ಕೆ ಸಹಕರಿಸದ 4 ವರ್ಷದ ಬಾಲಕಿಯನ್ನು ಕತ್ತು ಸೀಳಿ ಕೊಂದ ದುರುಳ!
ಫೆಬ್ರವರಿಯಲ್ಲಿ ಆಹಾರ ಹಣದುಬ್ಬರವು 3.87% ಕ್ಕೆ ಏರಿದೆ, ಇದು ಜನವರಿಯಲ್ಲಿ 1.96% ಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಾಗಿದೆ ಎಂದು ಅಂಕಿ ಅಂಶ ತಿಳಿಸಿದೆ.
ಏತನ್ಮಧ್ಯೆ, ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಜನವರಿಯಲ್ಲಿ 1.6% ನಷ್ಟು ಸಂಕುಚಿತಗೊಂಡಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ಮತ್ತೊಂದು ದತ್ತಾಂಶವು ತೋರಿಸಿದೆ.
ಇನ್ನು, ಉತ್ಪಾದನಾ ವಲಯದಲ್ಲಿ ಉತ್ಪಾದನೆಯ ಮಟ್ಟ ಜನವರಿಯಲ್ಲಿ 2% ರಷ್ಟು ಕುಗ್ಗಿದರೆ, ಗಣಿಗಾರಿಕೆ ಉತ್ಪಾದನೆಯು 3.7% ರಷ್ಟು ಕುಸಿದಿದೆ. ಏತನ್ಮಧ್ಯೆ, ಜನವರಿಯಲ್ಲಿ ವಿದ್ಯುತ್ ಉತ್ಪಾದನೆಯು 5.5% ರಷ್ಟು ಹೆಚ್ಚಾಗಿದೆ ಎಂದು ಸೂಚಿಸಿದೆ.
ಓದಿ : ವೆಜ್ ಪಿಜ್ಜಾ ಬದಲು ನಾನ್-ವೆಜ್ ಪಿಜ್ಜಾ: 1 ಕೋಟಿ ರೂ. ಪರಿಹಾರಕ್ಕೆ ಮೊರೆ!