Advertisement

ಫೆ. 4ಕ್ಕೆ ಪ್ರಿಯಾಂಕಾ ರಾಜಕೀಯಕ್ಕೆ ಪ್ರವೇಶ

02:28 AM Jan 27, 2019 | Team Udayavani |

ಹೊಸದಿಲ್ಲಿ: ಗಾಂಧಿ-ನೆಹರೂ ಕುಟುಂಬದ ಕುಡಿ ಪ್ರಿಯಾಂಕಾ ವಾದ್ರಾ ಅವರು ಫೆ.4ರಂದು ಕುಂಭಮೇಳಕ್ಕೆ ತೆರಳಿ ಗಂಗೆಯಲ್ಲಿ ಪುಣ್ಯಸ್ನಾನ ಮಾಡುವ ಮೂಲಕ ಅಧಿಕೃತವಾಗಿ ತಮ್ಮ ರಾಜಕೀಯ ಪಯಣ ಆರಂಭಿಸಲಿದ್ದಾರೆ.

Advertisement

ಪ್ರಿಯಾಂಕಾ ಜತೆಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರೂ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭೇಟಿ ನೀಡಲಿದ್ದಾರೆ. ಇಬ್ಬರೂ ಶಾಹಿ ಸ್ನಾನದಲ್ಲಿ ಪಾಲ್ಗೊಂಡು, ಅನಂತರ ಉತ್ತರಪ್ರದೇಶ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಪ್ರಿಯಾಂಕಾ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ, ಫೆ.4ರಂದು ಪುಣ್ಯಸ್ನಾನ ಮಾಡಲು ಅವಕಾಶ ದೊರೆಯದಿದ್ದರೆ. ಫೆ.10ರಂದು ವಸಂತ ಪಂಚಮಿ ಹಿನ್ನೆಲೆಯಲ್ಲಿ ನಡೆಯುವ 3ನೇ ಶಾಹಿ ಸ್ನಾನದಲ್ಲಿ ಅವರು ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next