Advertisement

ಫೆ.26: ಬಿಜೆಪಿಯಿಂದ ಕಮಲ ಜ್ಯೋತಿ ಸಂಕಲ್ಪ ಕಾರ್ಯಕ್ರಮ

12:30 AM Feb 22, 2019 | |

ಮಂಗಳೂರು: ಬಿಜೆಪಿ ವತಿಯಿಂದ ಕಮಲ ಜ್ಯೋತಿ ಸಂಕಲ್ಪ ಕಾರ್ಯಕ್ರಮ ಫೆ.26ರಂದು ಸಂಜೆ 7 ಗಂಟೆಗೆ ಏಕಕಾಲದಲ್ಲಿ ದೇಶಾದ್ಯಂತ ನಡೆಯಲಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಕೇಂದ್ರದ ಯೋಜನೆಗಳ ಫಲಾನುಭವಿಗಳು ಪ್ರತಿ ಬೂತ್‌ನಲ್ಲಿ ದೀಪೋತ್ಸವ  ಆಚರಿಸಲಿದ್ದಾರೆ ಎಂದು ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ ತಿಳಿಸಿದ್ದಾರೆ. 

Advertisement

ಗುರುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.28ರಂದು ಪ್ರಧಾನಿ ಜತೆ  ಬೂತ್‌ ಕಾರ್ಯಕರ್ತರೊಂದಿಗೆ ಸಂಘಟನ ಸಂವಾದ ಕಾಯಕ್ರಮವಿದೆ. ಫೆ. 28ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ 1ಸಾವಿರ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಮಾ.2ರಂದು ಬಿಜೆಪಿ ಕಾರ್ಯಕರ್ತರು ವಿಜಯ ಸಂಕಲ್ಪ ಮೋಟಾರ್‌ ಬೈಕ್‌ ರ್ಯಾಲಿ ನಡೆಸಲಿದ್ದಾರೆ ಎಂದು ವಿವರಿಸಿದರು.

ಈಗಾಗಲೇ ಫೆ. 12ರಿಂದ ಮಾ. 2ರ ವರೆಗೆ “ನನ್ನ ಪರಿವಾರ- ಬಿಜೆಪಿ ಪರಿವಾರ’ ಅಭಿಯಾನ ವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 5 ಕೋಟಿ ಕಾರ್ಯಕರ್ತರು ಮನೆಯ ಮೇಲೆ ಬಿಜೆಪಿ ಧ್ವಜವನ್ನು ಹಾರಿಸಲಿ ದ್ದಾರೆ. ಹೀಗೆ ಹಾರಿಸಲಾದ ಧ್ವಜ ದೊಂದಿಗೆ ತಮ್ಮ ಸೆಲ್ಫಿ ತೆಗೆದು ಅದನ್ನು “ಮೆರಾ ಪರಿವಾರ್‌ ಭಾಜಪ ಪರಿವಾರ್‌’ ಹ್ಯಾಶ್‌ ಟ್ಯಾಗ್‌ನೊಂದಿಗೆ ಟ್ವೀಟ್‌ ಹಾಗೂ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಲಿದ್ದಾರೆ. ಫೆ.24ರಂದು ರಾಜ್ಯದ 75 ಲಕ್ಷ ಮನೆಗಳ ಸಂಪರ್ಕ ಮಾಡಲಾಗುವುದು ಎಂದರು.

ಸಂಸದ ನಳಿನ್‌ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿರುವ ಮಾಜಿ ಶಾಸಕ ಜೆ.ಆರ್‌. ಲೋಬೊ, ತಾವು ಶಾಸಕರಾಗಿದ್ದಾಗ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಜನತೆಯ ಮುಂದಿಡಲಿ ಎಂದು ಜಿತೇಂದ್ರ ಆಗ್ರಹಿಸಿದರು.ಪಾಲಿಕೆ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಕಾರ್ಪೋರೇಟರ್‌ ಭಾಸ್ಕರಚಂದ್ರ ಶೆಟ್ಟಿ, ಸತೀಶ್‌ ಪ್ರಭು, ಸಂಜಯ ಪ್ರಭು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next