ಮೈಸೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಾಯಿಸಿ ಕೊಂಡಿರುವ ರೈತರಿಗೆ ಕೇಂದ್ರ ಸರ್ಕಾರದ ವತಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್ (ಬೆಳೆಸಾಲ) ವಿತರಿಸುತ್ತಿದ್ದು, ಫೆ.24ರ ಒಳಗೆ ತಮ್ಮ ವ್ಯಾಪ್ತಿಯ ಬ್ಯಾಂಕ್‌ಗಳಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ತಿಳಿಸಿದರು.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಫೆ.24ಕ್ಕೆ ಒಂದು ವರ್ಷ ಪೂರೈಸುತ್ತಿದೆ. ಈ ಸಂದರ್ಭ ದಲ್ಲಿ ಕೇಂದ್ರ ಸರ್ಕಾರ ಇದೇ ತಿಂಗಳ 24ರೊಳಗೆ ಒಂದು ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು (ಬೆಳೆಸಾಲ) ಈ ಯೋಜನೆಯ ಫಲಾನುಭವಿ ಗಳಿಗೆ ವಿತರಿಸಲು ಸರ್ಕಾರ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ. ಹೀಗಾಗಿ ಈ ಯೋಜನೆಯಿಂದ ಹೊರಗುಳಿದ ಮತ್ತು ಇನ್ನು ಹೆಸರು ನೋಂದಾಯಿಸಿಕೊಳ್ಳದ ರೈತರು ಫೆ.24ರೊಳಗೆ ಹೆಸರು ನೋಂದಾಯಿಸಿಕೊಂಡು ಯೋಜನೆಯ ಫಲವನ್ನು ಪಡೆಯಬಹುದಾಗಿದೆ ಎಂದರು.
ಈ ಯೋಜನೆಯಡಿ ದೇಶಾದ್ಯಂತ 9.22 ಕೋಟಿ ರೈತರು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 6.76 ಕೋಟಿ ಫಲಾನುಭವಿಗಳು ಕಿಸಾನ್ ಕ್ರೆಡಿಟ್ ಕಾರ್ಡ್ (ಬೆಳೆಸಾಲ) ಪಡೆದಿದ್ದು, 2.47 ಕೋಟಿ ಫಲಾನುಭವಿಗಳು ಇದರ ಲಾಭ ಪಡೆಯಲು ಬಾಕಿ ಇರುತ್ತಾರೆ. ಜಿಲ್ಲೆಯಲ್ಲಿ 2,04,099 ರೈತರು ಪಿಎಂ ಕಿಸಾನ ಯೋಜನೆಯಡಿಯಲ್ಲಿ ನೋಂದಣಿ ಮಾಡಿದ್ದಾರೆ. ಇದರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯದ ರೈತರು ತಮ್ಮ ಸೇವಾ ವಲಯದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಬೆಳೆಸಾಲ ಪಡೆಯ ಬಹುದು ಎಂದರು. ಲೀಡ್ ಬ್ಯಾಂಕ್ ಮ್ಯಾನೇಜರ್ ವೆಂಕಟಾಚಲಪತಿ ಮಾತನಾಡಿ, ದೇಶದ ಕೃಷಿಕರಿಗಾಗಿ ಕೃಷಿ ಹಾಗೂ ಇತರ ಉಪಕಸುಬುಗಳನ್ನು ನಡೆಸಲು ಅಗತ್ಯವಿರುವ ಸಾಲ ಪೂರೈಸಲು ಈ ಯೋಜನೆಯ ಉದ್ದೇಶವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ನೆರವಿನೊಂದಿಗೆ ಬಿಟ್ಟು ಹೋಗಿರುವ ರೈತರ ಹೆಸರು ನೋಂದಾಯಿಸುವ ಕೆಲಸ ಮಾಡಲಾಗುತ್ತಿದ್ದೆ. ಎಲ್ಲ ಸೇವಾವಲಯದ ಬ್ಯಾಂಕ್‌ಗಳು ಫೆ.24 ರವರೆಗೆ ಪ್ರತಿ ದಿನ ಎಷ್ಟು ಮಂದಿಯ ಹೆಸರು ನೋಂದಾಯಿಸಿ ಕೊಂಡಿದ್ದಾರೆ ಎಂಬ ವರದಿ ನೀಡ ಬೇಕು ಎಂದು ಸೂಚಿಸಲಾಗಿದೆ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಹಾಂತೇಶಪ್ಪ ಮಾತನಾಡಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿ ರೈತರಿಗೆ ಕೇಂದ್ರ ಸರ್ಕಾರ ನೀಡುವ 6 ಸಾವಿರ ರೂಗಳ ಎರಡು ಕಂತು (2 ಸಾವಿರದಂತೆ) ರಾಜ್ಯ ಸರ್ಕಾರ ನೀಡುವ 4 ಸಾವಿರ ರೂಗಳ ಒಂದು ಕಂತು (ಎರಡು ಸಾವಿರದಂತೆ) ಫಲಾನುಭವಿಗಳಿಗೆ ದೊರೆತಿದೆ ಎಂದು ಮಾಹಿತಿ ನೀಡಿದರು.
1,94,550 ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಮೊದಲ ಕಂತಿನ 2ಸಾವಿರ ರೂ., 1,85,881 ಫಲಾನು ಭವಿಗಳಿಗೆ ಎರಡನೇ ಕಂತಿನ 2ಸಾವಿರ ರೂ., 1,23,566 ಫಲಾನುಭವಿಗಳಿಗೆ ರಾಜ್ಯ ಸರ್ಕಾರದ ಮೊದಲ ಕಂತಿನ 2 ಸಾವಿರ ರೂ. ದೊರೆತಿದ್ದು, ಕೇಂದ್ರದ ಮೂರನೇ ಕಂತಿನ ಹಣ ಈಗ ಬರಲು ಶುರುವಾಗಿದ್ದು ಇದುವರೆ ವಿಗೂ 46 ಮಂದಿಗೆ ಬಂದಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಗಿರಿಧರ್, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಎಸ್.ಮಣಿಕಂಠನ್, ಕುಮಾರಸ್ವಾಮಿ ಇದ್ದರು.