Advertisement
ಇದೊಂದು ವೈದ್ಯ ಸಂಬಂಧಿ ಸಮಸ್ಯೆಯಾಗಿದೆ ಇದರಿಂದ ಆರ್ಥಿಕ ಮತ್ತು ಸಮಾಜದ ಮೇಲೆ ಪರಿಣಾಮ ಬೀಳಲಿದೆ. ಆದರೆ ಇದಕ್ಕಿಂತ ಮುಖ್ಯವಾಗಿ ಇದೊಂದು ವೈದ್ಯಕೀಯ ಸಮಸ್ಯೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಗ್ಯಾಸ್ಟ್ರೋಎಂಟರಾಲೋಜಿಸ್ಟ್ ಡಾ.ಸಾದ್ ನಿಯಾಝ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
Related Articles
Advertisement
ಪಾಕಿಸ್ತಾನದಲ್ಲಿ ಅಂದಾಜಿನ ಪ್ರಕಾರ 70 ಸಾವಿರ ಮಂದಿಗೆ ಕೋವಿಡ್ ಸೋಂಕು ತಗುಲಬಹುದು ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಶೇ.10ರಷ್ಟು ರೋಗಿಗಳು ಸೀರಿಯಸ್ ಆದರೂ ಕೂಡಾ ಅವರಿಗೆ ಆಸ್ಪತ್ರೆಯಲ್ಲಾಗಲಿ, ವೆಂಟಿಲೇಟರ್ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ಡಾ.ನಿಯಾಝ್ ತಿಳಿಸಿದ್ದಾರೆ.
ನಾವೀಗ ರೋಗಿಗಳಿಗೆ ಚಿಕಿತ್ಸೆ ನೀಡಲು ಆರಂಭಿಸಿದರೆ ನಾವು 35 ವರ್ಷದವರಿಗೆ ಅಥವಾ 55 ವರ್ಷದವರಿಗೆ ಆದ್ಯತೆ ಕೊಡಬೇಕಾ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಆದರೆ ನಾವು ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ರಂಜಾನ್ ತಿಂಗಳಲ್ಲಿ ಮಸೀದಿಗಳನ್ನು ತೆರೆಯುವುದು ಮತ್ತು ಸಾಮೂಹಿಕ ಪ್ರಾರ್ಥನೆ ನಡೆಸುವುದು ಅಪಾಯಕ್ಕೆ ಎಡೆಮಾಡಿಕೊಡಲಿದೆ ಎಂದು ಈಗಾಗಲೇ ವೈದ್ಯರು ಮಸೀದಿ ಮೌಲ್ವಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಪಾಕಿಸ್ತಾನದಲ್ಲಿ ಈಗಾಗಲೇ ಕೋವಿಡ್ 19 ವೈರಸ್ ನಿಂದ 200 ಮಂದಿ ಸಾವನ್ನಪ್ಪಿದ್ದು, 10,513 ಜನರು ಸೋಂಕು ಪೀಡಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.