Advertisement
ದೇಶದ ಒಟ್ಟಾರೆ ಸೋಂಕುಪೀಡಿತರ ಪೈಕಿ ಶೇ.80ರಷ್ಟು ಮಂದಿಗೆ ಕೋವಿಡ್-19 ರೋಗದ ಯಾವುದೇ ಲಕ್ಷಣ ಕಂಡುಬಂದಿಲ್ಲ ಎಂಬ ಮಾಹಿತಿ ಬಹಿರಂಗವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಸೋಂಕಿನ ಮೌನ ವಾಹಕರು ಎಂದು ಗುರುತಿಸಬಹುದಾದ ಇವರು ತಮಗರಿ ವಿಲ್ಲದಂತೆಯೇ ಇತರರಿಗೂ ಸೋಂಕು ಪ್ರಸಾರ ಮಾಡುತ್ತ ಸಾಗುತ್ತಿರುವರೇ ಎಂಬ ಆತಂಕವನ್ನು ಇತ್ತೀಚೆಗೆ ಕೆಲವು ತಜ್ಞರು ವ್ಯಕ್ತಪಡಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮೃತಪಟ್ಟ ಮಹಿಳೆಯ ಸಹಿತ ಹಲವು ಪ್ರಕರಣಗಳ ಬಳಿಕ ಈಗ ಅದು ನಿಜವಾಗಿರುವಂತೆ ತೋರುತ್ತಿದೆ. ಈಕೆಯ 23 ವರ್ಷದ ಪುತ್ರ ವಿದೇಶದಿಂದ ಬಂದವರಾಗಿದ್ದರೂ ಅವರಿಗೆ ರೋಗಲಕ್ಷಣ ಕಂಡುಬಂದಿಲ್ಲ. ಉಪ್ಪಿನಂಗಡಿ ಪ್ರಕರಣದಲ್ಲಿಯೂ ದಿಲ್ಲಿ ಪ್ರವಾಸ ಕೈಗೊಂಡಿದ್ದ ಮಧ್ಯವಯಸ್ಕ ವಕೀಲರಿಗೆ ಆರಂಭಿಕ ಪರೀಕ್ಷೆಯಲ್ಲಿ ಕೋವಿಡ್-19 ನೆಗೆಟಿವ್ ಆಗಿತ್ತು.
ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ| ಸಿ.ನಾಗರಾಜ್ ಪ್ರಕಾರ, ಉತ್ತಮ ರೋಗ ನಿರೋಧಕ ಶಕ್ತಿ ಇರುವ ಯುವ ಜನರಲ್ಲಿ ಹೆಚ್ಚಾಗಿ ಕೋವಿಡ್-19 ಸೋಂಕಿನ ಲಕ್ಷಣ ಕಂಡುಬರುವುದಿಲ್ಲ. ಅಲ್ಲದೆ, ಲಕ್ಷಣ ರಹಿತ ರೋಗಿಗಳು ಬಹುತೇಕ 20ರಿಂದ 45ರೊಳಗಿನ ವಯೋಮಾನದವರಾಗಿರುತ್ತಾರೆ. ಕೆಲವರು ಇದಕ್ಕಿಂತ ಹೆಚ್ಚು ವಯಸ್ಕರಾಗಿದ್ದರೂ ಕೆಲವು ನಿರ್ದಿಷ್ಟ ಔಷಧಗಳನ್ನು ಸೇವಿಸುವವರಾಗಿದ್ದರೆ, ಅಂಥ ವರಲ್ಲೂ ರೋಗ ಲಕ್ಷಣ ಕಂಡುಬಾರದು.
Related Articles
ಮಹಾರಾಷ್ಟ್ರದಲ್ಲಿ 53 ಪತ್ರಕರ್ತರಿಗೆ ಸೋಂಕು ತಗಲಿದೆ. ವಿಚಿತ್ರವೆಂದರೆ,ಇವರಲ್ಲಿ ಯಾರಿಗೂ ರೋಗ ಲಕ್ಷಣ ಕಾಣಿ ಸಿರಲಿಲ್ಲ.ದಿಢೀರನೇ ಪರೀಕ್ಷೆ ನಡೆಸಿದಾಗ ಇದು ಬಯ ಲಾಗಿದೆ. ಇದೂ ಆತಂಕಕ್ಕೆ ಕಾರಣವಾಗಿದೆ.
Advertisement