Advertisement
ಶಾಲೆಗೆ ವ್ಯವಸ್ಥೆಸಂತ್ರಸ್ತ ಕೇಂದ್ರದಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುಮಾರು 90 ಮಕ್ಕಳನ್ನು ಆಸುಪಾಸಿನ ಶಾಲೆ ಗಳಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಪಯಸ್ವಿನಿಯಲ್ಲಿ ಕೆಸರು ಮಿಶ್ರಿತ ನೀರಿನಿಂದಾಗಿ ನಗರದ ಜನರಿಗೆ ಕುಡಿಯುವ ನೀರಿನ ತತ್ವಾರ ಉಂಟಾಗಿದೆ. ಪಂಪ್‌ಹೌಸ್‌ನಿಂದ ತಾತ್ಕಾಲಿಕವಾಗಿ ನೀರು ಪೂರೈಕೆ ಸ್ಥಗಿತಗೊಳಿಸಿದ್ದರೂ ನದಿ ನೀರನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಜನರ ಮುಂದಿದೆ. ಜನರ ಆರೋಗ್ಯದ ಮೇಲೆ ಪರಿ ಣಾಮ ಬೀರುವ ಹಿನ್ನೆಲೆಯಲ್ಲಿ ನ.ಪಂ. ವತಿಯಿಂದ ಧ್ವನಿವರ್ಧಕ ಬಳಸಿ ಕುದಿಸಿ ಆರಿಸಿದ ನೀರನ್ನು ಬಳಸುವಂತೆ ಸೂಚನೆ ನೀಡಲಾಗಿದೆ. ನೀರು ಶುದ್ಧೀಕರಣದ ಘಟಕವೂ ನಿರೀಕ್ಷೆಯಂತೆ ಕಾರ್ಯ ನಿರ್ವಹಿಸದ ಕಾರಣ ಪಯಸ್ವಿನಿ ತಾನಾಗಿ ತಿಳಿಯಾಗುವ ತನಕ ಕಾಯ ಬೇಕಿದೆ. ಅಲ್ಲಿಯ ತನಕ ಟ್ಯಾಂಕರ್, ಕೊಳವೆಬಾವಿ ಮೂಲಕ ನೀರು ಪೂರೈಸುವ ಭರವಸೆ ನೀಡಲಾಗಿದೆ. ಬಿರುಸಿನ ಮಳೆ ಸೂಚನೆ?
ಮುಂದಿನ ಎರಡು ದಿನಗಳಲ್ಲಿ ಕೊಡಗು ಮತ್ತು ಕರಾವಳಿ ಭಾಗದಲ್ಲಿ ಮತ್ತೆ ಬಿರುಸಿನ ಮಳೆ ಆಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತು ವಾರಿ ಇಲಾಖೆ ನಿರ್ದೇಶಕರು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಮನೆಗೆ ಮರಳಿರುವ ಕುಟುಂಬಗಳಿಗೆ ಆತಂಕ ಕಾಡಿದೆ. ಅಳಿದು ಉಳಿದ ಮನೆ ದುರಸ್ತಿ ಕಾಯಕ ದಲ್ಲಿ ತೊಡಗಿರುವ ಕುಟುಂಬಕ್ಕೆ ಮತ್ತೆ ಸಂತ್ರಸ್ತ ಕೇಂದ್ರ ಸೇರುವ ಭೀತಿ ಇದೆ. ಈಗಷ್ಟೇ ಶಾಲಾ ಕಾಲೇಜು ಪುನರಾರಂಭಗೊಂಡಿದ್ದು, ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
Related Articles
ಪರಿಹಾರ ಮೊತ್ತ ವಿತರಣೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತದೆ ಎಂದು ಆರೋಪಿಸಿ ಶುಕ್ರವಾರ ಅಧಿಕಾರಿಗಳು ಮತ್ತು ಸಂತ್ರಸ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಹಾರ ಕೇಂದ್ರದಲ್ಲಿ ಹೆಸರು ನೋಂದಾಯಿಸಿ, ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದ ಕುಟುಂಬಗಳಿಗೆ ದಿನಸಿ ಸಾಮಗ್ರಿ ಮಾತ್ರ ನೀಡಲಾಗಿದ್ದು, ಅವರು ಕೂಡ ಪರಿಹಾರಧನದ ಬೇಡಿಕೆ ಇರಿಸಿದ್ದರು. ಕೇಂದ್ರದಲ್ಲಿ ವಾಸ ಇರುವ ಕುಟುಂಬಗಳಿಗೆ ಮಾತ್ರ ಪರಿಹಾರ ಮೊತ್ತ ಪಾವತಿಸಲು ಸೂಚನೆ ಇರುವ ಕಾರಣ ಅಧಿಕಾರಿಗಳು ನೀಡಲು ಒಪ್ಪಲಿಲ್ಲ. ಮೇಲಧಿಕಾರಿಗಳಿಂದ ಸೂಚನೆ ಬಂದ ಬಳಿಕ ಉಳಿದವರಿಗೂ ಪಾವತಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
Advertisement