ಇಂಡಿ: ಕುರಿಗಳಿಗೆ ಪಿಪಿಆರ್ ರೋಗ ಆವರಿಸುತ್ತಿದೆ. ಈ ರೋಗ ಬಂದಲ್ಲಿ ಆಡುಗಳು ಮೇವು ತಿನ್ನುವುದು ಕಡಿಮೆ ಮಾಡಿ, ನೆಗಡಿ, ಜ್ವರ, ಭೇದಿ ಮತ್ತು ಇತರೆ ಲಕ್ಷಣಗಳು ಕಾಣಿಸುತ್ತವೆ. ರೋಗದ ಬಗ್ಗೆ ನಿರ್ಲಕ್ಷ ಮಾಡದೆ ಪಶು ವೈದ್ಯರನ್ನು ಸಂಪರ್ಕಿಸಿ ಎಂದು ಪಶು ವಿಜ್ಞಾನಿ ಡಾ| ಸಂತೋಷ ಶಿಂಧೆ ತಿಳಿಸಿದರು.
ಶನಿವಾರ ತಾಲೂಕಿನ ಝಳಕಿ, ಲೋಣಿ ಹಾಗೂ ತದ್ದೆವಾಡಿ ಗ್ರಾಮದ ಆಡು ಸಾಕಾಣಿಕೆ ಮಾಡುತ್ತಿರುವ ರೈತರ ಜಮೀನುಗಳಿಗೆ ಭೇಟಿ ನೀಡಿ ಇದರ ಪರಿಶೀಲನೆ ಮಾಡಿ ರೈತರಿಗೆ ಅವರು ತಿಳಿವಳಿಕೆ ಹೇಳಿದರು. ಪಿಪಿಆರ್ ರೋಗ ಪ್ಯಾರಮಿಕೊÕ ಗುಂಪಿಗೆ ಸೇರಿದ ಮಾರಿºಲಿ ಎಂಬ ವೈರಾಣುದಿಂದ ಕುರಿ ಮತ್ತು ಮೇಕೆಗಳಲ್ಲಿ ರೋಗ ಬರುತ್ತದೆ. ಈ ರೋಗಕ್ಕೆ ಆಡುಗಳ ಪ್ಲೇಗ್ ಎಂದು ಕರೆಯುತ್ತಾರೆ.
ರೋಗ ಬಂದ ಹಿಂಡಿನಲ್ಲಿ ಶೇ. 100 ಆಡುಗಳು ಅಥವಾ ಕುರಿಗಳು ರೋಗಕ್ಕೆ ತುತ್ತಾಗುತ್ತವೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನಿಡದಿದ್ದರೆ ಶೇ. 90 ಆಡುಗಳು ಅಥವಾ ಕುರಿಗಳು ಸಾವನ್ನುಪ್ಪತ್ತವೆ. ಈರೋಗಕ್ಕೆಕಡಿಮೆ(ಒಂದುವರ್ಷದೊಳಗೆ) ವಯಸ್ಸಿನ ಆಡು ಅಥವಾ ಕುರಿಗಳು ಹೆಚ್ಚಾಗಿ ತುತ್ತಾಗುತ್ತವೆ. ವೈರಾಣು ರೋಗಗ್ರಸ್ತ ಕುರಿಯ ಸಿಂಬಳ, ಮಲ ಮತ್ತು ಕಣ್ಣಿನ ಕೀವು ಮಿಶ್ರಿತ ಪಿಸಿರಿನಲ್ಲಿದ್ದು ಕಲುಷಿತಗೊಂಡ ನೀರು ಅಥವಾ ಮೇವಿನ ಮೂಲಕ ಹರಡುತ್ತದೆ. ಈ ವೈರಾಣು ಗಾಳಿ ಮೂಲಕ ಆರೋಗ್ಯವಂತ ಕುರಿಗಳಿಗೂ ಬರುವ ಸಾಧ್ಯತೆ ಇದೆ.
ಜೊತೆಯಲ್ಲಿ ಬೇರೆ ಪ್ರದೇಶದಿಂದ ಖರೀದಿ ಮಾಡಿ ಸಾಕುತ್ತಿರುವ ಹಿಂಡಿನಲ್ಲಿ ಈ ರೋಗ ಹೆಚ್ಚಾಗಿ ಕಾಣಬಹುದಾಗಿದೆ ಎಂದರು. ರೋಗದ ಲಕ್ಷಣಗಳು: ತೀವ್ರ ಜ್ವರ, ಮೊದಲು ನೀರಿನಂತರ ಸಿಂಬಳ ಬರುವುದು, ನಂತರ ಕಣ್ಣುಗಳಿಂದ ಮತ್ತು ಹೊಳ್ಳೆಗಳಿಂದ ಹಳದಿ ಕೀವು ಮಿಶ್ರಿತ ದ್ರವ ಹೊರಬರುತ್ತದೆ. ಈ ರೋಗದಲ್ಲಿ ಭೇದಿ (ದುರ್ವಾಸನೆ) ಕಾಣಬಹುದು. ರೋಗ ಕಾಣಿಸಿಕೊಂಡ 3-4 ನಾಲ್ಕು ದಿನಗಳಲ್ಲಿ ತುಟಿ, ವಸಡು, ದವಡೆ ಮತ್ತು ನಾಲಿಗೆ ಮೇಲೆ ಹುಣ್ಣುಗಳು ಕಾಣಿಸಿಕೊಂಡು, ನಂತರ ಕೊಳೆತು ಮೇಲ್ಪದರವು ಉದುರಿ ಹೋಗುವಂತಾಗುತ್ತದೆ.
ಉಸಿರಾಟದ ತೊಂದರೆ ಮತ್ತು ನಿರ್ಜಲೀಕರಣದಿಂದಾಗಿ ಕುರಿಗಳು ನಿತ್ರಾಣಗೊಂಡು5-10ದಿನದಲ್ಲಿಸಾವನ್ನಪ್ಪುತ್ತವೆ. ಗರ್ಭ ಧರಿಸಿದ ಕುರಿ ಮತ್ತು ಮೇಕೆಗಳು ಕಂದು ಹಾಕಬಹುದು.
ರೋಗನಿಯಂತ್ರಣ-ನಿರ್ವಹಣೆ: ರೋಗಪೀಡಿತ ಕುರಿ, ಆಡುಗಳನ್ನು ಕೂಡಲೆ ಹಿಂಡಿನಿಂದ ಬೇರ್ಪಡಿಸಿ ಪ್ರತ್ಯೇಕವಾಗಿಟ್ಟು ಉಪಚರಿಸಬೇಕು. ಕುರಿ ಅಥವಾ ಆಡುಗಳ ಮನೆಯಲ್ಲಿ ಸ್ವತ್ಛತೆ ಕಾಪಾಡಬೇಕು.
ಆಡುಗಳ ಮನೆಯನ್ನು ಫಿನೈಲ್ ಅಥವಾ ಶೇ. 5 ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಬೇಕು, ರೋಗಗ್ರಸ್ತ ಆಡುಗಳಿಗೆ ರೋಗ ಬರದಂತೆ ತಡೆಯಲು 3 ವರ್ಷಕ್ಕೊಮ್ಮೆ ಲಸಿಕೆಯನ್ನು ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ 4-6 ತಿಂಗಳ ಮೇಲ್ಪಟ್ಟ ಕುರಿ ಅಥವಾ ಆಡುಗಳಿಗೆ ತಪ್ಪದೆ ಹಾಕಿಸಬೇಕು. ಈ ತರಹದ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಪಶು ಆಸ್ಪತ್ರೆ ಭೇಟಿ ನೀಡಿ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಮಾಹಿತಿಗಾಗಿ ಡಾ| ಸಂತೋಷ ಶಿಂಧೆ (8791107090) ಅವರನ್ನು ಸಂಪರ್ಕಿಸಬಹುದು.