ಸವಣೂರು: ಕೆಲತಿಂಗಳ ಹಿಂದೆ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಪ್ರದೇಶದಲ್ಲಿ ಹಾಗೂ ಪಾಲ್ತಾಡಿ ಗ್ರಾಮದ ಬಂಬಿಲ ಪ್ರದೇಶದಲ್ಲಿ ಚಿರತೆ ಸಂಚಾರದ ಬಗ್ಗೆ ಸುದ್ದಿಯಾಗಿತ್ತು. ಸೋಮವಾರವೂ ಪುತ್ತೂರು ತಾಲೂಕಿನ ಸರ್ವೆ, ಎಲಿಯ ಪ್ರದೇಶದಲ್ಲೂ ಜನರಿಗೆ ಕಾಣ ಸಿಕ್ಕ ಚಿರತೆ ಇದೀಗ ಈ ಪ್ರದೇಶದಲ್ಲಿ ಮತ್ತೆ ಕಂಡುಬಂದಿದೆ.
ಡಿ.27 ರಂದು ರಾತ್ರಿ ಚುನಾವಣಾ ಕಾರ್ಯ ಮುಗಿದ ಬಳಿಕ ಪಕ್ಷವೊಂದರ ಕಾರ್ಯಕರ್ತರು ಮನೆಗೆ ಹೋಗುವ ಸಮಯದಲ್ಲಿ ಸುಮಾರು 9.30 ರ ವೇಳೆಗೆ ಬಂಬಿಲ ನಾಡೋಳಿ ಸೇತುವೆ ಬಳಿ ಕಾಣಸಿಕ್ಕಿದೆ. ಡಿ.28ರಂದು ಬೆಳಿಗ್ಗೆ ಸುಮಾರು 5.30 ರ ವೇಳೆಗೆ ಬಂಬಿಲ ಆದಿಮೊಗೇರ್ಕಳ ದೈವಸ್ಥಾನದ ಬಳಿಯ ಮುಖ್ಯ ರಸ್ತೆಯಲ್ಲಿ ವಾಕಿಂಗ್ ಹೋಗುವವರಿಗೆ ಕಾಣಸಿಕ್ಕಿದೆ.
ಇದನ್ನೂ ಓದಿ:ಸರಪನಹಳ್ಳಿ ಗ್ರಾ.ಪಂಚಾಯತಿಯಿಂದ ಉಪ ಸಭಾಪತಿಯವರೆಗೆ.. ಎಸ್.ಎಲ್. ಧರ್ಮೇಗೌಡ ರಾಜಕೀಯ ಹಾದಿ
ಅಲ್ಲದೆ ಡಿ.28ರಂದು ರಾತ್ರಿ ವೇಳೆ ಚೆನ್ನಾವರ ಉಳ್ಳಾಕುಲು ದೈವಸ್ಥಾನದ ಬಳಿ ಚಿರತೆ ಹಲವರಿಗೆ ಕಾಣಸಿಕ್ಕಿದೆ. ನೆಲ್ಯಾಜೆ ವಿಶ್ವನಾಥ ರೈ ಅವರ ಮನೆಯ ಮುಂದೆ ಇದ್ದ ಕೋಳಿಯನ್ನು ಹಿಡಿದು ತಿಂದಿದೆ. ಬಳಿಕ ಮನೆಯ ಒಳಗಿನಿಂದ ಗರ್ನಲ್ ಸಿಡಿಸಿದಾಗ ಓಡಿಹೋಗಿದೆ.
ಕೂಡಲೇ ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿಯುವಲ್ಲಿ ಕಾರ್ಯಾಚರಣೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.