Advertisement

ದೊಡ್ಡ ಮೊತ್ತದ ನೋಟು ಕಂಡರೆ ಭಯ!

03:06 PM Jul 19, 2017 | |

ಲಿಂಗಸುಗೂರು: ಪಟ್ಟಣ ಹಾಗೂ ತಾಲೂಕಿನಲ್ಲಿ ಇತ್ತೀಚೆಗೆ 2000 ರೂ. ಮುಖಬೆಲೆಯ ನಕಲಿ ನೋಟುಗಳ ಚಲಾವಣೆ ಹೆಚ್ಚಿದ್ದು, ಜನ ದೊಡ್ಡ ಮೊತ್ತದ ನೋಟು ಕಂಡರೆ ಸಂಶಯದಿಂದ ನೋಡುವಂತಾಗಿದೆ.

Advertisement

ನಕಲಿ ನೋಟುಗಳ ಹಾವಳಿಗೆ ಬ್ರೇಕ್‌ಹಾಕಲು ಕೇಂದ್ರ ಸರಕಾರ 2016ರ ನ. 8ರಂದು 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಚಲಾವಣೆ ನಿಷೇಧಿಸಿತ್ತು. ಆಮೇಲೆ 2000 ಹಾಗೂ 500 ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿದ್ದರೂ ನಕಲಿ ನೋಟುಗಳ ಹಾವಳಿ ಹೆಚ್ಚಿದೆ. ನೋಟ್‌ ಬ್ಯಾನ್‌  ಸಂಕಷ್ಟ ಅನುಭವಿಸಿದ್ದ ಜನರೀಗ ನಕಲಿ ನೋಟುಗಳಿಗೆ ಭಯ ಪಡುವಂತಾಗಿದೆ. ತಾಲೂಕಿನಲ್ಲಿ ಇತ್ತೀಚೆಗೆ 2000 ರೂ. ಮುಖಬೆಲೆಯ ನಕಲಿ ನೋಟುಗಳು ಎಗ್ಗಿಲ್ಲದೆ ಚಲಾವಣೆ ಆಗುತ್ತಿವೆ. ದೊಡ್ಡ
ಮೊತ್ತದ ನೋಟುಗಳನ್ನು ನೀಡಿದರೆ ಸ್ವೀಕರಿಸಲು ಜನ ಹಿಂದೆ-ಮುಂದೆ ನೋಡುತ್ತಾರೆ. ಜನನಿಬಿಡ ಪ್ರದೇಶಗಳಲ್ಲಿ ವ್ಯಾಪಾರ- 
ವಹಿವಾಟು ಜೋರಾಗಿರುವುದರಿಂದ ಎಷ್ಟೇ ಎಚ್ಚರಿಕೆ ವಹಿಸಿದರೂ ನಕಲಿ ನೋಟುಗಳ ಹಾವಳಿ ತಡೆಗಟ್ಟುವುದು ಸಾಧ್ಯವಾಗಿಲ್ಲ.
ನೋಟಿನ ಕಂತೆಗಳ ಮಧ್ಯೆ ಐದಾರು ನಕಲಿ ನೋಟುಗಳು ಸೇರಿರುತ್ತವೆ. ಇಂತಹ ನೋಟುಗಳು ಬಂದಾಗ ಸುಮ್ಮನೆ ಇಲ್ಲದ
ಕಿರಿಕಿರಿ ಏಕೆಂದು ವರ್ತಕರು ಅವುಗಳನ್ನು ಹರಿದು ಹಾಕುತ್ತಿದ್ದಾರೆ.

ಕಲರ್‌ ಝರಾಕ್ಸ್‌: ಪಟ್ಟಣದ ವರ್ತಕರೊಬ್ಬರು 1 ಲಕ್ಷ ರೂ.ಗಳನ್ನು ಬ್ಯಾಂಕ್‌ಗೆ ತುಂಬಲು ಹೋದಾಗ 2000 ಮುಖಬೆಲೆಯ ಎರಡು ಕಲರ್‌ ಝೆರಾಕ್ಸ್‌ ಮಾಡಿದ ನೋಟುಗಳು ಪತ್ತೆಯಾಗಿವೆ. ಕೆಲವರು ಇದನ್ನೇ ದಂಧೆಯಾಗಿ ಮಾಡಿಕೊಂಡು, ಚಲಾವಣೆಗೆ ವ್ಯವಸ್ಥಿತ
ಸಂಚು ರೂಪಿಸಿದ್ದಾರೆ. ಇದರಿಂದ ಅಮಾಯಕರು ಸಂಕಷ್ಟ ಸಂಕಷ್ಟ  ಅನುಭವಿಸುವಂತಾಗಿದೆ. ಇಂತಹ ನೋಟುಗಳು ಬಂದರೆ ಜನತೆ ಪೊಲೀಸರಿಗೆ ಮಾಹಿತಿ ನೀಡಬೇಕು. ನಕಲಿ ನೋಟುಗಳ ಹಾವಳಿ ತಡೆಗೆ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next