Advertisement

ಎಫ್ಡಿಐ ಶೇ.3 ಹೆಚ್ಚಳ

06:00 AM Jun 09, 2018 | Team Udayavani |

ಹೊಸದಿಲ್ಲಿ: ದೇಶದಲ್ಲಿ ಉದ್ದಿಮೆಗೆ ಉತ್ತೇಜನ ಹಾಗೂ ನಿಯಮಾವಳಿಗಳ ಸಡಿಲಿಕೆಯಿಂದಾಗಿ 2017-18ರಲ್ಲಿ ವಿದೇಶಿ ನೇರ ಬಂಡವಾಳ(ಎಫ್ಡಿಐ) ಹೂಡಿಕೆ ಪ್ರಮಾಣವು ಶೇ.3ರಷ್ಟು ಹೆಚ್ಚಳವಾಗಿದೆ ಎಂದು ಸರಕಾರ ಮಾಹಿತಿ ನೀಡಿದೆ. ಹಿಂದಿನ ವಿತ್ತೀಯ ವರ್ಷದಲ್ಲಿ ಎಫ್ಡಿಐ ಹರಿವು 60 ಶತಕೋಟಿ ಡಾಲರ್‌ ಆಗಿದ್ದರೆ, 2017-18ರಲ್ಲಿ ಇದು 61.96 ಶತಕೋಟಿ ಡಾಲರ್‌ ಆಗಿದೆ. ಪ್ರಧಾನಿ ಮೋದಿ ನೇತೃತ್ವದ ಸರಕಾರದ 4 ವರ್ಷಗಳ ಅವಧಿಯಲ್ಲಿ ವಿದೇಶಿ ಹೂಡಿಕೆ 222.75 ಶತಕೋಟಿ ಡಾಲರ್‌ಗೆ ಜಿಗಿದಿದೆ. ಅದಕ್ಕೂ ಮೊದಲಿನ 4 ವರ್ಷ ಇದು 152 ಶತಕೋಟಿ ಡಾಲರ್‌ ಆಗಿತ್ತು ಎಂದು ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ ಕಾರ್ಯದರ್ಶಿ ರಮೇಶ್‌ ಅಭಿಶೇಕ್‌  ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next