Advertisement

ಎಫ್ ಬಿ ಭದ್ರತೆಗೆ ಸೌಲಭ್ಯ

08:08 AM May 13, 2018 | Team Udayavani |

ವಾಷಿಂಗ್ಟನ್‌/ಹೊಸದಿಲ್ಲಿ: ಭಾರತ ಸರಕಾರದೊಂದಿಗೆ ಕೈಜೋಡಿಸಿ ಚುನಾವಣಾ ಏಕತೆಗಾಗಿ ಸೇವೆ ಸಲ್ಲಿಸುತ್ತಿರುವ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ರಾಜಕೀಯ ನೇತಾರರಿಗಾಗಿ ಹಾಗೂ ರಾಜಕೀಯ ಪಕ್ಷಗಳ ಫೇಸ್‌ಬುಕ್‌ ಖಾತೆ ಅಥವಾ ಪುಟಗಳಿಗಾಗಿ “ಸೈಬರ್‌ ತ್ರೆಟ್ಸ್‌ ಕ್ರೈಸಿಸ್‌’ ಎಂಬ ಇ-ಮೇಲ್‌ ಹಾಟ್‌ ಲೈನ್‌ ಸೌಲಭ್ಯವನ್ನು ಅನುಷ್ಠಾನಕ್ಕೆ ತಂದಿದೆ. 

Advertisement

ರಾಜಕೀಯ ನೇತಾರರ ಫೇಸ್‌ಬುಕ್‌ ಖಾತೆಗಳಲ್ಲಿನ ಮಾಹಿತಿಗಳಿಗೆ ಭದ್ರತೆ ನೀಡಲು ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಂ ಎಂಬ ಸಂಸ್ಥೆಯೊಂದನ್ನು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಝುಕರ್‌ ಬರ್ಗ್‌ ಹುಟ್ಟುಹಾಕಿದ್ದಾರೆ. ಈ ಸಂಸ್ಥೆಯಡಿಯಲ್ಲೇ, ಸೈಬರ್‌ ತ್ರೆಟ್ಸ್‌ ಕ್ರೈಸಿಸ್‌ ಹಾಟ್‌ಲೈನ್‌ ಸೌಲಭ್ಯ ನೀಡಲಾಗಿದೆ.  

ಈ ಸೌಲಭ್ಯದಿಂದ, ಯಾವುದೇ ರಾಜಕೀಯ ನೇತಾರರ, ಪಕ್ಷಗಳ ಖಾತೆಗಳಲ್ಲಿನ ಮಾಹಿತಿ ಸೋರಿಕೆಯಾದ ಅನುಮಾನವಿದ್ದಲ್ಲಿ ಅದನ್ನು indiacyberthreats@fb.com ಗೆ ಇ-ಮೇಲ್‌ ಕಳುಹಿಸುವ ಮೂಲಕ ಫೇಸ್‌ ಬುಕ್‌ ಸಂಸ್ಥೆಯ ಗಮನಕ್ಕೆ ತರಬಹುದು. ಅಲ್ಲದೆ, ಫೇಸ್‌ಬುಕ್‌ ಖಾತೆ ಅಥವಾ ಪೇಜ್‌ಗಳಿಗೆ ಅನ್ಯರು ಕಾನೂನುಬಾಹಿರವಾಗಿ ಲಗ್ಗೆ ಹಾಕುವುದನ್ನು ತಪ್ಪಿಸಲು ಯಾವುದೇ ಖಾತೆ/ಪುಟಕ್ಕೆ 2 ಹಂತದ ದೃಢೀಕರಣ (ಅಥೆಂಟಿಕೇಶನ್‌) ದಂಥ ಹೊಸ ಭದ್ರತೆ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next