Advertisement

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

12:30 AM Apr 25, 2024 | Team Udayavani |

ಹುಬ್ಬಳ್ಳಿ: ನೇಹಾ ಹಿರೇಮಠ ಹಂತಕ ಫಯಾಜ್‌ನನ್ನು ಸಿಐಡಿ ಪೊಲೀಸರು ಬುಧವಾರ ವಶಕ್ಕೆ ಪಡೆದು, ಸುಮಾರು ಮೂರೂವರೆ ತಾಸು ಘಟನ ಸ್ಥಳದ ಮಹಜರು ಮಾಡಿ ಪ್ರಕರಣಕ್ಕೆ ಸಂಬಂಧಿಸಿ ಕೆಲವು ಮಾಹಿತಿ ಕಲೆ ಹಾಕಿದರು.

Advertisement

ಅಪರಾಧ ಕೃತ್ಯ ನಡೆದ ಇಲ್ಲಿನ ವಿದ್ಯಾನಗರದ ಕಾಲೇಜಿಗೆ ಹಂತಕ ನನ್ನು ಕರೆದುಕೊಂಡು ಬಂದು ಮಹಜರು ಆರಂಭಿಸಿದರು. ಕೃತ್ಯ ನಡೆದ ಸ್ಥಳದ ಸುತ್ತಲೂ ಅಳವಡಿಸಿದ್ದ ಸಿಸಿ ಕೆಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದರು.

ಮಹಜರು ವೇಳೆ ಫಯಾಜ್‌, ನೇಹಾಳನ್ನು ಕೊಲೆ ಮಾಡುವ ಉದ್ದೇಶ ದಿಂದ ಮೊದಲೇ ಚಾಕು ಖರೀದಿ ಮಾಡಿಕೊಂಡು ಬ್ಯಾಗ್‌ ನಲ್ಲಿಟ್ಟು ಕೊಂಡು ಅವಳ ಹತ್ಯೆಗೆ ಸಂಚು ರೂಪಿಸಿದ್ದೆ. ಎ. 18ರಂದು ನೇಹಾಳ ಬರುವಿಕೆಗಾಗಿ ಸುಮಾರು ಒಂದೂವರೆ ತಾಸು ಕಾಯ್ದು ಕೊಂಡು ನಿಂತಿದ್ದೆ. ಅವಳು ಪರೀಕ್ಷೆ ಮುಗಿಸಿಕೊಂಡು ಬರು ತ್ತಿದ್ದಂತೆ ಅವಳ ಹಿಂದೆ ಹೋಗಿ ಮಾತನಾಡಿಸಿದರೂ ಸ್ಪಂದಿಸ ದಿದ್ದಾಗ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಗಿ ಸಿಐಡಿ ಅಧಿಕಾರಿಗಳಿಗೆ ಫಯಾಜ್‌ ಮಾಹಿತಿ ಹಂಚಿಕೊಂಡಿದ್ದಾನೆಂದು ಹೇಳಲಾಗುತ್ತಿದೆ.

ಎಬಿವಿಪಿಯಿಂದ ಸಿಐಡಿ ಕಾರಿಗೆ ಮುತ್ತಿಗೆ ಯತ್ನ
ಆರೋಪಿ ಫಯಾಜ್‌ನನ್ನು ಸ್ಥಳ ಮಹಜರು ಮಾಡಲು ಸಿಐಡಿ ಅಧಿಕಾರಿಗಳು ಬಿವಿಬಿ ಕಾಲೇಜಿಗೆ ಕರೆದೊಯ್ಯುವಾಗ ಎಬಿವಿಪಿ ಕಾರ್ಯಕರ್ತರು ಪ್ರತಿ ಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಫಯಾಜ್‌ನನ್ನು ಕರೆದುಕೊಂಡು ಹೋಗುತ್ತಿದ್ದ ಕಾರಿಗೆ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದರು. ಈ ವೇಳೆ ಪರಸ್ಪರ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಇಲ್ಲದಿದ್ದರೆ ಆರೋಪಿಯನ್ನು ನಮ್ಮ ಕೈಗೆ ಒಪ್ಪಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಕಾರಾಗೃಹದಿಂದ ಸಿಐಡಿ ಪೊಲೀಸರ ವಶಕ್ಕೆ
ಧಾರವಾಡ: ನೇಹಾ ಹಿರೇಮಠ ಹತ್ಯೆ ಆರೋಪಿ ಫಯಾಜ್‌ನನ್ನು ಸಿಐಡಿ ಅಧಿಕಾರಿಗಳು ಜೈಲಿನಿಂದ ವಶಕ್ಕೆ ಪಡೆದರು. ಕೊಲೆಯಾದ ಅನಂತರ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಫಯಾಜ್‌ನನ್ನು ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಬುಧವಾರ ಬೆಳಗ್ಗೆಯೇ ಕಾರಾಗೃಹಕ್ಕೆ ಬಂದ ಸಿಐಡಿ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದರು. ಕೇಂದ್ರ ಕಾರಾಗೃಹಕ್ಕೆ ವೈದ್ಯರನ್ನು ಕರೆಯಿಸಿಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿದರು. ಅನಂತರ ಐದು ವಾಹನಗಳಲ್ಲಿ ಸೂಕ್ತ ಬಂದೋಬಸ್ತ್ ಮಧ್ಯೆ ಫಯಾಜ್‌ನನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೆ ಕರೆದುಕೊಂಡು ಹುಬ್ಬಳ್ಳಿಯತ್ತ ತೆರಳಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next