Advertisement

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

04:46 PM Jul 03, 2024 | Team Udayavani |

ಮುಂಬಯಿ: ಪಾಕಿಸ್ತಾನದ ಕಲಾವಿದರು ಮತ್ತೊಮ್ಮೆ ಬಾಲಿವುಡ್‌ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 8 ವರ್ಷದ ಬಳಿಕ ಪಾಕ್‌ ಚಿತ್ರರಂಗದ ಖ್ಯಾತ ನಟರೊಬ್ಬರು ಮತ್ತೆ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

ನಟ ಫವಾದ್ ಖಾನ್ 8 ವರ್ಷದ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ವಾಣಿ ಕಪೂರ್‌ ಅವರೊಂದಿಗಿನ ಸಿನಿಮಾದಲ್ಲಿ ಫವಾದ್‌ ಖಾನ್‌ ಬಾಲಿವುಡ್‌ ಗೆ ಕಂಬ್ಯಾಕ್‌ ಮಾಡಲಿದ್ದಾರೆ.

ಈಗಾಗಲೇ ಈ ಸಿನಿಮಾದ ಪ್ರೀ ಪ್ರೊಡಕ್ಷನ್‌ ಕೆಲಸಗಳು ಮುಕ್ತಾಯ ಕಂಡಿದ್ದು, ಶೀಘ್ರದಲ್ಲಿ ಲಂಡನ್‌ ನಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದೆ ಎಂದು ವರದಿಯಾಗಿದೆ.

ಫವಾದ್‌ ಖಾನ್‌ ಈ ಹಿಂದೆ ಬಾಲಿವುಡ್‌ ನ ‘ಏ ದಿಲ್ ಹೈ ಮುಷ್ಕಿಲ್’ ಮತ್ತು ‘ಕಪೂರ್ ಅಂಡ್ ಸನ್ಸ್ʼ ಸಿನಿಮಾದಲ್ಲಿ ನಟಿಸಿದ್ದರು.

2016ರಲ್ಲಿ ಉರಿ ದಾಳಿಯ ನಂತರ ನಟರು, ನಟಿಯರು, ಗಾಯಕರು, ಸಂಗೀತಗಾರರು ಸೇರಿದಂತೆ ಪಾಕಿಸ್ತಾನಿ ಕಲಾವಿದರನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಆ ಬಳಿಕ 2023ರಲ್ಲಿ ಈ ನಿಷೇಧವನ್ನು  ಬಾಂಬೆ ಹೈಕೋರ್ಟ್‌ ತೆರವುಗೊಳಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next